ಶುಕ್ರವಾರ, 7 ನವೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ದೂರ ಸಂಚಾರದಲ್ಲಿ ಕಾರ್ಯಾನುಕೂಲ ತೋರಿಬಂದು ಮಾನಸಿಕ ನೆಮ್ಮದಿ
Published 6 ನವೆಂಬರ್ 2025, 22:40 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನೀತಿ ನಿಯಮಗಳಿಗೆ ಬದ್ಧರಾದರೆ, ಉದ್ಯೋಗದಲ್ಲಿ ಹೆದರುವ ಅವಶ್ಯಕತೆ ಕಂಡುಬಾರದು. ಜೀವನದ ಕೆಲವು ಪ್ರಮುಖ ಸಮಾರಂಭಕ್ಕೆ ಕ್ಷಣಗಣನೆ ಮಾಡುವಂಥರಾಗುವಿರಿ. ಧಾರ್ಮಿಕ ವ್ಯಕ್ತಿಗಳಿಗೆ ಶುಭ.
ವೃಷಭ
ಸಾರ್ವಜನಿಕರಿಂದ ನೇರವಾಗಿ ಕೆಲಸಗಳ ಬಗೆಗಿನ ಪ್ರತಿಕ್ರಿಯೆ ಪಡೆಯುವುದರಿಂದ ಗುಣಮಟ್ಟ ವೃದ್ಧಿ. ತಾಯಿಯ ಮೂಲಕ ಬರಬೇಕಾದ ಪಿತ್ರಾರ್ಜಿತ ಆಸ್ತಿಗೆ ಪ್ರಯತ್ನ ಬೇಕಾಗುತ್ತದೆ.
ಮಿಥುನ
ಹವ್ಯಾಸಿ ಛಾಯಾಗ್ರಾಹಕರಿಗೆ ಪ್ರಶಸ್ತಿ ಲಭಿಸುವುದು. ದೂರ ಸಂಚಾರದಲ್ಲಿ ಕಾರ್ಯಾನುಕೂಲ ತೋರಿಬಂದು ಮಾನಸಿಕ ನೆಮ್ಮದಿ. ಮಾನಸಿಕ ಖಿನ್ನತೆಯಿಂದ ಹೊರಬರಲು ಸಹಾಯ ಪಡೆಯಿರಿ.
ಕರ್ಕಾಟಕ
ಯಶಸ್ಸು, ಹೆಸರು ಪ್ರಯತ್ನ ಬೇಕಾದಷ್ಟೇ ಇದ್ದರೂ ಒಲಿದು ಬರುವುದು ಕಷ್ಟಕರ ಸಂಗತಿ. ಕುಟುಂಬ ಸ್ಥಾನದಲ್ಲಿ ಮನಸ್ತಾಪಕ್ಕೆ ಕಾರಣವಾಗದಂತೆ ಎಲ್ಲದರಲ್ಲೂ ಜಾಗ್ರತೆ ವಹಿಸಿರಿ.
ಸಿಂಹ
ಇತರರನ್ನು ಗೌರವಿಸುವುದು ಮತ್ತು ಇತರರ ಮಾತನ್ನು ಪರಾಮರ್ಶಿಸುವುದರ ಜತೆಗೆ ಮನ್ನಣೆ ಇರಲಿ. ಗಂಭೀರ ಚಿತ್ತ ಹಾಗೂ ದೃಢ ಮನಸ್ಸಿನಿಂದ ಕೈಗೊಂಡ ಕೆಲಸಗಳು ಕಾರ್ಯಗತವಾಗಲಿವೆ.
ಕನ್ಯಾ
ಲೋಕದಲ್ಲಿ ಸರ್ವೇಸಾಮಾನ್ಯವಾಗಿರುವ ಬದುಕಿನ ಪರಿಭಾಷೆಯಂತಲ್ಲದೆ ವಿಭಿನ್ನವಾಗಿ ಬದುಕಿ ತೋರಿಸುತ್ತೇವೆಂಬ ಕಲ್ಪನೆ ಹುಸಿಯಾಗುತ್ತದೆ. ಅನವಶ್ಯಕವಾದ ಖರ್ಚು ಹೆಚ್ಚಾಗಲಿದೆ.
