ಮಂಗಳವಾರ, ಮಾರ್ಚ್ 2, 2021
29 °C

ಬಸವಣ್ಣನ ವಿವೇಕ ಇಂದಿನ ಸಮಾಜಕ್ಕೆ ಆದರ್ಶವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಣ್ಣನ ವಿವೇಕ ಇಂದಿನ ಸಮಾಜಕ್ಕೆ ಆದರ್ಶವಾಗಲಿ

ಸಾಗರ: ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಸಮಾಜವಾದವನ್ನು ಮೊಟ್ಟಮೊದಲು ಪ್ರತಿಪಾದಿಸಿದ ಶ್ರೇಯಸ್ಸು ಬಸವಣ್ಣನಿಗೆ ಸಲ್ಲುತ್ತದೆ ಎಂದು ಉಪನ್ಯಾಸಕ ಡಾ.ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.ಇಲ್ಲಿನ ತಾಲ್ಲೂಕು ಆಡಳಿತ ಮಂಗಳವಾರ ಏರ್ಪಡಿಸಿದ್ದ ಬಸವ ಜಯಂತಿ ಆಚರಣೆ ಸಮಾರಂಭದಲ್ಲಿ ಬಸವಣ್ಣನ ಕುರಿತು ಉಪನ್ಯಾಸ ನೀಡಿದ ಅವರು ಜನಪರವಾದ ಭಾಷೆಯ ಬಳಕೆಯ ಮೂಲಕ ಸಮಾಜದ ಎಲ್ಲ ವರ್ಗದವರಿಗೆ ಹತ್ತಿರವಾಗಿದ್ದ ಬಸವಣ್ಣ ಸ್ಥಾಪಿಸಿದ ಧರ್ಮವನ್ನು ಯಾವುದೇ ಒಂದು ಜಾತಿಯ ಹಿನ್ನೆಲೆಯಲ್ಲಿ ಕರೆಯದೆ ಬಸವಪಥ ಎಂದು ಕರೆಯುವುದೆ ಸೂಕ್ತ ಎಂದರು.ಸಾಮಾಜಿಕ ಕ್ಷೇತ್ರ ಮಾತ್ರವಲ್ಲದೇ ಕಲೆ, ಸಾಹಿತ್ಯ, ಸಂಸ್ಕೃತಿಯಂತಹ ಕ್ಷೇತ್ರವನ್ನು ಅತ್ಯಂತ ದಟ್ಟವಾಗಿ ಪ್ರಭಾವಿಸಿದ ವ್ಯಕ್ತಿತ್ವ ಬಸವಣ್ಣ ಅವರದ್ದು. ಕವಿ, ಕಲಾವಿದ, ಸಾಹಿತಿ ಈ ವರ್ಗದ ಜತೆಗೆ ದುಡಿಯುವ ವರ್ಗದ ಜನರ ವರ್ತಮಾನದ ಬದುಕಿನಲ್ಲೂ ಬಸವಣ್ಣ ಮರುಹುಟ್ಟು ಪಡೆಯುತ್ತಿದ್ದಾನೆ ಎಂದು ಹೇಳಿದರು.ಬಸವಣ್ಣ ಎಂದರೆ ಅದು ಕೇವಲ ಚರಿತ್ರೆ ಮಾತ್ರವಲ್ಲ, ನಮ್ಮ ನೆಲದ ಸಾಂಸ್ಕೃತಿಕ ರೂಪಕವಾಗಿ ಬಸವಣ್ಣ ಅವರನ್ನು ನೋಡುವುದೆ ಸೂಕ್ತ. ಭ್ರಷ್ಟಾಚಾರದಷ್ಟೇ ಜಾತಿ ವ್ಯವಸ್ಥೆ ಅಪಾಯಕಾರಿ ಎಂಬ ಅರಿವು ಬಸವಣ್ಣನವರಲ್ಲಿ ಇದ್ದ ಕಾರಣ ಎಲ್ಲಿಯವರೆಗೆ ಜಾತಿ ನಾಶವಾಗುವುದಿಲ್ಲವೋ ಅಲ್ಲಿಯವರೆಗೆ ಆದರ್ಶ ಸಮಾಜದ ಕಲ್ಪನೆ ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದರು ಎಂದರು.ಬಸವಣ್ಣನ ಕಾಲದಲ್ಲಿ ಎಲ್ಲ ತಳ ಸಮುದಾಯದವರು ಸಾಮಾಜಿಕವಾಗಿ ಒಟ್ಟಿಗೆ ಇದ್ದರು. ಇವತ್ತು ಅದೆ ತಳ ಸಮುದಾಯದ ಜನ ಪ್ರತ್ಯೇಕಗೊಂಡು ಜಾತಿಗೊಂದು ಮಠ ಕಟ್ಟಿಕೊಳ್ಳುತ್ತಿರುವುದು ದುರಂತದ ಸ್ಥಿತಿ. ಜಾತಿ ವ್ಯವಸ್ಥೆ ಬಲಗೊಂಡಷ್ಟು ಪ್ರಜಾಪ್ರಭುತ್ವದ ಆಶಯ ದುರ್ಬಲಗೊಳ್ಳುತ್ತದೆ ಎಂಬ ಬಸವಣ್ಣನ ವಿವೇಕ ಇಂದಿಗೆ ಆದರ್ಶವಾಗಬೇಕು ಎಂದು ಹೇಳಿದರು.