ಗುರುವಾರ , ಮೇ 28, 2020
27 °C

ಬಸ್ ಪ್ರಯಾಣ ದರ ಏರಿಕೆ 21ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಪರಿಷ್ಕರಿಸಲಾಗಿದ್ದು, ನೂತನ ದರ ಇದೇ 21ರಿಂದ ಜಾರಿಗೆ ಬರಲಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಿಳಿಸಿದೆ.ಗ್ರಾಮಾಂತರ ಸಿಟಿ ಬಸ್ ಹಾಗೂ ನಗರ ಸಿಟಿ ಬಸ್ ಪ್ರಯಾಣ ದರದಲ್ಲಿ 50 ಪೈಸೆಯಷ್ಟು ಏರಿಕೆಯಾಗಿದ್ದು, ಎಕ್ಸ್‌ಪ್ರೆಸ್ ಹಾಗೂ ಷಟಲ್ ಬಸ್ ದರವನ್ನು ರೂ. 1 ಹೆಚ್ಚಿಸಲಾಗಿದೆ. ಸಿಟಿ ಬಸ್ ಪ್ರಯಾಣದ ಕನಿಷ್ಠ ದರದಲ್ಲಿ ಏರಿಕೆ ಆಗಿಲ್ಲ. 2.1 ಕಿ.ಮೀ.ನಿಂದ 4 ಕಿ.ಮೀ.ವರೆಗೆ ಇದ್ದ ರೂ.   4.5 ದರವನ್ನು 50 ಪೈಸೆ ಏರಿಕೆ ಮಾಡಿ ರೂ. 5ಕ್ಕೆ ಏರಿಸಲಾಗಿದೆ.ಹೊಸ ದರದಂತೆ ಎಕ್ಸ್‌ಪ್ರೆಸ್ ಹಾಗೂ ಷಟಲ್ ಬಸ್ ದರವನ್ನು ಪ್ರತಿ ಸ್ಟೇಜ್‌ಗೆ ರೂ.1ರಂತೆ ಹೆಚ್ಚಿಸಲಾಗಿದೆ. 6.50 ಕಿ.ಮೀ.ವರೆಗೆ ಇದ್ದ ರೂ. 4 ಪ್ರಯಾಣದರ ಈಗ ರೂ. 5ಗೆ ಹೆಚ್ಚಿಸಲಾಗಿದೆ.ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳ ಕನಿಷ್ಟ ದರವೂ ರೂ. 4 ಇದ್ದು, 4.1 ಕಿ.ಮೀ.ಯಿಂದ ಹೆಚ್ಚಿನ ದೂರಕ್ಕೆ ಪ್ರಯಾಣಿಸುವ ದರವನ್ನು ರೂ.1ರಂತೆ ಹೆಚ್ಚಿಸಲಾಗಿದೆ. ಪರಿಷ್ಕೃತ ದರದಂತೆ ಇದುವರೆಗೆ ಇದ್ದ 5 ರೂ. ಬದಲಾಗಿ ರೂ.6 ಪಾವತಿಸಿ ಪ್ರಯಾಣಿಸಬೇಕಿದೆ. ಎಕ್ಸ್‌ಪ್ರೆಸ್ ಹಾಗೂ ಸರ್ವಿಸ್ ಬಸ್‌ಗಳ ಕನಿಷ್ಟ ಪ್ರಯಾಣ ದರವನ್ನು ರೂ.4ರಿಂದ 5ಕ್ಕೆ ಏರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.