ಬುಧವಾರ, ಮೇ 18, 2022
24 °C

ಬಜೆಟ್: ವಿಹಂಗಮ ನೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿ

* 130 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ಗುರಿ.

* ಹನಿ ನೀರಾವರಿ ಅಳವಡಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರೈತರಿಗೆ ಶೇ 90 ಹಾಗೂ ಇತರರಿಗೆ ಶೇ 75 ಸಹಾಯ ಧನ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಸೌಲಭ್ಯ.

* ಸಾವಯವ ಕೃಷಿ ಯೋಜನೆ ಹೋಬಳಿ ಮಟ್ಟಕ್ಕೆ ವಿಸ್ತರಣೆ.

* ಇಕ್ರಿಸ್ಯಾಟ್  ನೇತೃತ್ವದಲ್ಲಿ ಪ್ರತಿ ಕಂದಾಯ ವಿಭಾಗದ ಒಂದು ಜಿಲ್ಲೆಯಲ್ಲಿ ಸಂಶೋಧನೆ ಆಧಾರಿತ ಕೃಷಿ ಪದ್ಧತಿ ಅನುಷ್ಠಾನ.

* ಐದು ಅಶ್ವಶಕ್ತಿವರೆಗೆ ಸೌರಶಕ್ತಿ ಚಾಲಿತ ನೀರಾವರಿ ಪಂಪ್‌ಸೆಟ್‌ಗಳನ್ನು ಒದಗಿಸುವ ಯೋಜನೆ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ತಲಾ ಒಂದು ಜಿಲ್ಲೆಯಲ್ಲಿ ಜಾರಿ.

* ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕೃಷಿ ವಿಷಯದ ಅಳವಡಿಕೆ.

* ಹೊಸತಳಿ ಆವಿಷ್ಕಾರ ಹಾಗೂ ತಂತ್ರಜ್ಞಾನ ಸುಧಾರಣೆ ಕುರಿತ ಅಧ್ಯಯನಕ್ಕಾಗಿ ಕೃಷಿ ವಿ.ವಿಗಳಿಗೆ 5 ಕೋಟಿ.

* ಮೈಸೂರು ಮತ್ತು ರಾಯಚೂರಿನಲ್ಲಿ ವೈಜ್ಞಾನಿಕ ವರ್ಗೀಕರಣ ಕೇಂದ್ರಕ್ಕೆ 3.5 ಕೋಟಿ.

* 100 ಕೇಂದ್ರಗಳಲ್ಲಿ ಉಗ್ರಾಣ ಆಧಾರಿತ ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶ ಕಲ್ಪಿಸಲು 5 ಕೋಟಿ

* ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿ ವರದಿ ಪ್ರಸಕ್ತ ವರ್ಷ ಜಾರಿ.

* ರೈತರಿಗೆ ಹೊಸ ತಂತ್ರಜ್ಞಾನ ಕುರಿತು ಮಾಹಿತಿ ಒದಗಿಸಲು ಏಕಗವಾಕ್ಷಿ ಯೋಜನೆ.

* ಬಿತ್ತನೆ ಬೀಜ ಸ್ವಂತ ಅಭಿವೃದ್ಧಿ ಮಾಡಿಕೊಳ್ಳವ ರೈತರಿಗೆ ಉತ್ತೇಜನ; ಈ ಯೋಜನೆಗೆ 10 ಕೋಟಿ

* ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಕೃಷಿ ಯಂತ್ರೋಪಕರಣ ಹಾಗೂ ಕೃಷಿ ಸಂಸ್ಕರಣಾ ಘಟಕ ಸ್ಥಾಪನೆಗೆ ರೂ 150 ಕೋಟಿ.

* ಆಯ್ದ 4 ಜಿಲ್ಲೆಗಳಲ್ಲಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಜಾರಿ.

* ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಳೆಮಾಪನ ಕೇಂದ್ರ.ತೋಟಗಾರಿಕೆ

* ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನಲ್ಲಿ ಚಾಮರಾಜನಗರ ಜಿಲ್ಲೆ ಹೊಂಡರಬಾಳು ಗ್ರಾಮದಲ್ಲಿ ಸ್ಥಾಪಿಸಿರುವ `ಅಮೃತಭೂಮಿ' ಟ್ರಸ್ಟ್‌ಗೆ 5 ಕೋಟಿ.

* ಅಡಿಕೆ ತೋಟಗಳಲ್ಲಿ ಲಾಭದಾಯಕ ಪರ್ಯಾಯ ಬೆಳೆ ಕೃಷಿ ಪ್ರಾತ್ಯಕ್ಷಿಕೆಗೆ 2 ಕೋಟಿ.

* ದುಂಡಾಣು ರೋಗದ ಸಮಸ್ಯೆ ಎದುರಿಸುತ್ತಿರುವ ದಾಳಿಂಬೆ ಬೆಳೆಗಾರರಿಗೆ ಸಹಾಯಧನ ಒದಗಿಸಲು ರಾಜ್ಯದ ಪಾಲಿನ ಬಾಕಿ 12.5 ಕೋಟಿ ಬಿಡುಗಡೆ.ಪಶುಸಂಗೋಪನೆ

* ಬೀದರ್, ಶಿವಮೊಗ್ಗ ಮತ್ತು ಹಾಸನ ಪಶುವೈದ್ಯ ಕಾಲೇಜುಗಳು ಹಾಗೂ ಗುಲ್ಬರ್ಗ ಡೇರಿ ಕಾಲೇಜಿಗೆ ಮೂಲಸೌಕರ್ಯ ಒದಗಿಸಲು 73 ಕೋಟಿ.

* 391 ಪಶುವೈದ್ಯರು ಹಾಗೂ 642 ಪಶು ವೈದ್ಯಕೀಯ ಸಹಾಯಕರ ನೇಮಕ.

* ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಾನುವಾರು ಮತ್ತು ಕುಕ್ಕುಟ ಅಭಿವೃದ್ಧಿಗಾಗಿ 75 ಕೋಟಿ.

* ಪ್ರತಿ ಕಂದಾಯ ವಿಭಾಗದಲ್ಲಿ ಒಂದು ಪಶು ವೈದ್ಯಕೀಯ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಬೆಂಗಳೂರಿನ ದಂಡು ಪ್ರದೇಶದಲ್ಲಿ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ. ಂಗಳೂರಿನಲ್ಲಿ ಪಶುಭವನ ನಿರ್ಮಾಣ.

* ಎಮ್ಮೆ, ಕುರಿ, ಮೇಕೆ ತಳಿಗಳ ಸಂರಕ್ಷಣೆ ಹಾಗೂ ಕೃತಕ ಗರ್ಭಧಾರಣೆ ಕಾರ್ಯಕ್ರಮಕ್ಕೆ 2 ಕೋಟಿ.

* 174 ತಾಲ್ಲೂಕುಗಳಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳಿಗೆ ವಾಹನ ಒದಗಿಸಲು4.2 ಕೋಟಿ.ರೇಷ್ಮೆ

* ರೇಷ್ಮೆ ಗೂಡಿನ ಮಾರುಕಟ್ಟೆಗಳ ಆಧುನೀಕರಣಕ್ಕೆ 5 ಕೋಟಿ.

* ಕಚ್ಚಾ ರೇಷ್ಮೆ ಮೇಲೆ ಅದರ ಮೌಲ್ಯದ ಶೇ 70ರಷ್ಟು ಒತ್ತೆ ಸಾಲ.

* 3 ಎ.ಆರ್.ಎಂ. ಘಟಕಗಳ ಸ್ಥಾಪನೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಉಪಕರಣ ಖರೀದಿ ಹಾಗೂ ಶೆಡ್‌ಗಳ ನಿರ್ಮಾಣಕ್ಕೆ ನೆರವು.