ತಾಲ್ಲೂಕು ಪಂಚಾಯ್ತಿ ಸದಸ್ಯ ಮಹಾಬಲೇಶ್ವರ ಕುಗ್ವೆ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ ಅಧ್ಯಕ್ಷತೆ ವಹಿಸಿದ್ದರು. ಉಪ ವಿಭಾಗಾಧಿಕಾರಿ ಡಾ.ಜಿ.ಎಲ್. ಪ್ರವೀಣಕುಮಾರ್, ತಹಶೀಲ್ದಾರ್ ಯೋಗೇಶ್ವರ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಡಾ.ಶಶಿಕುಮಾರ್, ವೀರಶೈವ ಯುವ ವೇದಿಕೆ ಅಧ್ಯಕ್ಷ ರಾಜೇಂದ್ರ ಆವಿನಹಳ್ಳಿ, ದಳವಾಯಿ ದಾನಪ್ಪ ಇನ್ನಿತರರು ಹಾಜರಿದ್ದರು. ಪವಿತ್ರಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕೆ.ಬಿ. ಕೆಂಚಳ್ಳಿ ಸ್ವಾಗತಿಸಿದರು. ಬಸವರಾಜ್ ನಿರೂಪಿಸಿದರು.ಬಸವಣ್ಣ ಒಂದು ಮಹಾನ್ ವಿಶ್ವವಿದ್ಯಾಲಯ

ಸೊರಬ ವರದಿ:
ಬಸವಣ್ಣ ಅವರು ಒಂದು ಮಹಾನ್ ವಿಶ್ವವಿದ್ಯಾಲಯ ಇದ್ದಂತೆ. ಅವರು ವಿಶ್ವಕ್ಕೆ ಜ್ಞಾನ ನೀಡುವಂತಹ ಸರ್ವಕಾಲಿಕ ವಿಶ್ವ ಗುರು ಆಗಿದ್ದರು. ಯುವಜನತೆ ಅವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶಾಸಕ ಎಚ್. ಹಾಲಪ್ಪ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ  ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಪಟ್ಟಣ ಪಂಚಾಯ್ತಿ ಮತ್ತು ರಾಷ್ಟ್ರೀಯ ಹಬ್ಬಗಳ ಹಾಗೂ ದಿನಾಚರಣೆಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ  ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಬಸವೇಶ್ವರರ ಕುರಿತು ಗುಡಿಗೇರಿ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಎಚ್.ಬಿ. ಪಂಚಾಕ್ಷರಯ್ಯ ಉಪನ್ಯಾಸ ನೀಡಿದರು.ಜಿ.ಪಂ. ಉಪಾಧ್ಯಕ್ಷ ಹುಣವಳ್ಳಿ ಗಂಗಾಧರಪ್ಪ ಮಾತನಾಡಿದರು. ಪ.ಪಂ. ಅಧ್ಯಕ್ಷ ವಿಜಯಾ ಮಹಾಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಗುರುಕುಮಾರ ಎಸ್. ಪಾಟೀಲ್, ಪ.