ಶುಕ್ರವಾರ, ಮೇ 14, 2021
21 °C

ಬಾಕ್ಸರ್ 150ಸಿಸಿ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮೀಣ ಮತ್ತು ಅರೆನಗರ ಪ್ರದೇಶದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಬಜಾಜ್ ಆಟೊ ಸುಧಾರಿತ `ಬಾಕ್ಸರ್ 150ಸಿಸಿ~ ಬೈಕ್ ಅನ್ನು ಶುಕ್ರವಾರ ರಾಜ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.



`ಭಾರತ್ ಬೈಕ್~ ಎಂದು  ಹೆಸರಿಸಲಾಗಿರುವ  ಈ ಬೈಕಿನ ಬೆಂಗಳೂರು   ಎಕ್ಸ್‌ಷೋರೂಂ ಬೆಲೆ ರೂ 42,660. ಗ್ರಾಮೀಣ ಮತ್ತು ಕಚ್ಚಾ ರಸ್ತೆಗಳಿಗೆ ಹೊಂದಿಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಎಲೆಕ್ಟ್ರಿಕ್ ಸ್ಟಾರ್ಟರ್ ಜತೆಗೆ 55 ಕಿ.ಮೀ ಇಂಧನ ಕ್ಷಮತೆ ಹೊಂದಿದೆ.



150 ಸಿಸಿ  ಸರಣಿಯಲ್ಲಿ ಅತ್ಯಂತ ಕಡಿಮೆ ಬೆಲೆ ಮತ್ತು ಉನ್ನತ ದರ್ಜೆ ತಂತ್ರಜ್ಞಾನ ಹೊಂದಿರುವ ಬೈಕ್ ಇದಾಗಿದೆ ಎಂದು ಬಜಾಜ್ ಆಟೊ ಲಿಮಿಟೆಡ್‌ನ ಮಾರುಕಟ್ಟೆ ವ್ಯವಸ್ಥಾಪಕ ಚಂದ್ರಶೇಖರ್ ಆರ್ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.