ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕರಡಿ ಸಂರಕ್ಷಣಾ ಮತ್ತು ಪುನರ್ವಸತಿ ಕೇಂದ್ರದಲ್ಲಿ 14 ವರ್ಷದ `ವಿವೇಕ್~ ಎಂಬ ಗಂಡು ಕರಡಿ ಭಾನುವಾರ ಬೆಳಿಗ್ಗೆ 9.15ಕ್ಕೆ ಸಾವನ್ನಪ್ಪಿದೆ.

ಕರಡಿ ಕ್ಷಯರೋಗದಿಂದ ಮೃತಪಟ್ಟಿದ್ದು, ಕ್ಷಯರೋಗದ ಸೋಂಕು ಪುನರ್ವಸತಿ ಕೇಂದ್ರದ ಇನ್ನುಳಿದ ಹತ್ತು ಕರಡಿಗಳಿಗೆ ಹಬ್ಬಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಮೃತ ಪಟ್ಟ ಕರಡಿ `ವಿವೇಕ್~ಗೆ ಮೂರು ತಿಂಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.

ಪುನರ್ವಸತಿ ಕೇಂದ್ರದಲ್ಲಿ ಶುಕ್ರವಾರದಂದು ಯಾಮಿನಿ ಎಂಬ 15 ವರ್ಷದ ಹೆಣ್ಣು ಕರಡಿಯೊಂದು ಮೃತ ಪಟ್ಟಿತ್ತು. ಕರಡಿ `ವಿವೇಕ್~ ಸಾವಿನಿಂದ 2010ರ ನವೆಂಬರ್ನಿಂದ ಇಲ್ಲಿಯವರೆಗೆ ಈ ಪುನರ್ವಸತಿ ಕೇಂದ್ರದಲ್ಲಿ ಒಂಬತ್ತು ಕರಡಿಗಳು ಮೃತಪಟ್ಟಂತಾಗಿದೆ.

`ಪುನರ್ವಸತಿ ಕೇಂದ್ರದ 15ರಿಂದ 25 ವರ್ಷದೊಳಗಿನ ಇನ್ನುಳಿದ ಹತ್ತು ಕರಡಿಗಳ ಸ್ಥಿತಿಯೂ ಗಂಭೀರವಾಗಿದೆ. ಕರಡಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ ಅವುಗಳ ಅನಾರೋಗ್ಯದ ನಿಖರ ಕಾರಣ ತಿಳಿಯಲು ಇದುವರೆಗೂ ಸಾಧ್ಯವಾಗಿಲ್ಲ~ ಎಂದು ವನ್ಯಜೀವಿ ಪಶುವೈದ್ಯ ಅರುಣ್ ಎ. ಶಾ ತಿಳಿಸಿದರು.

`ಕರಡಿಗಳ ಅನಾರೋಗ್ಯದ ಕಾರಣ ಮೊದಲೇ ತಿಳಿದರೆ ಅದನ್ನು ಗುಣಪಡಿಸಲು ಸಾಧ್ಯವಾಗುತ್ತದೆ. ಆದರೆ, ರೋಗ ತೀವ್ರವಾಗುವವರೆಗೂ ಕರಡಿಗಳ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ರೋಗದ ಸೋಂಕು ಹಬ್ಬಿದ ನಂತರ ಅವು ತೀವ್ರ ನಿಶಕ್ತಿ ಹೊಂದುತ್ತವೆ. ಒಮ್ಮೆ ರೋಗ ತೀವ್ರವಾದ ನಂತರ ಕರಡಿಗಳನ್ನು ಉಳಿಸಿಕೊಳ್ಳುವುದು ಕಷ್ಟ~ ಎಂದರು.

`ಮೂರು ದಿನಗಳ ಹಿಂದೆ ಮೃತಪಟ್ಟ ಹೆಣ್ಣು ಕರಡಿ ಯಾಮಿನಿಯ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಶ್ವಾಸಕೋಶದಲ್ಲಿ ಕೀವು ತುಂಬಿ ಅದು ಸಾವನ್ನಪ್ಪಿದೆ ಎಂದು ವರದಿಯಿಂದ ಗೊತ್ತಾಗಿದೆ. ಯಾಮಿನಿ ಸಾವನ್ನಪ್ಪುವ ಮುನ್ನ ಅನಾರೋಗ್ಯದ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಈಗ ಅಸ್ವಸ್ಥಗೊಂಡಿರುವ ಹತ್ತು ಕರಡಿಗಳಿಗೂ ಈ ಮುನ್ನ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಕರಡಿಗಳ ರಕ್ತ ಪರೀಕ್ಷೆಯಿಂದಲೂ ರೋಗ ಲಕ್ಷಣವನ್ನು ಮೊದಲೇ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ~ ಎಂದು ಅವರು ತಿಳಿಸಿದ್ದಾರೆ.

