ಕಾರವಾರ: ಸಿಆರ್ಝೆಡ್ ಕಾನೂನಿನಲ್ಲಿ ಕಾರವಾರ ಮತ್ತು ಕುಂದಾಪುರ ಕರಾ ವಳಿ ಪ್ರದೇಶಗಳನ್ನು ವಿಶೇಷ ಸೂಕ್ಷ್ಮ ಪ್ರದೇಶಗಳನ್ನಾಗಿ ಪರಿಗಣಿಸಲಾಗಿದೆ ಎಂದು ಉಡುಪಿ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಿಆರ್ನ ಪ್ರಭಾರ ಪ್ರಾದೇಶಿಕ ನಿರ್ದೇಶಕ (ಪರಿಸರ) ಟಿ. ಬಾಲಚಂದ್ರ ಹೇಳಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಸದಸ್ಯರಿಗಾಗಿ ಏರ್ಪಡಿ ಸಲಾಗಿದ್ದ ಸಿಆರ್ ಕಾನೂನು ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಅಭಿವೃದ್ಧಿ ನಿಷೇಧ ಪ್ರದೇಶದಲ್ಲಿ ಹೊಸ ನಿರ್ಮಾಣಕ್ಕೆ ಅವಕಾಶವಿಲ್ಲ. ಆದರೆ, ಅಧಿಕೃತ ಕಟ್ಟಡಗಳ ಪುನರ್ ನಿರ್ಮಾಣ, ಮಂಜುಗಡ್ಡೆ ಸ್ಥಾವರ ಸ್ಥಾಪನೆ ಅಥವಾ ವಿಸ್ತರಣೆ, ಹರಾಜು ಕಟ್ಟೆಗಳು, ಸಾಂಪ್ರದಾಯಿಕ ದೋಣಿ ನಿರ್ಮಾಣ ಕೇಂದ್ರಗಳಿಗೆ ಅವಕಾಶ ವಿರುತ್ತದೆ ಎಂದರು.

ಸೂಕ್ಷ್ಮ ಹಾಗೂ ಪ್ರಾಮುಖ್ಯ ಜೀವ ಪರಿಸರ ವ್ಯವಸ್ಥೆಯಿರುವ ಪ್ರದೇಶಗಳು ಹಾಗೂ ಉಬ್ಬರ ಮತ್ತು ಇಳಿತದ ನಡುವಿನ ಭಾಗಳಗಳು ವಲಯ ಒಂದರಲ್ಲಿ ಬರುತ್ತದೆ .ಸಾಗರ ಉದ್ಯಾನಗಳು, ಕಾಂಡ್ಲಾ, ಮೀನು ಸಂತಾನೋತ್ಪತ್ತಿ ಮಾಡುವ ಪ್ರದೇಶಗಳು, ಸಂರಕ್ಷಿತ ಧಾಮಗಳು, ರಾಷ್ಟ್ರೀಯ ಉದ್ಯಾನ ಗಳು, ಸೌಂದರ್ಯ ತಾಣಗಳು, ಐತಿಹಾಸಿಕ ಮತ್ತು ಪರಂಪರೆಯ ದೃಷ್ಟಿ ಯಿಂದ ಮಹತ್ವದ್ದಾಗಿರುವ ಸ್ಥಳಗಳು ಇದರ ವ್ಯಾಪ್ತಿಗೆ ಬರುತ್ತದೆ ಎಂದರು.

ಅಣು ವಿದ್ಯುತ್ ಯೋಜನೆಗಳು, ಸಂಸ್ಕರಿತ ತ್ಯಾಜ್ಯ, ಅನಿಲ, ತೈಲ, ಸಮುದ್ರ ತೀರದ ಬಂದರಿಗೆ ಬೇಕಾಗುವ ಸೌಕರ್ಯಗಳು, ನೈಸರ್ಗಿಕ ಅನಿಲ ಅನ್ವೇಷಣೆ ಮತ್ತು ತೆಗೆಯುವಿಕೆ ಇತ್ಯಾದಿಗಳ ಹೊರತಾಗಿ ಇನ್ಯಾವುದೇ ನಿರ್ಮಾಣ ಕಾರ್ಯಕ್ಕೆ ಅಲ್ಲಿ ಅವಕಾಶ ವಿಲ್ಲ ಎಂದು ಬಾಲಚಂದ್ರ ನುಡಿದರು.

ಸಮುದ್ರ ತೀರದವರೆಗೆ ಸಾಕಷ್ಟು ಅಭಿವೃದ್ಧಿ ಹೊಂದಿರುವ ಮತ್ತು ಸಂಪರ್ಕ, ರಸ್ತೆ, ಒಳಚರಂಡಿ, ನೀರು ಸರಬರಾಜು ಮುಂತಾದ ಮೂಲ ಸೌಕರ್ಯಗಳನ್ನು ಹೊಂದಿರುವ ಪ್ರದೇಶಗಳು ವಲಯ -2ರಲ್ಲಿ ಬರುತ್ತದೆ. ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿಯಾಗದೇ ಇರುವ ವಲಯ-1ಮತ್ತು 2 ಹೊರತಾಗಿರುವ ಪ್ರದೇಶಗಳು ವಲಯ -3ರಲ್ಲಿ ಬರುತ್ತದೆ ಎಂದರು.

ನೂತನ ಕಟ್ಟಡ ನಿರ್ಮಾಣಕ್ಕಾಗಿ ಮಾಲೀಕತ್ವದ ದಾಖಲೆ, ಸ್ಥಳದ ಸರ್ವೇ ನಕ್ಷೆ, ಜಾಗದ ಸರ್ವೇ ನಂಬರಿನ ಸಂಪೂರ್ಣ ಎಫ್.ಎಮ್.ಬಿ.ನಕ್ಷೆ, ಅನುಬಂಧ-4ರಲ್ಲಿ ನಮೂನೆ-1, ತ್ಯಾಜ್ಯ ವಿಸರ್ಜನೆ ಬಗ್ಗೆ ಬದ್ಧತೆ ಪತ್ರ, ಸಿಆರ್-2ರಲ್ಲಿದ್ದರೆ ಸಮುದ್ರ, ಹೊಳೆ ಸಮೀಪದಲ್ಲಿರುವ ಅಧಿಕೃತ ರಸ್ತೆ, ಅಧಿಕೃತ ಕಟ್ಟಡ, 1991ರ ಮೊದಲಿದ್ದ ಬಗ್ಗೆ ಸಂಬಂಧಿತ ಇಲಾಖೆ ಯಿಂದ ನಿರ್ಮಾಣ ವರ್ಷದ ಕುರಿತು ದಾಖಲೆ ಮತ್ತು ದೃಢೀಕರಣಗಳನ್ನು ನೀಡಬೇಕು. ಈ ಕುರಿತು ಎಲ್ಲ ಗ್ರಾ.ಪಂ.ಗೆ ಸೂಚನೆ ನೀಡಲಾಗಿದೆ ಎಂದರು. ಜಿಪಂ ಅಧ್ಯಕ್ಷೆ ಸುಮಾ ಲಮಾಜಿ, ಉಪಾಧ್ಯಕ್ಷ ಉದಯ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೃಷ್ಣ ಗೌಡ, ಜಯಶ್ರೀ ಮೊಗೇರ ಉಪಸ್ಥಿತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.