ಶುಕ್ರವಾರ, ಮೇ 14, 2021
35 °C

`ಬದುಕಿಗೆ ಸಹಕಾರ ನೀಡುವ ಧರ್ಮ ವೀರಶೈವ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಬದುಕಿಗೆ ಸಹಕಾರ ನೀಡುವ ಧರ್ಮ ವೀರಶೈವ'

ಆಲಮೇಲ: ವೀರಶೈವ ಧರ್ಮಕ್ಕೆ ವೈಜ್ಞಾನಿಕ ತಳಹದಿ ಇದೆ. ಅದು ಬದು ಕಿಗೆ ಬಹಳಷ್ಟು ಸಹಕಾರ ನೀಡುತ್ತದೆ ಎಂದು ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.ಗುಂದಗಿ ಮನೆತನದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಗುಲ್ಬರ್ಗ ಶರಣಬಸವೇಶ್ವರ ಹರಕೆಯ ಪುರಾಣ ಕಾರ್ಯಕ್ರಮದ ಮಹಾಮಂಗಲ ಗೊಂಡ ಬಳಿಕ  ಆಯೋಜಿಸಿದ್ದ ಧರ್ಮ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ವಿಭೂತಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ. ಲಿಂಗಕ್ಕೆ ಬಿಲ್ವಪತ್ರೆ  ಹಾಕಿ ಪೂಜಿಸುವುದರಿಂದ ಮನಸು, ದೇಹ ಚೈತನ್ಯದಿಂದ ಇರುತ್ತದೆ. ಎಂದು ಹೇಳಿದರು.ವಿರಕ್ತಮಠದ ಜಗದೇವ ಮಲ್ಲಿ ಭೂಮ್ಮಯ್ಯ ಸ್ವಾಮೀಜಿ ಮಾತನಾಡಿ, ಗುಂದಗಿ ಮನೆತನವು ಪ್ರತಿ ಮೂರು ವರ್ಷಕ್ಕೊಮ್ಮೆ ಗುಲ್ಬರ್ಗ ಶರಣ ಬಸವೇಶ್ವರ ಹರಕೆಯ ಪುರಾಣವನ್ನು ನಾಲ್ಕು ತಲೆಮಾರುಗಳಿಂದ ನಡೆಸಿ ಕೊಂಡು ಬರುತ್ತಿದೆ ಎಂದರು.ಬ್ಯಾಡಗಿಹಾಳದ ಸಿದ್ಧರಾಮನಂದ ಸ್ವಾಮೀಜಿ, ಡಾ.ಸಂದೀಪ ಪಾಟೀಲ, ಶಿವಕುಮಾರ ಗುಂದಗಿ ಮಾತ ನಾಡಿದರು.ಆಸಂಗಿಹಾಳದ ಶಂಕರಾನಂದ ಮಹಾರಾಜರು, ನಿತ್ಯಾನಂದ ಆರೂಢ ಮಠದ ಶರಣಬಸವ ಶರಣರು, ಪುರ ವಂತ ಶ್ರೀಶೈಲ ಕುಂಬಾರ, ಜಿ.ಪಂ ಸದಸ್ಯ ಮಲ್ಲಪ್ಪ ತೋಡಕರ, ಬಸವ ರಾಜ ಧನಶ್ರೀ, ಅಯೂಬ್ ದೇವರಮನಿ, ಶಿವಾನಂದ ಮಾರ್ಸನಳ್ಳಿ, ಮಲ್ಲು ಅಚಲೇರಿ, ಅಫ್ಜಲ್‌ಪುರ ತಾಲ್ಲೂಕಿನ ತಾ.ಪಂ ಸದಸ್ಯ ಪ್ರಭುಲಿಂಗ ಜಮಾ ದಾರ, ಅಶೋಕ ಕೊಳಾರಿ, ನಾನಾಗೌಡ ಪಾಟೀಲ ಭಾಗವಹಿಸಿದ್ದರು.ಕಲಾವಿದರಾದ ವೇತಾಳ ಜೋಶಿ, ಬಸವರಾಜ ಬಾಗೇವಾಡಿ ಪ್ರಾರ್ಥನೆ ಗೀತೆ ಹಾಡಿದರು. ರಮೇಶ ಬಂಟನೂರ ನಿರೂಪಿಸಿದರು. ಶಿವಶರಣ ಗುಂದಗಿ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.