ಪಂ. ಉಪಾಧ್ಯಕ್ಷ ಪ್ರಶಾಂತ ಮೇಸ್ತ್ರಿ, ಸದಸ್ಯ ಮಹೇಶಗೌಳಿ, ಸಂಗಪ್ಪನಾಯ್ಕ, ಗುತ್ತಿ ಚನ್ನಬಸಪ್ಪ, ಎಂ. ನಾಗಪ್ಪ, ಇಂದೂಧರ ಒಡೆಯರ್, ಗಜಾನನರಾವ್, ಪಾಣಿರಾಜಪ್ಪ, ಟಿ. ಅಣ್ಣಾಜಿಗೌಡ, ಕೆ.ಜಿ. ಲೋಲಾಕ್ಷಮ್ಮ, ರೇಣುಕಮ್ಮ ಗೌಳಿ ಮತ್ತಿತರರು ಉಪಸ್ಥಿತರಿದ್ದರು.ರಂಗನಾಥ ಸ್ವಾಮಿ ದೇವಾಲಯದ ಆವರಣದಿಂದ ತಾಲ್ಲೂಕು ಕಚೇರಿಯವರೆಗೆ ಬಸವೇಶ್ವರರ ಭಾವಚಿತ್ರದೊಂದಿಗೆ ಪಟ್ಟಣದ ಮುಖ್ಯಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.ಹೊಸನಗರ: ಬಸವ ಜಯಂತಿ

ಹೊಸನಗರ ವರದಿ: ಬಸವಣ್ಣನವರ ತತ್ವ, ಸಿದ್ಧಾಂತಗಳು ಸರ್ವಕಾಲಿಕ ಹಾಗೂ ವಿಶ್ವಮಾನ್ಯ ಆಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕತ್ತಿಗೆ ಚೆನ್ನಪ್ಪ ಹೇಳಿದರು.ಮಂಗಳವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯ್ತಿ, ತಾಲ್ಲೂಕು ವೀರಶೈವ ಸಮಾಜದ ಆಶ್ರಯದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಪ.ಪಂ. ಅಧ್ಯಕ್ಷ ಅರುಣ್‌ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾ.ಪಂ. ಉಪಾಧ್ಯಕ್ಷೆ ಶಾಂತಾ ಶೇಖರಪ್ಪ ಸಮಾರಂಭ ಉದ್ಘಾಟಿಸಿ ಶುಭ ಹಾರೈಸಿದರು.ತಾ.ಪಂ. ಸದಸ್ಯರಾದ ಜಯಲಕ್ಷ್ಮೀ ವಿ. ಆಚಾರ್, ನಿರ್ಮಲಾ, ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಮಣಿ, ತಹಶೀಲ್ದಾರ್ ಪ್ರಭಾರಿ ವಿ. ಕುಲಕರ್ಣಿ, ವೀರಶೈವ ಸಮಾಜದ  ಮುಖಂಡರಾದ ಅಬ್ಬಿ ಮಲ್ಲೇಶಪ್ಪ, ಕೋಡೂರು ಚಂದ್ರಮೌಳಿ, ಕುರುಗೋಡು ನಾಗರಾಜ್, ಹರೀಶ್ ಕಲ್ಯಾಣಪ್ಪ ಗೌಡ, ಜಯಶೀಲಪ್ಪ ಗೌಡ, ಹರತಾಳು ನಾಗರಾಜ್, ವಿನಯ್, ವೀರಶೈವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಂಜುಂಡಪ್ಪ ಹಾಗರಿದ್ದರು.ಗಂಗಾಧರಯ್ಯ ಸ್ವಾಗತಿಸಿದರು. ಈಶ್ವರಪ್ಪ  ವಂದಿಸಿದರು. ಸಭೆಗೆ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಚಿತ್ರದೊಂದಿಗೆ ಮೆರವಣಿಗೆ ನಡೆಸಿದರು.`ಜಗತ್ತಿನ ಮೊದಲ ಮುಕ್ತ ಚಿಂತಕ ಬಸವಣ್ಣ~ 

ಭದ್ರಾವತಿ ವರದಿ:
