ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಡಿ.18ರಂದು ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಪ್ರಕಟಿಸಲಿದೆ.

ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ದರ (ಡಬ್ಲ್ಯುಪಿಐ) ನವೆಂಬರ್ನಲ್ಲಿ 14 ತಿಂಗಳ ಗರಿಷ್ಠ ಮಟ್ಟಕ್ಕೆ (ಶೇ7.52) ಏರಿಕೆ ಕಂಡಿರುವುದರಿಂದ ಈ ಬಾರಿಯೂ ಬಡ್ಡಿ ದರ ಕಡಿತ ಸಾಧ್ಯತೆ ಕ್ಷೀಣಿಸಿದೆ. ಹಣದುಬ್ಬರ ನಿಗ್ರಹಿಸಲು ‘ಆರ್ಬಿಐ’ ಮತ್ತೆ ಅಲ್ಪಾವಧಿ ಬಡ್ಡಿ ದರವಾದ ‘ರೆಪೊ’ ದರವನ್ನು ಶೇ 0.25ರಷ್ಟು ಹೆಚ್ಚಿಸಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

‘ಆಹಾರೇತರ ಸರಕುಗಳ ಹಣದುಬ್ಬರ ದರ ನವೆಂಬರ್ನಲ್ಲಿ ದಾಖಲೆ ಏರಿಕೆ ಕಂಡಿದೆ. ಇದರಿಂದ ‘ಆರ್ಬಿಐ’ ಡಿ.18ರ ಹಣಕಾಸು ನೀತಿಯಲ್ಲಿ ಖಂಡಿತ ಬಡ್ಡಿ ದರವನ್ನು ಶೇ 0.25ರಷ್ಟು ಹೆಚ್ಚಿಸಲಿದೆ. ಇದರಿಂದ ರೆಪೊ ದರ ಶೇ 8ಕ್ಕೆ ಜಿಗಿಯಲಿದೆ’ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ ‘ಕ್ರಿಸಿಲ್’ ಹೇಳಿದೆ.

‘ಆರ್ಬಿಐ ಈ ಬಾರಿ ಬಡ್ಡಿ ದರವನ್ನು ಶೇ 0.25ರಷ್ಟು ಹೆಚ್ಚಿಸುವುದು ನಿರೀಕ್ಷಿತ. ಆದರೆ, ಶೇ 0.50ರಷ್ಟು ಏರಿಕೆ ಮಾಡುವ ಸಾಧ್ಯತೆ ಕಡಿಮೆ’ ಎಂದು ಆಕ್ಸಿಸ್ ಬ್ಯಾಂಕಿನ ಮುಖ್ಯ ಅರ್ಥಶಾಸ್ತ್ರಜ್ಞ ಸುಗತಾ ಭಟ್ಟಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

‘ಉತ್ತಮ ಮುಂಗಾರು ಲಭಿಸಿರುವುದರಿಂದ ಮತ್ತು ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿರುವುದರಿಂದ ಮುಂಬರುವ ತಿಂಗಳಲ್ಲಿ ಹಣದುಬ್ಬರ ಕುಸಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ‘ಆರ್ಬಿಐ’ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಉತ್ತಮ’ ಎಂದು ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಅಧ್ಯಕ್ಷ ಎಂ ನರೇಂದ್ರ ಅಭಿಪ್ರಾಯಪಟ್ಟಿದ್ದಾರೆ.

‘ಆಹಾರ ಪೂರೈಕೆ ಭಾಗದಲ್ಲಿನ ಲೋಪಗಳನ್ನು ಸರಿಪಡಿಸದ ಹೊರತು ಹಣದುಬ್ಬರ ತಗ್ಗುವುದಿಲ್ಲ. ಹಣದುಬ್ಬರ ಹೆಚ್ಚಳವು ಆರ್ಥಿಕ ಆರೋಗ್ಯವನ್ನು ಹದಗೆಡಿಸುತ್ತದೆ. ಸರ್ಕಾರ ಇದರೆಡೆಗೆ ಹೆಚ್ಚಿನ ಗಮನ ಹರಿಸಬೇಕು’ ಎಂದು ‘ಎಚ್ಎಸ್ಬಿಸಿ’ ಬ್ಯಾಂಕಿನ ಮುಖ್ಯ ಅರ್ಥಶಾಸ್ತ್ರಜ್ಞ ಲಿಫ್ ಲೈಬೇಕರ್ ಹೇಳಿದ್ದಾರೆ.

‘ಈ ಬಾರಿ ಶೇ 0.25ರಷ್ಟು ಬಡ್ಡಿ ದರ ಏರಿಕೆ ನಿರೀಕ್ಷಿತ. ಇದರ ಜತೆಗೆ ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್ಎಫ್) ದರದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು’ ಎಂದು ಬ್ಯಾಂಕ್ ಆಫ್ ಅಮೆರಿಕ ಮೆರಿಲ್ಲಿಂಚ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.