ಮಂಗಳವಾರ, ಮೇ 17, 2022
26 °C

ಬಸವಣ್ಣ ವರ್ಣನಾತೀತ: ಸಿದ್ಧೇಶ್ವರ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ಬಸವಣ್ಣನವರನ್ನು ಯಾರೊಟ್ಟಿಗೂ ಹೋಲಿಸಲಾಗುವುದಿಲ್ಲ, ಯಾವ ಶಬ್ದದಿಂದಲೂ ಅವರನ್ನು ವರ್ಣಿಸಲು ಆಗುವುದಿಲ್ಲ” ಎಂದು ವಿಜಾಪುರದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು. ಧಾರವಾಡ ಮುರುಘಾಮಠದಲ್ಲಿ ಜಾತ್ರೆ ಅಂಗವಾಗಿ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆ ಪ್ರಕಟಿಸಿದ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಬಸವಣ್ಣನವರು ಮಹಾನ್ ಕಾರ್ಯ ಮಾಡಿದ್ದಾರೆ. ಇಂಥವರನ್ನು ಮತ್ತೊಬ್ಬರೊಂದಿಗೆ ಹೋಲಿಸುವುದು ಸರಿಯಲ್ಲ ಎಂದರು.ಮನಸ್ಸು ನಿರಮ್ಮಳವಾಗುವಂಥ ಪುಸ್ತಕಗಳನ್ನು ಓದಬೇಕು. ಓದುವವರ ವರ್ಗ ಹೆಚ್ಚಾಗಬೇಕು. ಪ್ರತಿಯೊಂದೂ ಮನೆಯಲ್ಲಿ ಪುಸ್ತಕಗಳು ಇರಿವಂತಾಗಬೇಕು. ಪುಸ್ತಕಗಳ ಬೆಲೆಯನ್ನು ಕಟ್ಟಬಾರದು. ಕಣ್ಣನ್ನು ಹೊಲಸು ಮಾಡಿಕೊಳ್ಳದೇ ಜಗತ್ತು ನೋಡಬೇಕು, ಕೈಯನ್ನು ಹೊಲಸು ಮಾಡಿಕೊಳ್ಳದೇ ಕೆಲಸ ಮಾಡಬೇಕು. ಸತ್ಯದ ಕಡೆಗೆ ಮನಸ್ಸು ಹರಿಯಬೇಕು ಎಂದ ಅವರು, ಮುಂದೆಯೂ ಸಹ ಮುರುಘಾಮಠದಿಂದ ಉತ್ತಮ ಪುಸ್ತಕಗಳು ಪ್ರಕಟಣೆಯಾಗಲಿ ಎಂದು ಹಾರೈಸಿದರು.ಬಸವತತ್ವ ರತ್ನಾಕರ, ಗಣಭಾಷಿತ ರತ್ನಮಾಲೆ, ಬಸವ ಪುರಾಣ, ಶತಕತ್ರಯ, ಮೃತ್ಯುಂಜಯಪ್ಪಗಳು, ಮಹಾಂತಪ್ಪಗಳು ಎಂಬ ಆರು ಪುಸ್ತಕಗಳು ಬಿಡುಗಡೆಗೊಂಡವು.ಡಾ.ಗುರುಲಿಂಗ ಕಾಪಸೆ ಪುಸ್ತಕ ಪರಿಚಯಿಸಿದರು.ಬೇಲಿಮಠದ ಚರಮೂರ್ತಿ ಶಿವರುದ್ಧ ಸ್ವಾಮೀಜಿ, ಮೂರುಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು.ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಹಟ್ಟಿಯ ಫಕೀರಸಿದ್ಧರಾಮ ಸ್ವಾಮೀಜಿ, ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ, ಡಾ. ಚೆನ್ನವೀರ ಕಣವಿ, ಜಿ.ಜಿ.ದೊಡವಾಡ, ಬಾಬಾ ದತ್ತವಾಡ ಉಪಸ್ಥಿತರಿದ್ದರು. ವಿನಯ ಕುಲಕರ್ಣಿ ಸ್ವಾಗತಿಸಿದರು. ಪ್ರಭುಚನ್ನಬಸವ ಸ್ವಾಮೀಜಿ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.