`ಯಾವುದೇ ಚಿಂತನೆಗಳ ಸಂಕೋಲೆಗೆ ಸಿಲುಕದೇ, ಮುಕ್ತ ಆಲೋಚನೆ ಮೂಲಕ ಸಾಮರಸ್ಯತೆ ಸಾರಿದ ವ್ಯಕ್ತಿ ಬಸವಣ್ಣ~ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಜಿ. ಧನಂಜಯ ಅಭಿಪ್ರಾಯಪಟ್ಟರು.ಬಸವೇಶ್ವರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.ಹಳೆಯ ವಿಚಾರಗಳನ್ನು ತಿರಸ್ಕರಿಸಿ, ಹೊಸ ಯೋಚನೆಗಳಿಗೆ ಮುನ್ನುಡಿ ಬರೆದ ಬಸವಣ್ಣ ಮಾನವ ಜನ್ಮದ ಹೊಸ ಬದುಕಿಗೆ ಸ್ಪಂದಿಸಿದ ಪ್ರಥಮ ದಾರ್ಶನಿಕ, ಪರಿಸ್ಥಿತಿಗೆ ತನ್ನನ್ನು ತಾನು ಹೊಂದಾಣಿಕೆ ಮಾಡಿಕೊಳ್ಳದೇ, ಹೊಸದಾರಿ ಕಲಿಸಿಕೊಟ್ಟ ಮಹಾನ್ ಸಾಧಕ ಬಸವಣ್ಣ ಎಂದು ಅವರು ಬಣ್ಣಿಸಿದರು.ಮಹಾತ್ಮರ ಜಯಂತಿ ಆಚರಣೆ ಕೇವಲ ಆಡಂಬರಕ್ಕೆ ಸೀಮಿತವಾಗದೇ ಅವರಲ್ಲಿನ ಕೆಲವೊಂದಿಷ್ಟು ಅಂಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.ಶಾಸಕ ಬಿ.ಕೆ. ಸಂಗಮೇಶ್ವರ ಮಾತನಾಡಿ, ಬಸವಣ್ಣ ಯಾವುದೇ ಒಂದು ಜಾತಿ, ಜನಾಂಗ, ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಬದಲಾಗಿ ಸಮಾಜದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ ಸಾಮಾಜಿಕ ಹರಿಕಾರ ಎಂದರು.

ನಗರಸಭೆ ಅಧ್ಯಕ್ಷ ಬಿ.ಕೆ. ಮೋಹನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ತಾ.ಪಂ ಅಧ್ಯಕ್ಷ ಆರ್. ಹಾಲಪ್ಪ, ಉಪಾಧ್ಯಕ್ಷ ಶಾಂತಕುಮಾರ್, ಎ.ಜಿ. ಶಿವಕುಮಾರ್, ಲಕ್ಷ್ಮೀ, ಎಚ್.ಎಲ್. ಷಡಾಕ್ಷರಿ, ಅಧಿಕಾರಿಗಳಾದ ಟಿ. ಶ್ರೀಧರ, ಬಿ.ಡಿ. ಬಸವರಾಜು, ಎಂ. ಮಲ್ಲೇಶಪ್ಪ, ಟಿ.ಎನ್. ಸೋಮಶೇಖರಯ್ಯ ಹಾಜರ್ದ್ದಿದರು.ವಿವಿಧ ಸಂಘಟನೆಗಳ ಮುಖಂಡರಾದ ವೀರಭದ್ರಪ್ಪ, ಮಲ್ಲಿಕಾರ್ಜುನ ಕೋಠಿ, ಷಡಾಕ್ಷರಪ್ಪ, ಸಿದ್ದಲಿಂಗಯ್ಯ, ಸುವರ್ಣಮ್ಮ ಹಿರೇಮಠ, ಸದಾಶಿವಪ್ಪ, ಮೃತ್ಯುಂಜಯಪ್ಪ ಉಪಸ್ಥಿತರಿದ್ದರು.ಕವಿತಾ ನಾಡಗೀತೆ ಹೇಳಿದರು, ಸರ್ವೇಶ್ವರಿ, ಗಂಗಾ ಕುಬ್ಸದ್, ಮಲ್ಲಿಕಾಂಬಾ ವಚನ ಗಾಯನ ಮಾಡಿದರು, ವಿರೂಪಾಕ್ಷಪ್ಪ ಕಾರ್ಯಕ್ರಮ ನಿರೂಪಿಸಿದರು, ಮಂದಾರಕುಮಾರ್ ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 15ಮಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.   

