ಹಿರೀಸಾವೆ: ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರಗಳಲ್ಲಿ ಹಳ್ಳಿಗಳ ಚರಂಡಿ, ರಸ್ತೆ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮಗಳು ಸಾಮಾನ್ಯ. ದಿಡಗ ಗ್ರಾಮದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಗ್ರಾಮಸ್ಥರಿಗೆ ಮತ್ತು ಸರ್ಕಾರಕ್ಕೆ ಬೇಡವಾದ ಶಿಲ್ಪಕಲೆ ಮತ್ತು ಇತಿಹಾಸ ಹೊಂದಿರುವ ದೇವಸ್ಥಾನವನ್ನು ಸ್ವಚ್ಛ ಮಾಡುವ ಮೂಲಕ ಅದರ ಸೌಂದರ್ಯವನ್ನು ಹೆಚ್ಚಿಸಿದ್ದಾರೆ.

ಹಿರೀಸಾವೆ ಮತ್ತು ಉದಯಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜಗಳ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರವು ದಿಡಗ ಗ್ರಾಮದಲ್ಲಿ ಕಳೆದ ತಿಂಗಳು ಏಳು ದಿನಗಳ ಕಾಲ ನಡೆಯಿತು. ಎರಡು ಕಾಲೇಜುಗಳಿಂದ 100 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ದಿಡಗ ಗ್ರಾಮದ ಈಶ್ಯಾನ ಭಾಗದಲ್ಲಿರುವ ಕೆರೆಯ ಕೊಡಿ ಪಕ್ಕದಲ್ಲಿ ಬಲ್ಲೇಶ್ವರ (ಈಶ್ವರ) ಎಂಬ ದೇವಸ್ಥಾನವಿದೆ. ಕ್ರಿ.ಶ.1,112ರಲ್ಲಿ ಹೊಯ್ಸಳರ ಆಡಳಿತದಲ್ಲಿ ಇದನ್ನು ಕಟ್ಟಲಾಗಿದೆ ಎಂದು ಸ್ಥಳದಲ್ಲಿ ದೊರೆತಿರುವ ಶಾಸನ ದಲ್ಲಿ ಕೆತ್ತಲಾಗಿದೆ. ಹಲವು ವರ್ಷಗ ಳಿಂದ ನಿರ್ವಹಣೆ ಇಲ್ಲದೆ ದೇವಾಲಯದ ಮೆಲೆ ಮತ್ತು ಹೊರಭಾಗದ ಗೋಡೆಯ ಸುತ್ತ ಗಿಡಗಂಟೆಗಳು ಬೆಳೆದು ದೇವಸ್ಥಾನವೇ ಕಾಣುತ್ತಿರಲಿಲ್ಲ. ಪಾಳು ಬಿದ್ದು ಕಟ್ಟಡದ ಶಿಲ್ಪಕಲೆ ಜನರಿಗೆ ನೋಡಲು ಆಗುತ್ತಿರಲಿಲ್ಲ. ದೇವಸ್ಥಾನದ ಬಗ್ಗೆ ಪುರಾತತ್ವ ಇಲಾಖೆ ಅಥವಾ ಸ್ಥಳಿಯ ಆಡಳಿತದವರು ಗಮನಹ ರಿಸಿರಲಿಲ್ಲ.

ಕಾಲೇಜುಗಳ ಶಿಬಿರಾಧಿಕಾರಿಗಳಾದ ಪ್ರೊ.ಶಿವಕುಮಾರ್ ಮತ್ತು ಪ್ರೊ.ನಂಜುಂಡ ಅವರು ಶಿಬಿರದಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಗ್ರಾಮದಲ್ಲಿ ಒಂದು ಸುತ್ತು ಹಾಕಿದಾಗ, ದೇವಸ್ಥಾನದ ದುಸ್ಥಿತಿಯನ್ನು ಕಂಡರು. ಆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಶಿಬಿರದ 5ನೇ ದಿನ ಎಲ್ಲ ಶಿಬಿರಾರ್ಥಿಗಳು ದೇವಾಲಯದ ಬಳಿಗೆ ತೆರಳಿ, ಕಟ್ಟಡದ ಸುತ್ತಮತ್ತು ದೇವಸ್ಥಾನದ ಮೇಲೆ ಬೆಳೆದಿದ್ದ, ಮುಳ್ಳು ಮತ್ತು ಇತರೆ ಗಿಡಗಳನ್ನು ಕಡಿದು, ಹೊರಕ್ಕೆ ಹಾಕುವ ಮೂಲಕ ದೇಸ್ಥಾನ ಮತ್ತು ಅದರ ಆವರಣವನ್ನು ಸ್ವಚ್ಛಗೊಳಿಸಿದರು. ಈ ಶ್ರಮದಾನದಿಂದ ಆ ದೇವಾಲಯಕ್ಕೆ ಹೊಸ ರೂಪ ಬಂದಿದೆ ಮತ್ತು ಅದರ ಶಿಲ್ಪಕಲೆಯು ಜನರಿಗೆ ನೋಡಲು ಅವಕಾಶ ಸಿಕ್ಕಿದೆ.

‘ಶಿಥಿಲಗೊಂಡಿರುವ ದೇವಸ್ಥಾನವನ್ನು ಪುರಾತತ್ವ ಇಲಾಖೆ ಮತ್ತು ಸರ್ಕಾರ ಜೀರ್ಣೋದ್ಧಾರ ಮಾಡಿದರೆ ನಮ್ಮ ಇತಿಹಾಸ ಉಳಿಯುತ್ತದೆ’ ಎನ್ನುವುದು ವಿದ್ಯಾರ್ಥಿಗಳ ಅನಿಸಿಕೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.