ತುಮಕೂರು: ನಗರದ ರೈಲು ಚಿತ್ರಣ ಬದಲಾಗುವಂತೆ ಕಾಣುತ್ತಿಲ್ಲ. ಸೌಲಭ್ಯಕ್ಕಾಗಿ ಪ್ರಯಾಣಿಕರ ವನವಾಸ ಇನ್ನೂ ಮುಂದುವರೆದಿದೆ. ಹನ್ನೆರಡು ವರ್ಷಗಳ ಹಿಂದೆಯೇ ನಗರದ ರೈಲು ನಿಲ್ದಾಣದ ಚಹರೆಯೇ ಬದಲಾಗಿ ಹೋಯಿತು ಎಂದು ಪ್ರಯಾಣಿಕರು ಕನಸು ಕಂಡಿದ್ದರು. ಆದರೆ ಇಂದಿಗೂ ಕನಸು ಕನಸಾಗಿಯೇ ಉಳಿದಿದೆ.

ನಗರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕೆಂಬ ಜನರ ಒತ್ತಾಯಕ್ಕೆ ರೈಲ್ವೆ ಇಲಾಖೆ ಬಿಡಿಗಾಸಿನ ಬೆಲೆ ನೀಡಿಲ್ಲ ಎಂಬುದು ನಿಲ್ದಾಣ ನೋಡಿದರೆ ವೇದ್ಯವಾಗುತ್ತದೆ. ಸಂಸದ ಜಿ.ಎಸ್.ಬಸವರಾಜ್ ಕೂಡ ನಿಲ್ದಾಣ ಅಭಿವೃದ್ಧಿ ಪಡಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾರೆ. ಆದರೂ ಕೆಲಸ ಮಾತ್ರ ವೇಗ ಪಡೆದುಕೊಂಡಿಲ್ಲ.

ನಿಲ್ದಾಣ ಮೂಲ ಸೌಕರ್ಯ ಕೊರತೆಯಿಂದ ನರಳುತ್ತಿದೆ. ಗ್ರಾಮಾಂತರ ಪ್ರದೇಶದ ರೈಲು ನಿಲ್ದಾಣದಲ್ಲಿರುವಂತಹ ಕನಿಷ್ಠ ಸೌಲಭ್ಯ ಇಲ್ಲಿಲ್ಲವಾಗಿದೆ. ನಿಲ್ದಾಣದಲ್ಲಿ ರೈಲುಗಳು ನಿಂತಾಗ ಪ್ರಯಾಣಿಕರು ಶೌಚಾಲಯ ಬಳಕೆ ಮಾಡುತ್ತಾರೆ. ಆದರೆ ಈ ರೈಲು ಹಳಿಗಳನ್ನು ಸ್ವಚ್ಛತೆ ಮಾಡುವ ವ್ಯವಸ್ಥೆಯೇ ಇಲ್ಲಿಲ್ಲವಾದ್ದರಿಂದ ಗಬ್ಬು ನಾರುತ್ತಿದೆ.

ಗೂಡ್ಸ್ ಶೆಡ್ ಅನ್ನು ಕ್ಯಾತ್ಸಂದ್ರಕ್ಕೆ ಸ್ಥಳಾಂತರಿಸಬೇಕೆಂಬ ಬೇಡಿಕೆ 12 ವರ್ಷಗಳಿಂದಲೂ ಇದೆ. ಈಗ ಈ ಕೆಲಸ ನಡೆಯುತ್ತಿದೆಯಾದರೂ ಆಮೆಗತಿಯಲ್ಲಿ ಸಾಗುತ್ತಿದೆ. ಇನ್ನು ನಿಲ್ದಾಣದ ಅಭಿವೃದ್ಧಿ ಯಾವಾಗ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ವಿಶ್ರಾಂತಿ ಗೃಹಕ್ಕೂ ಬೀಗ ಜಡಿಯುವ ಕಾರಣ ಪ್ರಯಾಣಿಕರಿಗೆ ಇದ್ದು ಇಲ್ಲದಂತಾಗಿದೆ. ರಾತ್ರಿ ವೇಳೆ ತಂಗಲು ಒಂದೇ ಒಂದು ವಸತಿ ಕೊಠಡಿ ಇದೆಯಾದರೂ ಇದು ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಪ್ರಯಾಣಿಕರು ದೂರುತ್ತಾರೆ.

