ಢಾಕಾ (ಪಿಟಿಐ): ಬಾಂಗ್ಲಾದೇಶದ ನದಿಯೊಂದರಲ್ಲಿ ಮಂಗಳವಾರ ಸುಮಾರು 300 ಮಂದಿ ಪ್ರಯಾ ಣಿಸುತ್ತಿದ್ದ ದೋಣಿಯೊಂದು ತೈಲ ಟ್ಯಾಂಕರ್ವೊಂದಕ್ಕೆ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿ ಕನಿಷ್ಠ 35 ಜನರು ಮೃತಪಟ್ಟಿದ್ದು, ಇತರ ಸುಮಾರು 200 ಪ್ರಯಾಣಿಕರು ಕಣ್ಮರೆಯಾಗಿದ್ದಾರೆ.

ಬೆಳಗಿನ ಜಾವ 3 ಗಂಟೆಗೆ ಕೇಂದ್ರ ಬಾಂಗ್ಲಾದ ಮೇಘನಾ ನದಿಯಲ್ಲಿ ಈ ಅಪಘಾತ ಸಂಭವಿಸಿದೆ. ಕೂಡಲೇ 50 ಮಂದಿ ಈಜಿಕೊಂಡು ಸುರಕ್ಷಿತವಾಗಿ ದಡ ಸೇರಿದ್ದಾರೆ. ಕೆಲವರನ್ನು ಸಮೀಪದಲ್ಲಿದ್ದ ಮೀನುಗಾರಿಕಾ ದೋಣಿಗಳು ಅಪಾಯ ದಿಂದ ಪಾರು ಮಾಡಿವೆ. ರಕ್ಷಣಾ ಕಾರ್ಯಕರ್ತರು ನಾಲ್ವರು ಮಹಿಳೆ ಯರು ಮತ್ತು ಮೂವರು ಬಾಲಕಿಯರು ಸೇರಿದಂತೆ 35 ಶವಗಳನ್ನು ಮುಳುಗಿದ ದೋಣಿಯಿಂದ ಹೊರಗೆತ್ತಿದ್ದಾರೆ ಎಂದು ನೌಕಾಯಾನ ಸಚಿವ ಶಹಜಹಾನ್ ಖಾನ್ ತಿಳಿಸಿದ್ದಾರೆ.

ಕಣ್ಮರೆಯಾದವರ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆದಿದ್ದು, ಮುಳು ಗು ತಜ್ಞ ಈಜುಗಾರರನ್ನು ಬಳಸಿ ಕೊಳ್ಳ ಲಾಗಿದೆ.

ಮುಳುಗಿದ ದೋಣಿ ಮೇಲೆತ್ತುವ ಕಾರ್ಯವೂ ಸಾಗಿದ್ದು, ಅದನ್ನು ಹೊರತೆಗೆದ ನಂತರವಷ್ಟೇ ನಿಜ ಚಿತ್ರಣ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.