 ನಡೆ- ನುಡಿ ಅಳವಡಿಸಿಕೊಳ್ಳಿಶಿಕಾರಿಪುರ ವರದಿ: ಬಸವಣ್ಣ ಅವರ ತತ್ವ ಮತ್ತು ವಿಚಾರಗಳನ್ನು ಭಾಷಣಕ್ಕೆ ಮಾತ್ರ ಸೀಮಿತಗೊಳಿಸದೇ ನಮ್ಮ ಜೀವನದ ನಡೆ-ನುಡಿಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.

ಪಟ್ಟಣದ ಕಾನೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಪುರಸಭೆ ಹಾಗೂ ಅಖಿಲಭಾರತ ವೀರಶೈವ ಮಹಾಸಭಾ ಶಿಕಾರಿಪುರ ಮತ್ತು ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಸವಣ್ಣ ಅವರ ತತ್ವ ಮತ್ತು ವಿಚಾರಗಳು ಒಂದು ಜಾತಿಗೆ ಸೀಮಿತವಾಗಿರದೇ ಸಮಾಜದಲ್ಲಿರುವ ಎಲ್ಲಾ ಜನರಿಗೂ ಸಂಬಂಧಿಸಿರುವುದಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು. ಜಾತಿಭೇದ ಮರೆತು ನಾವುಗಳು ಬಸವ ಜಯಂತಿ ಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.`ಕಾಡಾ~ ಅಧ್ಯಕ್ಷರಾದ ಕೆ. ಶೇಖರಪ್ಪ, ಪುರಸಭೆ ಅಧ್ಯಕ್ಷೆ ವೀಣಾ ಮಲ್ಲೇಶಪ್ಪ, ಸದಸ್ಯೆ ಮೀನಾಕ್ಷಮ್ಮ, ಮುಖ್ಯಾಧಿಕಾರಿ ರವೀಂದ್ರ ಮಲ್ಲಾಪುರೆ, ತಹಶೀಲ್ದಾರ್ ಕೆ.ಎಚ್. ಶಿವಕುಮಾರ್, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗಪ್ಪ, ಪುರಸಭೆ ಮಾಜಿ ಅಧ್ಯಕ್ಷರಾದ ವಸಂತಗೌಡ್ರು, ಬಿ.ಎಚ್. ನಾಗರಾಜ್, ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳಾದ ಬಿ.ಡಿ. ಭೂಕಾಂತ್, ರುದ್ರಮುನಿ, ರಮಣಿ ಕೊಟ್ರೇಶಪ್ಪ, ಎಂ.ಸಿ. ಆನಂದ್, ನಿಜಲಿಂಗಪ್ಪ ಗೌಡ್ರು, ಕೆ.ಜಿ. ಪ್ರಸನ್ನಕುಮಾರ್, ಗಿರೀಶ ಧಾರವಾಡ ಉಪಸ್ಥಿತರಿದ್ದರು.ವಿವಿಧ ಕಲಾಮೇಳಗಳೊಂದಿಗೆ ಬಸವಣ್ಣ ಅವರ ಭಾವಚಿತ್ರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.