ಬುಧವಾರ, ಸೆಪ್ಟೆಂಬರ್ 23, 2020
26 °C

ಬಾಂಬೆ ಜಯಶ್ರೀ- ಪಲ್ಲವಿ ಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಂಬೆ ಜಯಶ್ರೀ- ಪಲ್ಲವಿ ಗಾನ

`ಸಂಗೀತವನ್ನು ನಮ್ಮ ಬದುಕಿನೊಂದಿಗೆ ಹೇಗೆ ಬೆಸೆಯುತ್ತೇವೆಯೋ ಹಾಗೆಯೇ ಸಂಗೀತ ಕಾರ್ಯನಿರ್ವಹಿಸುತ್ತದೆ. ಇದನ್ನು ನನ್ನ ಸಂಗೀತದ ಬದುಕಿನುದ್ದಕ್ಕೂ ಕಂಡುಕೊಂಡಿದ್ದೇನೆ. ನನ್ನಳೊಗೆ ಈ ಭಾವ ಹುಟ್ಟಲು ಸಂಗೀತ ಕುರಿತ ಆಳವಾದ ಜ್ಞಾನ, ಹಾಡಿನ ತಾತ್ವಿಕ ಅರ್ಥ ಅಥವಾ ಶಾಸ್ತ್ರೀಯ ಸಂಗೀತದಲ್ಲಿನ ಭಕ್ತಿ ಕಾರಣ ಇರಬಹುದು.~- ಖ್ಯಾತ ಕಲಾವಿದೆ ಬಾಂಬೆ ಜಯಶ್ರೀ ಸಂಗೀತವನ್ನು ವ್ಯಾಖ್ಯಾನಿಸುವ ಪರಿ ಇದು. ಸಂಗೀತವನ್ನು ಇನ್ನಿಲ್ಲದಂತೆ ಪ್ರೀತಿಸುವ, ಸಾವಿರಾರು ಗೀತೆಗಳಿಗೆ ಸುಶ್ರಾವ್ಯ ಕಂಠ ನೀಡಿರುವ ಬಿ.ಜಯಶ್ರೀ ಅವರಿಗೆ ದೇಶದ ಉದ್ದಗಲಕ್ಕೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈಗ ಬೆಂಗಳೂರು ನಗರಿಗರಿಗೆ ಜಯಶ್ರೀ ಕಂಠವನ್ನು ಮತ್ತೊಮ್ಮೆ ಆಸ್ವಾದಿಸುವ ಹಿಗ್ಗು.ಬಾಂಬೆ ಜಯಶ್ರೀ ಆಗಸ್ಟ್ 2 ಮತ್ತು 3ರಂದು `ಲಿಸನಿಂಗ್ ಟು ಲೈಫ್-ದಿ ಜರ್ನಿ ಆಫ್ ಎ ರಾಗ~ ಸಂಗೀತ ಕಾರ್ಯಕ್ರಮ ನಡೆಸಿಲಿದ್ದಾರೆ.70-80ರ ದಶಕದ ಖ್ಯಾತ ಹಾಡುಗಳನ್ನೂ ಒಳಗೊಂಡ ಈ ಕಾರ್ಯಕ್ರಮ ಆಗಸ್ಟ್ 2ರಂದು ಜೆ.ಪಿ.ನಗರದ ಬ್ರಿಗೇಡ್ ಕನ್‌ವೆನ್ಶನ್ ಸೆಂಟರ್ ಹಾಗೂ ಆಗಸ್ಟ್ 3ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ. 90 ನಿಮಿಷ  ಅವಧಿಯ ಈ ಕಾರ್ಯಕ್ರಮ ಎರಡೂ ದಿನವೂ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಕನ್ನಡದ ಖ್ಯಾತ ಹಾಡುಗಾರ್ತಿ ಎಂ.ಡಿ.ಪಲ್ಲವಿ ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಲಿದ್ದಾರೆ. ಖುದ್ದು ಬಿ.ಜಯಶ್ರೀ ಅವರೇ ಪಲ್ಲವಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಮತ್ತೊಂದು ವಿಶೇಷ. ಹಾಗಾಗಿ ಸಂಗೀತ ಪ್ರೇಮಿಗಳು ಜಯಶ್ರೀ ಜತೆಗೆ ಪಲ್ಲವಿಯವರ ಮಧುರ ಗಾಯನವನ್ನು ಸವಿಯಬಹುದು.

 

ಜೊತೆಗೆ ಸಾಂಪ್ರದಾಯಿಕ ಹಾಗೂ ಎಲೆಕ್ಟ್ರಾನಿಕ್ ವಯೊಲಿನ್‌ನಲ್ಲಿ ಎಂಬಾರ್ ಕಣ್ಣನ್, ಕೊಳಲಿನಲ್ಲಿ ನವೀನ್ ಅಯ್ಯರ್, ಪಿಯಾನೊ  ಹಾಗೂ ಹಾರ್ಮೋನಿಯಂನಲ್ಲಿ ನವನೀತ್ ಸುಂದರ್ ಹಾಗೂ ಮೃದಂಗದಲ್ಲಿ ಜೆ. ವೈದ್ಯನಾಥನ್ ಮತ್ತು ಸಾಯಿ ಶ್ರವಣಂ ತಬಲಾದಲ್ಲಿ ಸಾಥ್ ನೀಡಲಿದ್ದಾರೆ. ಜಯಶ್ರೀ ಅವರ ವಿದ್ಯಾರ್ಥಿಗಳು ಕೋರಸ್ ಹಾಡಲಿದ್ದಾರೆ.  ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತವಲ್ಲದೆ ಹಿಂದಿ, ತಮಿಳು ಮತ್ತು ಕನ್ನಡ ಚಲನಚಿತ್ರ ಗೀತೆಗಳು ಹಾಗೂ ಜಾನಪದ ಸಂಗೀತವೂ ಇರುತ್ತದೆ. `ಇಲ್ಲಿ ಕೇಳುಗರೇ ಮುಖ್ಯ.ಸುಮಧುರ ಸಂಗೀತಕ್ಕೆ ಕೇಳುಗರ ಹೃದಯ ಹೇಗೆ ಮಿಡಿಯುತ್ತದೆ ಎನ್ನುವುದನ್ನು ತೋರಿಸುವುದು ಈ ಸಂಗೀತ ಕಾರ್ಯಕ್ರಮದ ಗುರಿ~ ಎನ್ನುವ ಜಯಶ್ರೀ ಸ್ವತಃ  ಕಾರ್ಯಕ್ರಮವನ್ನು ನಿರ್ದೇಶಿಸಿದ್ದಾರೆ. ಕಾರ್ಯಕ್ರಮದ ನಡುವೆ ಸಿಗುವ ವಿರಾಮದಲ್ಲಿ ಸಂಗೀತ ಏನು ಅರ್ಥ ನೀಡುತ್ತದೆ ಎನ್ನುವ ಕುರಿತು ಜಯಶ್ರಿ ಮಾತನಾಡಲಿದ್ದಾರೆ.ಟಿಕೆಟ್ ಹಾಗೂ ಹೆಚ್ಚಿನ ಮಾಹಿತಿಗೆ: 4206 4969,  3989 5050, 4018 2222, 2344 3956.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.