ಗುರುವಾರ , ಜೂಲೈ 2, 2020
23 °C

ಬಾಗಿದ ಮೂಗಿನ ಬಾವಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಿದ ಮೂಗಿನ ಬಾವಲಿ

ಜಗತ್ತಿನಲ್ಲೇ ಅತ್ಯಂತ ಸಣ್ಣ ಗಾತ್ರದ ಸಸ್ತನಿಯಿದು. ಥಾಯ್ಲೆಂಡ್‌ನಲ್ಲಿ ಮಾತ್ರ ಕಂಡುಬರುವ ಈ ಬಾಗಿದ ಮೂಗಿನ ಬಾವಲಿ 2.9ರಿಂದ 3.3 ಸೆಂ.ಮೀ ಉದ್ದ ಇರುತ್ತದೆ. 1.7 ರಿಂದ 2 ಗ್ರಾಂ ತೂಕ ಇರುತ್ತವೆ. ಅದರ ರೆಕ್ಕೆಗಳು 15 ಸೆಂ.ಮೀ ಅಗಲ ಇರುತ್ತವೆ. ಅಲ್ಲದೇ ಅಗೋಚರ ಬಾಲ ಇದಕ್ಕಿದೆ.

 

ಅಂಗೈಯಲ್ಲಿ ಹಿಡಿಯಬಹುದಾದ ಈ ಬಾವಲಿಗಳು ಸುಣ್ಣದ ಕಲ್ಲಿನ ಗುಹೆಗಳಲ್ಲಿ ವಾಸಿಸಲು ಇಷ್ಟಪಡುತ್ತವೆ. ಕೆಂಪು ಕಂದು ಬಣ್ಣದ ಈ ಬಾವಲಿಯ ಪ್ರಮುಖ ಆಹಾರ ಕೀಟಗಳು. ಕಾಡು ಮತ್ತು ಸುಣ್ಣದ ಕಲ್ಲಿನ ಗುಹೆಗಳ ನಾಶ ಇವುಗಳ ಸಂತತಿ ಕೆಳಮುಖವಾಗಲು ಕಾರಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.