ಬುಧವಾರ, ಮೇ 18, 2022
25 °C

ಬಲಿಷ್ಠ ಆರ್ಥಿಕ ದೇಶ: ಚೀನಾಕ್ಕೆ 2ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್(ಐಎಎನ್‌ಎಸ್): ಪರಿಷ್ಕೃತ ಆರ್ಥಿಕ ವೃದ್ಧಿ ದರವನ್ನು (ಜಿಡಿಪಿ) ಚೀನಾ ಪ್ರಕಟಿಸಿದ್ದು, ಅಮೆರಿಕ ನಂತರ ಪ್ರಪಂಚದಲ್ಲಿಯೇ ಎರಡನೆಯ ಅತಿದೊಡ್ಡ  ಆರ್ಥಿಕ ಶಕ್ತಿ ಶಾಲಿ ರಾಷ್ಟ್ರವಾಗಿ ಹೊರ ಹೊಮ್ಮಿದೆ.2010ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಜಪಾನ್ ‘ಜಿಡಿಪಿ’ ದರ ಶೇ 1.1ರಷ್ಟು ಕುಸಿದಿದೆ. ಈ ಅವಧಿಯಲ್ಲಿ ಚೀನಾ 6.03 ಲಕ್ಷ ಕೋಟಿ ಡಾಲರ್‌ಗಳಷ್ಟು ವರಮಾನ ದಾಖಲಿಸಿದರೆ, ಜಪಾನ್ ವರಮಾನವು 5.47 ಲಕ್ಷ ಕೋಟಿ ಡಾಲರ್‌ಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ 1968ರಿಂದ ಎರಡನೇ ಸ್ಥಾನದಲ್ಲಿದ್ದ ಜಪಾನ್ ಮೂರನೆಯ ಸ್ಥಾನಕ್ಕೆ ಇಳಿದಿದೆ.  ಪ್ರಸಕ್ತ ಸಾಲಿನಲ್ಲಿ ಚೀನಾದ ವಿದೇಶಿ ವಿನಿಮಯ ಶೇ 44ರಷ್ಟು, ರಫ್ತು ಶೇ 37ರಷ್ಟು, ಆಮದು ಶೇ 51ರಷ್ಟು ಹೆಚ್ಚಿರುವ ಹಿನ್ನೆಲೆಯಲ್ಲಿ ಜಪಾನನ್ನು  ಹಿಂದಿಕ್ಕಿದೆ.

 

150 ದಶಲಕ್ಷ ಕಡುಬಡವರು

ಪ್ರಪಂಚದ ಎರಡನೆಯ ಅತಿದೊಡ್ಡ  ಆರ್ಥಿಕ ಶಕ್ತಿ ಶಾಲಿ ರಾಷ್ಟ್ರವಾಗಿ ಚೀನಾ ಹೊರ ಹೊಮ್ಮಿದರೂ, ಅಲ್ಲಿ ಬಡತನ ರೇಖೆಗಿಂತ ಕೆಳಗಿರುವರ ಸಂಖ್ಯೆ ಹೆಚ್ಚಿದೆ. ಸುಮಾರು 150 ದಶಲಕ್ಷ ಜನರು ‘ಬಿಪಿಎಲ್’ ವ್ಯಾಪ್ತಿಗೆ ಬರುತ್ತಾರೆ. ‘ಜಿಡಿಪಿ’ ದರವೊಂದೇ ದೇಶದ ಒಟ್ಟಾರೆ ಪ್ರಗತಿಯ ಮಾನದಂಡ ಅಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.‘ಕಳೆದ ವರ್ಷಕ್ಕೆ ಹೋಲಿಸಿದರೆ ಚೀನಾದ ಆರ್ಥಿಕ ವೃದ್ಧಿ ದರ ಹೆಚ್ಚಿದೆ. ಆದರೆ ಈ ಆರ್ಥಿಕ ಮಟ್ಟದಲ್ಲಿ ಹಲವು ಸಮಸ್ಯೆಗಳಿವೆ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರರೊಬ್ಬರು ತಿಳಿಸಿದ್ದಾರೆ.ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ ಅಂಕಿ ಅಂಶದಂತೆ ಚೀನಾದ ತಲಾ ಆರ್ಥಿಕ ವೃದ್ಧಿ ದರ ಪ್ರಪಂಚದಲ್ಲಿಯೇ 100ನೇ ಸ್ಥಾನದಲ್ಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.