ಶುಕ್ರವಾರ, ಜೂನ್ 18, 2021
23 °C

ಬಸವೇಶ್ವರ ಕೊಂಡೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳವಳ್ಳಿ: ತಾಲ್ಲೂಕಿನ ಅಗಸನಪುರದಲ್ಲಿ ಮಂಗಳವಾರ ಬೆಳಿಗ್ಗೆ ಶ್ರೀ ಬಸವೇಶ್ವರಸ್ವಾಮಿ ಕೊಂಡೋತ್ಸವ ಅದ್ದೂರಿಯಾಗಿ ನೆರವೇರಿತು.ಸೋಮವಾರ ಸಂಜೆ ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಕೊಂಡಕ್ಕೆ ಸೌದೆಗಳನ್ನು ತಂದು ಹಾಕಿದರು.

ನಂತರ ದೇವಾಲಯದ ಅರ್ಚಕ ನಾಗರಾಜು ಗ್ರಾಮದ ಹೊರವಲಯದಲ್ಲಿರುವ ಶನಿದೇವರ ದೇವಾಲಯದ ಬಳಿ ಪೂಜೆ ಸಲ್ಲಿಸಿ ಕಳಸವನ್ನು ತಮಟೆ ವಾದ್ಯಗಳೊಡನೆ ಗ್ರಾಮದ ಆರಾಧ್ಯರ ಮನೆಯಲ್ಲಿ ಇರಿಸಲಾಯಿತು.ಮಂಗಳವಾರ ಮುಂಜಾನೆ ಸಿದ್ಧಪಡಿಸಿದ್ದ ಬೆಂಕಿಯ ಮೇಲೆ ಓಡಿ ಹೋಗುವ ಮೂಲಕ ಕೊಂಡೋತ್ಸವ ನೆರವೇರಿತು. ನಂತರ ಉತ್ಸವ ಮೂರ್ತಿಯನ್ನು ಹೂವಿನಿಂದ ಅಲಂಕೃತಗೊಳಿಸಿ ಪೂಜಾಕುಣಿತದೊಡನೆ ಮನೆ-ಮನೆಗೆ ತೆರಳಿ ಪೂಜೆ ಮಾಡಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.