ನವದೆಹಲಿ (ಪಿಟಿಐ): ನಗರ ಪ್ರದೇಶದಲ್ಲಿ ಬಡವರ ನಿತ್ಯದ ಕನಿಷ್ಠ ತಲಾ ಖರ್ಚು 32 ರೂಪಾಯಿಗಳಿಗೂ ಹೆಚ್ಚಾಗಿದೆ ಎಂಬ ಕೂಗು ಕೇಳಿಬರುತ್ತಿರುವ ನಡುವೆಯೇ ಯೋಜನಾ ಆಯೋಗವು ದೇಶದಲ್ಲಿ ಬಡತನದ ಶೇಕಡಾವಾರು ಪ್ರಮಾಣ ಇಳಿಮುಖವಾಗುತ್ತಿದೆ ಎಂದು ಸೋಮವಾರ ಹೇಳಿದೆ.

ಯೋಜನಾ ಆಯೋಗದ ತೆಂಡೂಲ್ಕರ್ ಸಮಿತಿಯು ಬಡತನ ರೇಖೆ ಕುರಿತಂತೆ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ವ್ಯಕ್ತವಾಗಿದೆ ಎಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಈ ಸಮಿತಿ ಸದಸ್ಯರಾದ ಅರುಣ್ ಮೀರಾ ಸುದ್ದಿಗಾರರಿಗೆ ತಿಳಿಸಿದರು.

ಬಡವರು ಆರೋಗ್ಯದ ವಿಚಾರದಲ್ಲಿ, ಶಿಕ್ಷಣಕ್ಕಾಗಿ ಮತ್ತು ಪೌಷ್ಟಿಕಾಂಶ ಆಹಾರ ಸೇವನೆಗಾಗಿ ಮಾಡುವ ಖರ್ಚುಗಳನ್ನು ಈ ಅಧ್ಯಯನದಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಅದರಂತೆ ಬಡತನ ಶೇಕಾಡವಾರು ಪ್ರಮಾಣ ಇಳಿಮುಖವಾಗಿದೆ ಎಂದರು.

ನಗರ ಪ್ರದೇಶಗಳಲ್ಲಿ ಜೀವನ ನಡೆಸುವವರ ಗರಿಷ್ಠ ತಲಾ ಆದಾಯ 32 ರೂಪಾಯಿಗಳಷ್ಟಿದ್ದರೆ ಅಂತಹವರನ್ನು ಬಡವರೆಂದು ಗುರುತಿಸಬಹುದು ಎಂದು ಯೋಜನಾ ಆಯೋಗವು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.