ತುಲಾ
ದ್ರವಾಹಾರದ ಸೇವನೆ ಕಡಿಮೆ ಆಗಿ ಚರ್ಮದಲ್ಲಿ ಶುಷ್ಕತೆ ಉಂಟಾಗುತ್ತದೆ. ಸ್ಥಿರ ಆಸ್ತಿಯನ್ನು ಉಳಿಸಿಕೊಳ್ಳಲು ಕೋರ್ಟು ಕಚೇರಿಯನ್ನು ಪ್ರತಿನಿತ್ಯವೂ ಅಲೆಯುವಂತೆ ಆಗುತ್ತದೆ.
ವೃಶ್ಚಿಕ
ಹಿರಿಯರ ಜತೆಯಲ್ಲಿ ತೀರ್ಥಯಾತ್ರೆಗೆ ಪಾಲ್ಗೊಂಡು ದೇವರ ದರ್ಶನ ಮಾಡುವುದರಿಂದ ದಿವ್ಯ ಅನುಭೂತಿಯೊಂದಿಗೆ ಮನಸ್ಸಿಗೆ ನೆಮ್ಮದಿ ಸಿಗುವುದು. ವಾಹನ ಖರೀದಿ ವಿಚಾರದಲ್ಲಿ ತಟಸ್ಥರಾಗಿರಿ.
ಧನು
ಕೆಲಸ ಮತ್ತು ದುಡಿಮೆ ಸಮೃದ್ಧಿಯಾಗಿ ಇಲ್ಲವಾದರೂ ಕೌಟುಂಬಿಕ ನೆಮ್ಮದಿಗೆ ಕೊರತೆ ಕಾಣುವುದಿಲ್ಲ. ಹೊಸ ನೀರು ಬಂದಾಗ ಹಳೆಯ ನೀರು ಹೋಗುವುದು ಸಹಜ.
ಮಕರ
ಮನೆಯಲ್ಲಿ ಯುದ್ಧದ ವಾತಾವರಣವನ್ನು ಮನೆಯ ಯಜಮಾನತಿಯ ಸ್ಥಾನದಲ್ಲಿ ನಿಂತು ತಿಳಿಗೊಳಿಸಬೇಕಾದುದು ಅನಿವಾರ್ಯದ ಕರ್ತವ್ಯ. ಪ್ರೇಮಿಗಳ ಮನೋಕಾಮನೆಗಳು ಪೂರ್ಣಗೊಳ್ಳಲಿವೆ.
ಕುಂಭ
ಜೀವನ ರೂಪಿಸಿಕೊಳ್ಳಲು ನಿರ್ಧರಿಸಿದ ಪ್ರೇಮಿಗಳಿಗೆ ತಮ್ಮ ಸಹೋದರರಿಂದ ಸ್ಪಂದನೆ ಸಿಗುವ ಅವಕಾಶಗಳಿವೆ. ಸೃಜನಶೀಲತೆ, ಚಿಂತನಾ ಲಹರಿಗಳು, ಕಾರ್ಯವೈಖರಿಯು ವಿಭಿನ್ನವೆನಿಸುವುದು.
ಮೀನ
ಸಹವರ್ತಿಗಳು ಕೆಲವು ಸನ್ನಿವೇಶದಲ್ಲಿ ಪರವಾಗಿರುವಂತೆ ತೋರಿದರೂ ನಂಬಿಕೆಗೆ ಅರ್ಹರಾಗಿ ಇರುವುದಿಲ್ಲ. ಮಾತಿನ ಮೇಲೆ ಆತ್ಮವಿಶ್ವಾಸ ಮತ್ತು ಹಿಡಿತವಿರಲಿ. ಹಳೆಯ ಕಾರಿನ ಮಾರಾಟ ವಿಷಯ ಕೈಬಿಡಿ.
ADVERTISEMENT
ADVERTISEMENT