ಶುಕ್ರವಾರ, ಫೆಬ್ರವರಿ 26, 2021
31 °C

ಬಡವರಿಗೆ ಮನೆ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಡವರಿಗೆ ಮನೆ ನೀಡಲು ಒತ್ತಾಯ

ಬಳ್ಳಾರಿ: ವಿವಿಧ ವಸತಿ ಯೋಜನೆಗಳಡಿ ಸ್ಥಳೀಯ ಬಡಜನತೆಗೆ ಅಗತ್ಯ ನಿವೇಶನ ಹಾಗೂ ಮನೆ ಒದಗಿಸಬೇಕು ಎಂದು ಆಗ್ರಹಿಸಿ ನಗರದ ವಿವಿಧ ಕೊಳೆಗೇರಿ ಹಾಗೂ ಬಡಾವಣೆಗಳಲ್ಲಿ ವಾಸಿಸುವ ಜನತೆ ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ನೇತೃತ್ವದಲ್ಲಿ   ಶುಕ್ರವಾರ ಪ್ರತಿಭಟನೆ ನಡೆಸಿದರು.ಸಂಘಟನೆ ಹಮ್ಮಿಕೊಂಡಿರುವ `ಸೂರಿಗಾಗಿ ಸಮರ' ಕಾರ್ಯಕ್ರಮದಡಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪಾಲಿಕೆ ಕಚೇರಿಗೆ ತೆರಳಿದ ಪ್ರತಿಭಟನಕಾರರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.ಕಳೆದ ನಾಲ್ಕೈದು ದಶಕಗಳಿಂದ ಮನೆ ಹಾಗೂ ನಿವೇಶನ ಇಲ್ಲದ ಬಡ ಜನರು ಬಾಡಿಗೆ ಮನೆಗಳಲ್ಲೇ ವಾಸಿಸುವಂತಾಗಿದೆ. ನಗರದ ವಿವಿಧೆಡೆ ಚರಂಡಿ, ಒಳಚರಂಡಿ, ಕಾಲುವೆಗಳು ಮತ್ತಿತರ ಅನಾರೋಗ್ಯಕರ ವಾತಾವರಣ ಇರುವ ಪ್ರದೇಶಗಳಲ್ಲಿ ಅನಿವಾರ್ಯವಾಗಿ ಗುಡಿಸಲು ಹಾಕಿಕೊಂಡು, ಚಿಕ್ಕಪುಟ್ಟ ಮನೆಗಳನ್ನು ಬಾಡಿಗೆಗೆ ಪಡೆದು ಬದುಕುತ್ತಿದ್ದಾರೆ. ಇವರಿಗೆಲ್ಲ ಮನೆ ಕಟ್ಟಿಸಿಕೊಡುವಂತೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವನಾಗಿಲ್ಲ ಎಂದು ಪ್ರತಿಭಟನಕಾರರು ದೂರಿದರು.ಸರ್ಕಾರ ಕೂಡಲೇ ಬಡ ಜನರಿಗೆ ಜೀವನಕ್ಕೆ ಅಗತ್ಯವಾಗಿರುವ ಮನೆಗಳನ್ನು ನಿರ್ಮಿಸಿಕೊಡಬೇಕು. ಎಲ್ಲ ವಾರ್ಡ್‌ಗಳಲ್ಲೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಘಟಕದ ಅಧ್ಯಕ್ಷ ಸಂಗನಕಲ್ಲು ಕಟ್ಟೆಬಸಪ್ಪ, ಉಪಾಧ್ಯಕ್ಷ ಹೊನ್ನಳ್ಳಿ ಈಶ್ವರ್, ಕೆ.ರವಿಕುಮಾರ್, ಕೊಳಗಲ್ ಎರಿಸ್ವಾಮಿ, ಅಂಜಿನಿ, ಶಂಕರಗೌಡ, ಪ್ರಭು, ಕೃಷ್ಣಮೂರ್ತಿ ಹಾಗೂ ನಗರದ ವಿವಿಧೆಡೆ ಜೀವಿಸವ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.