ಕರಡಿಗಳ ರೋಗ ಪತ್ತೆಗೆ ಕೇರಳದ ತಿರುವನಂತರಪುರಂನ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರದ ವನ್ಯಜೀವಿ ಪಶುವೈದ್ಯ ತಜ್ಞರ ತಂಡ ಐದು ವಿಶೇಷ ಪರೀಕ್ಷಾ ಕಿಟ್ಗಳೊಂದಿಗೆ ಬನ್ನೇರುಘಟ್ಟಕ್ಕೆ ಬಂದಿದ್ದು, ಕರಡಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಆದರೆ, ಐದು ಕಿಟ್ಗಳಲ್ಲಿ ಒಂದರಲ್ಲಿ ಮಾತ್ರ ರೋಗ ಪತ್ತೆಯ ಲಕ್ಷಣಗಳು ಕಾಣಿಸಿಕೊಂಡಿವೆ.

`ಪುನರ್ವಸತಿ ಕೇಂದ್ರದಲ್ಲಿ ನಿಯಮಿತವಾಗಿ ಎಲ್ಲ ಪ್ರಾಣಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಇಲ್ಲಿಯವೆರಗೂ ಕ್ಷಯರೋಗದ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಕರಡಿಗಳಿಗೆ ಶೀತಜ್ವರ, ರೇಬಿಸ್ ಮತ್ತು ಇಲಿ ಜ್ವರದ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗಿದೆ. ರೋಗ ಸೋಂಕು ನಿಯಂತ್ರಣಕ್ಕೆ ಅಸ್ವಸ್ಥ ಪ್ರಾಣಿಗಳನ್ನು ಪ್ರತ್ಯೇಕಿಸಿ, ಬೇರೆ ಕಡೆ ಇರಿಸುವ ಕಾರ್ಯ ನಡೆಯುತ್ತಿದೆ~ ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.

`ಉದ್ಯಾನದ ನೌಕರರಿಗೆ ಕ್ಷಯರೋಗ ಹರಡಿರಬಹುದೆಂಬ ಶಂಕೆಯಿಂದ ಎಲ್ಲ ನೌಕರರ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಆದರೆ, ಅದೃಷ್ಟವಶಾತ್ ಯಾರಲ್ಲೂ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ~ ಎಂದು ಅಧಿಕಾರಿಗಳು ಹೇಳಿದ್ದಾರೆ.

`ಪಶ್ಚಿಮ ಬಂಗಾಳದ ಪುರುಲಿಯಾ ಕರಡಿ ಪುನರ್ವಸತಿ ಕೇಂದ್ರದಿಂದ 2010ರ ನವೆಂಬರ್ನಲ್ಲಿ 22 ಕರಡಿಗಳನ್ನು ಬನ್ನೇರುಘಟ್ಟಕ್ಕೆ ತರಲಾಗಿತ್ತು. ಅಲ್ಲಿಂದ ಕರಡಿಗಳನ್ನು ತಂದ ನಂತರ ಪುನರ್ವಸತಿ ಕೇಂದ್ರದಲ್ಲಿ ಮೊದಲ ಬಾರಿಗೆ ಕರಡಿಯೊಂದು ಸಾವನ್ನಪ್ಪಿತ್ತು. ಉದ್ಯಾನದಲ್ಲಿ ಕರಡಿಗಳ ಸಾವಿನ ಸರಣಿ ಅಲ್ಲಿಂದ ಆರಂಭವಾಯಿತು~ ಎಂದು ಶಾ ತಿಳಿಸಿದರು. ಮೃತ ಪಟ್ಟ ಕರಡಿ `ವಿವೇಕ್~ನನ್ನು ಕೂಡಾ ಪುರುಲಿಯಾದಿಂದ ತರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.