ಒಂದೇ ಒಂದು ಟಿಕೆಟ್ ಕೌಂಟರ್ ತೆರೆಯುವ ಕಾರಣ ಟಿಕೆಟ್ ಪಡೆಯಲು ಪ್ರಯಾಣಿಕರು ಹರಸಾಹಸ ಪಡಬೇಕಿದೆ. ಎಷ್ಟೋ ವೇಳೆ ಟಿಕೆಟ್ ಕೊಳ್ಳುವಷ್ಟರಲ್ಲಿ ರೈಲುಗಾಡಿಗಳು ಚಲಿಸಿ ವಾಪಸ್ ಬರುವಂತಹ ಸನ್ನಿವೇಶವೂ ಇದೆ ಎಂಬುದು ಪ್ರಯಾಣಿಕರ ಅಳಲಾಗಿದೆ.

ಪ್ರಯಾಣಿಕರ ವಿಚಾರಣೆ ಕೌಂಟರ್ಗೆ ಇಲ್ಲಿ ಬೆಲೆಯೇ ಇಲ್ಲವಾಗಿದೆ. ಯಾವ ಟ್ರೈನ್ ಎಷ್ಟು ಗಂಟೆಗೆ ಬರುತ್ತದೆ, ಟಿಕೆಟ್ ದರ ಮತ್ತಿತರ ಮಾಹಿತಿಯನ್ನೇ ಸಿಬ್ಬಂದಿ ಕೊಡುವುದಿಲ್ಲ. ಪ್ರಯಾಣಿಕರೊಂದಿಗೆ ಸೌಜನ್ಯದ ನಡವಳಿಕೆ ತೋರುತ್ತಿಲ್ಲ. ರೈಲು ನಿಲ್ದಾಣಕ್ಕೆ ಹೋಗಬೇಕೆಂದರೆ ದಿಗಿಲಾಗುತ್ತದೆ ಎಂದು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜವಹರ್ ದೂರಿದರು.

ರೈಲುಗಳು ಸರಿಯಾದ ಸಮಯ ಪರಿಪಾಲನೆ ಕೂಡ ಮಾಡುತ್ತಿಲ್ಲ. ಆದರೆ ಸಮಯ ಆಚೀಚೆ ಆದಾಗ ಆ ಮಾಹಿತಿ ನೀಡದ ಕಾರಣ ಪ್ರಯಾಣಿಕರು ಪರದಾಟ ಹೇಳತೀರದಾಗಿದೆ.

ರಾಜ್ಯದ 19 ಜಿಲ್ಲೆಗಳಿಗೆ ನಗರ ಹೆಬ್ಬಾಗಿಲು ಕೂಡ ಆಗಿರುವುದರಿಂದ ರೈಲು ಪ್ರಯಾಣಿಕರ ದಟ್ಟಣೆ ಕೂಡ ಹೆಚ್ಚುತ್ತಿದೆ. ಆದರೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಕಲ್ಪಿಸಿಲ್ಲ. ಕನಿಷ್ಠ ಕುಡಿಯುವ ನೀರು ಸಹ ಇಲ್ಲವಾಗಿದೆ. ನಲ್ಲಿಗಳು ಕೆಟ್ಟು ನಿಂತಿರುವುದು ಕಾಣುತ್ತದೆ.
ಗೂಡ್ಸ್ಶೆಡ್ ಕಾಲೊನಿ ಕೂಡಲೇ ಸ್ಥಳಾಂತರಿಸಬೇಕು. ಒಮ್ಮೊಮ್ಮೆ ಸಿಮೆಂಟ್ ಮತ್ತಿತರ ಸಾಮಗ್ರಿಗಳು ಬಂದಾಗ ಇಡೀ ನಿಲ್ದಾಣ ದೂಳಿನಿಂದ ಕೂಡುತ್ತದೆ. ಆಗ ನಿಲ್ಲಲೂ ಕೂಡ ಸಾಧ್ಯವಾಗುವುದಿಲ್ಲ. ಶೌಚಾಲಯ ವ್ಯವಸ್ಥೆಯೂ ಸರಿ ಇಲ್ಲ. ಈ ನಿಲ್ದಾಣವನ್ನು ಇಲಾಖೆ ಕಡೆಗಣಿಸಿದೆ. ಸಾಕಷ್ಟು ಮನವಿ ನೀಡಿದರೂ ಅದಕ್ಕೂ ಸ್ಪಂದಿಸಿಲ್ಲ ಎಂದು ತುಮಕೂರು–ಬೆಂಗಳೂರು ರೈಲು ಪ್ರಯಾಣಿಕರ ವೇದಿಕೆಯ ಶಿವು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.