* ಮೈಸೂರು ಜಿಲ್ಲೆಯಲ್ಲಿರುವ ರಾಜ್ಯ ರೇಷ್ಮೆ ಉದ್ಯಮಗಳ ನಿಗಮದ ಹಳೆಯ ಘಟಕಗಳ ಆಧುನೀಕರಣಕ್ಕೆ 5 ಕೋಟಿ.ಮೀನುಗಾರಿಕೆ

* ಮೀನುಗಾರಿಕೆ ಬಂದರು ಮತ್ತು ಇಳಿದಾಣ ಕೇಂದ್ರಗಳಲ್ಲಿ ಸಿವಿಲ್ ಕಾಮಗಾರಿಗಳ ಯೋಜನಾ ಅನುಷ್ಠಾನ ಘಟಕ ಸ್ಥಾಪನೆ.

* ಒಳನಾಡಿನ 2 ಸಾವಿರ ಮೀನುಗಾರರಿಗೆ ಫೈಬರ್ ಗ್ಲಾಸ್ ಹರಿಗೋಲು.

* ಮೀನುಗಾರರಿಗೆ ಉಚಿತವಾಗಿ ನೀಡುವ ಸಲಕರಣೆಗಳ ಕಿಟ್‌ನ ಮೌಲ್ಯ ಐದು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿಗೆ ಹೆಚ್ಚಳ.

* ಬಲೆ ದುರಸ್ತಿ ಶೆಡ್‌ಗಳ ನಿರ್ಮಾಣಕ್ಕೆ 2 ಕೋಟಿ.

* ಮೀನುಗಾರಿಕೆಯಲ್ಲಿ ತೊಡಗಿರುವ 5,000 ಮಹಿಳೆಯರಿಗೆ ಮಂಜುಗಡ್ಡೆ ಪೆಟ್ಟಿಗೆ ವಿತರಿಸಲು 2 ಕೋಟಿ.

* ಮೀನುಗಾರಿಕೆ ತಾಣಗಳ ಸಂಪರ್ಕ ರಸ್ತೆ ನಿರ್ಮಾಣಕ್ಕೆ 30 ಕೋಟಿ.

* ಮಂಗಳೂರು ಮೀನುಗಾರಿಕೆ ಕಾಲೇಜು ಅಭಿವೃದ್ಧಿಗೆ 4 ಕೋಟಿ.

* ಸಿಹಿನೀರು ಮೀನುಮರಿ ಬಿತ್ತನೆಗೆ 2 ಕೋಟಿ.

* ಮಂಗಳೂರಿನ ಕುಳಾಯಿ ಹಾಗೂ ಉಡುಪಿ ಜಿಲ್ಲೆ ಹೆಜಮಾಡಿ ಕೋಡಿಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ.

* ಭಟ್ಕಳ ಮತ್ತು ಕಾರವಾರ ಮೀನುಗಾರಿಕೆ ಬಂದರುಗಳಲ್ಲಿ ಧಕ್ಕೆಗಳ ವಿಸ್ತರಣೆ.

* ಏಳು ಅಳಿವೆಗಳಲ್ಲಿ ತಡೆಗೋಡೆಗಳ ನಿರ್ಮಾಣ.ಸಹಕಾರ

* ಸಹಕಾರ ಚುನಾವಣಾ ಆಯೋಗಕ್ಕೆ 3 ಕೋಟಿ.

* ಸಹಕಾರ ಸಂಸ್ಥೆಗಳಿಂದ ರಚನೆಯಾಗಿರುವ ಸ್ವಸಹಾಯ ಗುಂಪುಗಳಿಗೆ ಶೇ 4ರ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಮುಂದುವರಿಕೆ.

* ಪಿಕಾರ್ಡ್ ಬ್ಯಾಂಕ್‌ಗಳು, ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘಗಳು ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘಗಳ ಹೊಸ ಕಟ್ಟಡ ನಿರ್ಮಾಣ ಮತ್ತು ದುರಸ್ತಿಗೆ 10 ಕೋಟಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.