ಗುರುವಾರ , ಮೇ 19, 2022
23 °C

ಬಸ್ ನಿಲುಗಡೆ ಸಮಸ್ಯೆ

ನೊಂದ ಪ್ರಯಾಣಿಕರು Updated:

ಅಕ್ಷರ ಗಾತ್ರ : | |

ಶಿವಾಜಿನಗರದಿಂದ ಕನ್ನಿಂಗ್‌ಹ್ಯಾಂ ರಸ್ತೆ ಮೂಲಕ ವಸಂತನಗರ ರಸ್ತೆಯಲ್ಲಿ ಸಂಚರಿಸುವ ಬಿಎಂಟಿಸಿ ಬಸ್ಸುಗಳು ವಸಂತನಗರ ರಸ್ತೆಯಲ್ಲಿ ಬಸ್ ಶೆಲ್ಟರ್ ಇರುವ ಕಡೆ ನಿಲ್ಲಿಸದೇ ಮುಂದೆ ಸಿಗ್ನಲ್ ಲೈಟ್ ಬಳಿ ನಿಲ್ಲಿಸುವುದು ಅಥವಾ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ನಿಲ್ಲಿಸುತ್ತಿರುವುದರಿಂದ ಬಸ್ ಶೆಲ್ಟರ್ ಕೆಳಗೆ ಕಾದು ನಿಲ್ಲುತ್ತಿರುವ ಪ್ರಯಾಣಿಕರಿಗೆ ಅದರಲ್ಲೂ ಹೆಂಗಸರು, ಮಕ್ಕಳು ಹಾಗೂ ವೃದ್ಧರಿಗೆ ತುಂಬಾ ತೊಂದರೆಯಾಗುತ್ತಿದೆ.

 

ಈ ಬಗ್ಗೆ ಹಲವಾರು ಬಸ್ಸು ಚಾಲಕರಿಗೆ ಬಸ್ ಶೆಲ್ಟರ್‌ನಲ್ಲಿ ಬಸ್ಸನ್ನು ನಿಲ್ಲಿಸುವಂತೆ ಕೋರಿಕೆ ಮಾಡಿದ್ದಾಗ್ಯೂ ಪ್ರಯಾಣಿಕರ ಸಲಹೆಗೆ ಕವಡೆ ಕಿಮ್ಮತ್ತಿನ ಬೆಲೆಯನ್ನು ಕೊಡುತ್ತಿಲ್ಲ. ಪ್ರಯಾಣಿಕರ ಗೋಳಿಗೆ ಕೊನೆಯೇ ಇಲ್ಲದಂತಾಗಿರುತ್ತದೆ. ಚಾಲಕರು ಮತ್ತು ನಿರ್ವಾಹಕರು ತಮ್ಮ ಕರ್ತವ್ಯ ಪಾಲನೆಯಲ್ಲಿ ಸಾರ್ವಜನಿಕರೊಂದಿಗೆ ಸೌಜನ್ಯಯುತ ನಡವಳಿಕೆ ತೋರುತ್ತಿಲ್ಲ.ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಅವರ ಬೇಜವಾಬ್ದಾರಿತನದಿಂದಾಗಿ ಸಾರ್ವಜನಿಕರು ತೊಂದರೆಪಡುವಂತಾಗಿದೆ. ದಯವಿಟ್ಟು ಕನ್ನಿಂಗ್‌ಹ್ಯಾಂ ರಸ್ತೆಯಿಂದ ಮಿಲ್ಲರ್ ರಸ್ತೆ ವಸಂತನಗರ ಮೂಲಕ ಸಂಚರಿಸುವ ಎಲ್ಲ ಬಸ್ಸುಗಳೂ ಕಡ್ಡಾಯವಾಗಿ ವಸಂತನಗರ ಬಸ್ ನಿಲ್ದಾಣದಲ್ಲಿ ನಿಲ್ಲಿಸಲು ಎಲ್ಲಾ ಚಾಲಕರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲು ಕೋರುತ್ತೇವೆ.ಗಂಗಾನಗರ ಹಾಗೂ ಆರ್.ಟಿ. ನಗರದಿಂದ ಕನ್ನಿಂಗ್‌ಹ್ಯಾಂ ರಸ್ತೆ ಮೂಲಕ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಂಚರಿಸುವ ಬಿಎಂಟಿಸಿ ಬಸ್ಸುಗಳು ಆರಕ್ಷಕ ಮಹಾ ಅಧೀಕ್ಷಕರು (ಎಸ್.ಪಿ. ಆಫೀಸ್) ಕಛೇರಿ ಮುಂಭಾಗದಲ್ಲಿ ಸ್ಟಾಪ್ ನೀಡಿದಲ್ಲಿ ಪ್ರತಿನಿತ್ಯ ಪ್ರಯಾಣಿಸುವ ನೌಕರರಿಗೆ ತುಂಬಾ ಅನುಕೂಲವಾಗುತ್ತದೆ. ದಯವಿಟ್ಟು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಕಳಕಳಿಯಿಂದ ಪ್ರಾರ್ಥಿಸುತ್ತೇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.