ಶುಕ್ರವಾರ, ಮೇ 7, 2021
24 °C

ಬಗ್ಗಡ ನೀರು ಪೂರೈಕೆ: ರೋಗ ಭೀತಿಯ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಜಾಜೂರು: ಗ್ರಾಮಕ್ಕೆ ಕುಡಿಯಲು ವಿತರಣೆ ಆಗುತ್ತಿರುವ ನೀರು ಸಂಪೂರ್ಣವಾಗಿ ಮಲಿನವಾಗಿದೆ. ಈ ನೀರಿನಿಂದ ರೋಗ ಹರಡುವ ಭೀತಿ ಗ್ರಾಮದ ಜನರನ್ನು ಕಾಡುತ್ತಿದೆ.ಸೂಳೆಕೆರೆಯಿಂದ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಆಗುತ್ತಿದ್ದು, ಕಳೆದ ಮೂರ‌್ನಾಲ್ಕು ದಿನಗಳಿಂದ ನೀರಿನ ಬಣ್ಣ ಸಂಪೂರ್ಣವಾಗಿ ಕೆಸರಿನ ಬಗ್ಗಡಾಗಿ ಕಾಣುತ್ತಿದೆ. ಇದರಿಂದಾಗಿ ಗ್ರಾಮದ ಜನರಿಗೆ ಇಂತಹ ನೀರನ್ನು ಮಕ್ಕಳಿಗೆ ಹೇಗೆ ಕುಡಿಸುವುದು? ಇದರಿಂದ ಏನದರೂ ರೋಗಾಣುಗಳು ಹರಡಿದರೆ, ಮಕ್ಕಳ ಗತಿ ಏನು ಎಂಬ ಆತಂಕ ಕಾಡತೊಡಗಿದೆ. ಮಕ್ಕಳೂ ಸಹ ನೀರನ್ನು ಕುಡಿಯಲು ಹಿಂಜರಿಯುತ್ತಿದ್ದಾರೆ. ಗ್ರಾಮ ಪಂಚಾಯ್ತಿಯವರನ್ನು ಕೇಳಿದರೆ, ಮಳೆಗಾಲವಾಗಿರುವುದರಿಂದ ಇಂತಹ ನೀರು ಬರುತ್ತಿದೆ ಎಂಬ ಉತ್ತರ ಹೇಳುತ್ತಿದ್ದಾರೆ.ಹೊಳಲ್ಕೆರೆ ತಾಲ್ಲೂಕಿನ ಹಲವು ಗ್ರಾಮಗಳಿಗೆ ಸರಬರಾಜು ಆಗುತ್ತಿರುವ ನೀರು ಸಮೀಪದ ಹಿರೇಕಂದವಾಡಿ ಗ್ರಾಮದ ಶುದ್ಧೀಕರಣ ಘಟಕದಲ್ಲಿ ಶುದ್ಧಿಯಾಗಿ ನಂತರ ಗ್ರಾಮಗಳಿಗೆ ಪೂರೈಕೆ ಆಗುತ್ತದೆ. ಆದರೆ, ಅಲ್ಲಿಂದ ಬರುತ್ತಿರುವ ನೀರು ಶುದ್ಧೀಕರಣವಾಗಿದೆಯೇ? ಎಂಬ ಸಂಶಯ ಎಲ್ಲಾ ಗ್ರಾಮಗಳ ಜನರನ್ನು ಕಾಡುತ್ತಿದೆ.ಇಂತಹ ನೀರನ್ನು ಕುಡಿಯುವುದರಿಂದ ಹಲವಾರು ರೋಗಗಳು ಹರಡುವುದಾಗಿ ವೈದ್ಯರು ಹೇಳುತ್ತಿದ್ದು, ನೀರನ್ನು ಶುದ್ಧೀಕರಿಸಿ (ಫಿಲ್ಟರ್ ಮಾಡಿ) ನಂತರ ಕಾಯಿಸಿ ಕುಡಿಯುವುದು ಸೂಕ್ತ ಎಂದು ಹೇಳುತ್ತಾರೆ. ಆದರೆ, ಬಡವರು ಫಿಲ್ಟರನ್ನು ಕೊಳ್ಳಲು ಎಲ್ಲಿಂದ ಸಾಧ್ಯ.ಜಿಲ್ಲಾಡಳಿತ ತಕ್ಷಣವೇ ಶುದ್ಧೀಕರಣ ಘಟಕದಲ್ಲಿನ ಫಿಲ್ಟರ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಿ ಶುದ್ಧೀಕರಿಸಲ್ಪಟ್ಟ ನೀರನ್ನು ಜನರಿಗೆ ಪೂರೈಕೆ ಮಾಡಬೇಕು ಎಂಬುದು ಎಲ್ಲಾ ಗ್ರಾಮದ ಜನರ ಆಗ್ರಹ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.