ಗುರುವಾರ , ಫೆಬ್ರವರಿ 25, 2021
29 °C

ಬಾಂಗ್ಲಾ ಟೆಸ್ಟ್‌: ಭಾರತಕ್ಕೆ ಉತ್ತಮ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಂಗ್ಲಾ ಟೆಸ್ಟ್‌: ಭಾರತಕ್ಕೆ ಉತ್ತಮ ಆರಂಭ

ಫಟುಲ್ಲಾ (ಪಿಟಿಐ): ಬಾಂಗ್ಲಾದೇಶದ ವಿರುದ್ಧದ ಏಕೈಕ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆದಿದ್ದು, ಊಟದ ವಿರಾಮದ ವೇಳೆಗೆ ವಿಕೆಟ್‌ ನಷ್ಟವಿಲ್ಲದೇ, ‌107 ರನ್‌ ಗಳಿಸಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ನಿರ್ಧಾರ ಕೈಗೊಂಡ ನಾಯಕ ವಿರಾಟ್ ಕೊಹ್ಲಿ ಯೋಚನೆ ಫಲ ನೀಡಿದೆ. ಕೊಹ್ಲಿ ನಿರ್ಧಾರ ಸಮರ್ಥಿಸುವಂತೆ ಆರಂಭಿಕ ಆಟಗಾರರಾದ ಶಿಖರ್ ಧವನ್‌ (74) ಹಾಗೂ ಮುರಳಿ ವಿಜಯ್ (33) ಅವರು ಉತ್ತಮ ಬುನಾದಿ ಒದಗಿಸಿದ್ದಾರೆ.

ಆಸ್ಟೇಲಿಯಾ ವಿರುದ್ಧದ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ತಂಡದಿಂದ ಹೊರ ಉಳಿದಿದ್ದ ಧವನ್‌ ಅಂತಿಮ 11ರಲ್ಲಿ ಸ್ಥಾನ ಪಡೆದಿದ್ದು, 71 ಎಸೆತಗಳಲ್ಲಿ 12 ಬೌಂಡರಿ ಸೇರಿದಂತೆ 74 ರನ್‌ ಬಾರಿಸಿ ಕ್ರೀಸ್‌ನಲ್ಲಿದ್ದಾರೆ.ನಾಲ್ಕು ಸ್ಪಿನ್ನರ್‌ಗಳು ಹಾಗೂ ಏಕೈಕ ವೇಗಿಯೊಂದಿಗೆ ಕಣಕ್ಕಿಳಿದಿರುವ ಆತಿಥೇಯ ಬಾಂಗ್ಲಾದೇಶ ತಂಡದ ಬೌಲರ್‌ಗಳನ್ನು ಧವನ್‌ ಚೆನ್ನಾಗಿಯೇ ದಂಡಿಸುತ್ತಿದ್ದಾರೆ.

ಇನ್ನು, ವಿಜಯ್ ಅವರು ತಾಳ್ಮೆಯ ಆಟಕ್ಕೆ ಮೊರೆ ಹೋಗಿದ್ದಾರೆ. 70 ಎಸೆತಗಳನ್ನು ಎದುರಿಸಿ 33 ರನ್‌ ಕಲೆ ಹಾಕಿದ್ದಾರೆ. 24ನೇ ಓವರ್‌ ವೇಳೆ ಮಳೆ ಅಡ್ಡಿ ಪಡಿಸುವ ಮುನ್ನ ಎಡಗೈ ಆಟಗಾರ ಧವನ್ ಅವರು 73 ರನ್‌ ಗಳಿಸಿದ್ದಾಗ ಜೀವದಾನ ಪಡೆದರು.

ಬಳಿಕ ಮಳೆ ಸುರಿದಿದ್ದರಿಂದ ಊಟದ ವಿರಾಮವನ್ನು ಪಡೆಯಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.