ಮಂಗಳವಾರ, ಏಪ್ರಿಲ್ 13, 2021
32 °C

ಬಸವತತ್ವ ವಿಶ್ವವ್ಯಾಪಿ ಆಗಲಿ: ಅಶೋಕ ಖೇಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಬಸವಣ್ಣನವರ ತತ್ವ ವಿಶ್ವವ್ಯಾಪಿ ಆಗಬೇಕು ಎಂದು ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ ಖೇಣಿ ಅಭಿಪ್ರಾಯಪಟ್ಟರು.ಬಸವಕೇಂದ್ರವು ನಗರದ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಸಹಜ ಹಾಗೂ ಶರಣ ಸಂಸ್ಕೃತಿ ಉತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

 

ಬಸವಣ್ಣನವರ ವಚನಗಳಲ್ಲಿ ಅದ್ಭುತ ಶಕ್ತಿ ಅಡಗಿದೆ. ಅದಾಗಿಯೂ ಬಸವತತ್ವ ಕರ್ನಾಟಕ ದಾಟದೇ ಇರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.ಬಸವಣ್ಣನವರ ತತ್ವಗಳು ಕಾರ್ಲ್ ಮಾರ್ಕ್ಸ್‌ಗಿಂತಲೂ ಶ್ರೇಷ್ಠ ಆಗಿವೆ. ಒಂದು ವೇಳೆ ಬಸವಣ್ಣ ಬೇರೆ ದೇಶಗಳಲ್ಲಿ ಜನಿಸಿದ್ದರೆ ವಿಶ್ವ ಪ್ರಸಿದ್ಧಿ ಪಡೆಯುತ್ತಿದ್ದರು. ಅವರ ತತ್ವ ಎಲ್ಲೆಡೆ ಪಸರಿಸುತ್ತಿದ್ದವು. ಅದ್ದರಿಂದ ಬಸವತತ್ವವನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಆಗಬೇಕು ಎಂದರು.

 

ಬೀದರ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಭವನಕ್ಕೆ 20 ಲಕ್ಷ ರೂಪಾಯಿ ದೇಣಿಗೆ ಕೊಡುವುದಾಗಿ ಪ್ರಕಟಿಸಿದರು. ಕಾರಂಜಾ ಸಂತ್ರಸ್ತರಿಗೆ ಆರ್ಥಿಕ ಸಹಾಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.ಕಾಯಕ ಮತ್ತು ದಾಸೋಹ ತತ್ವ ಸಾರಿರುವ ಬಸವಣ್ಣ ಮಹಾ ಮಾನವತಾವಾದಿ ಆಗಿದ್ದರು ಎಂದು ಡಾ. ಪ್ರದೀಪಕುಮಾರ ಹೆಬ್ರಿ ಹೇಳಿದರು.ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಿದ್ದರು. ಬಸವಕೇಂದ್ರ ಕಾರ್ಯಾಧ್ಯಕ್ಷ ಶರಣಪ್ಪ ಮಿಠಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ ಅಧ್ಯಕ್ಷತೆ ವಹಿಸಿದ್ದರು.

 

ಸ್ವಾಗತ ಸಮಿತಿಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ, ನರೇಂದ್ರ ಖೇಣಿ, ಗುರುನಾಥ ಕೊಳ್ಳೂರ, ಸಂಜಯಖೇಣಿ, ಡಾ. ಶೈಲೇಂದ್ರ ಬೆಲ್ದಾಳೆ, ಬಸವಕೇಂದ್ರ ಜಿಲ್ಲಾ ಅಧ್ಯಕ್ಷ ಬಸವರಾಜ ಭರಶೆಟ್ಟಿ ಉಪಸ್ಥಿತರಿದ್ದರು. ಪ್ರಭುರಾವ ವಸ್ಮತೆ ಸ್ವಾಗತಿಸಿದರು. ಬಸವರಾಜ ರುದನೂರು ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.