ಗುರುವಾರ , ಜನವರಿ 23, 2020
20 °C

ಬರಗೂರು ಬಂಡಾಯ ನಂಬಲು ಅಸಾಧ್ಯ-: ಮೋಹನ್‌ ಆಳ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: ‘ಬರಗೂರು ರಾಮ­ಚಂದ್ರಪ್ಪ ನುಡಿಸಿರಿ ವಿರುದ್ಧ ಬಂಡಾಯ ಏಳಲು ಸಾಧ್ಯವೇ ಇಲ್ಲ. ಅವರಿಗೆ ತಾತ್ವಿಕ ಭಿನ್ನಾಭಿಪ್ರಾಯ ಇರ­ಬಹುದು. ಆದರೆ, ನುಡಿಸಿರಿಗೆ ಬಂಡಾಯ ಎದ್ದಿದ್ದಾರೆ ಎಂಬ ಸುದ್ದಿ­ಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಆಳ್ವಾಸ್ ವಿಶ್ವನುಡಿಸಿರಿಯ ಸಂಘಟಕ ಡಾ.ಮೋಹನ ಆಳ್ವ ಭಾನು­ವಾರ ಇಲ್ಲಿತಿಳಿಸಿದರು.ಮಾಧ್ಯಮ ಕೇಂದ್ರದಲ್ಲಿ ಸುದ್ದಿ­ಗಾರರೊಂದಿಗೆ ಮಾತನಾಡಿದ ಅವರು, ‘ಬೇರೆ ಯಾವುದೋ ಕಾರಣಕ್ಕಾಗಿ ಅವರು ಸಮಾಜ ಕುರಿತ ಉಪನ್ಯಾಸ ಕಾರ್ಯ­­ಕ್ರಮದಲ್ಲಿ ಭಾಗವಹಿಸಲಿಲ್ಲ. ಮೊದಲ ನುಡಿಸಿರಿಯನ್ನು ಅವರೇ ಉದ್ಘಾ­­ಟಿಸಿದ್ದು, ಅವರೇ ಇದೀಗ ಬಂಡಾಯ ಏಳುತ್ತಾರೆ ಎಂದರೆ ನಂಬಲು ಸಾಧ್ಯವೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಸ್ವರೂಪ ಬದಲಾವಣೆ

‘ನುಡಿಸಿರಿ ನಿಂತ ನೀರಲ್ಲ. ಅದು ಮುಂದೆಯೂ ಆಯೋಜನೆ­ಗೊಳ್ಳಲಿದೆ. ಆದರೆ, ನನ್ನ ಬಳಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನುಡಿ­ಸಿರಿ­ಯನ್ನು ಏರ್ಪಡಿಸಲು ಕಷ್ಟ. ಹಾಗಾಗಿ, ಸದ್ಯದಲ್ಲೇ ಸಮಾನ ಮನ­ಸ್ಕರು ಸೇರಿ ಇದರ ಸ್ವರೂಪದಲ್ಲಿ ಬದ­ಲಾ­ವಣೆ ಮಾಡಿಕೊಳ್ಳುತ್ತೇವೆ. ಆದರೆ, ನುಡಿ­ಸಿರಿಯ ಮೂಲಕ ಕನ್ನಡ ಮನಸು­ಗಳನ್ನು ಕಟ್ಟುವ ಕೆಲಸ ಮಾತ್ರ ನಿಲ್ಲು­ವುದಿಲ್ಲ’ ಎಂದು ಮೋಹನ ಆಳ್ವ ತಿಳಿಸಿದರು.

ಪ್ರತಿಕ್ರಿಯಿಸಿ (+)