ಹಾಸನ: `ಟಿ.ವಿ ಭರಾಟೆಯಲ್ಲಿ ಆಕಾಶವಾಣಿ ಕಾರ್ಯಕ್ರಮಗಳನ್ನು ಕೇಳುವ ಜನರಿಲ್ಲ ಎಂಬ ವಾದವನ್ನು ಹಾಸನ ಆಕಾಶವಾಣಿ ಹುಸಿಯಾಗಿಸಿದ್ದು, ಈ ಕೇಂದ್ರದವರು ಸಿದ್ಧಪಡಿಸಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ ಪ್ರಸಾರಗೊಂಡ `ದೀವಿಗೆ~ ಕಾರ್ಯಕ್ರಮ ಮೆಚ್ಚಿ ರಾಜ್ಯದ ವಿವಿಧ ಭಾಗದ ಹತ್ತು ಸಾವಿರ ಕೇಳುಗರು ಪತ್ರ ಬರೆದಿದ್ದಾರೆ.

ನಗರದ ಆಕಾಶವಾಣಿ ಕಚೇರಿಯಲ್ಲಿ ಶುಕ್ರವಾರ ಈ ಪತ್ರಗಳನ್ನು ಸಿಬ್ಬಂದಿ ಪ್ರದರ್ಶಿಸಿದರು. `ಇಂಥ ಪ್ರತಿಕ್ರಿಯೆ ಬರಬಹುದು ಎಂಬ ನಿರೀಕ್ಷೆ ಇರಲಿಲ್ಲ. ಮಾರ್ಚ್ ಅಂತ್ಯದ ವೇಳೆಗೆ ಇಷ್ಟೇ ಸಂಖ್ಯೆಯ ಪತ್ರಗಳು ಬರುವ ಸಾಧ್ಯತೆ ಇದೆ~ ಎಂದು ತಿಳಿಸಿದರು.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದ ಬಗ್ಗೆ ಹಾಸನ ಆಕಾಶವಾಣಿ ಕೇಂದ್ರದವರು ಸರಣಿ ಕಾರ್ಯಕ್ರಮ ಆರಂಭಿಸಿದ್ದರು. ಒಟ್ಟು 80 ಕಂತುಗಳ ಕಾರ್ಯಕ್ರಮದಲ್ಲಿ ಈಗಾಗಲೇ 69 ಕಂತುಗಳು ಬಿತ್ತರಗೊಂಡಿವೆ.

ಪ್ರತಿದಿನ ಸಂಜೆ 7.45ರಿಂದ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ `ದೀವಿಗೆ~ ಹೆಸರಿನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕಾರ್ಯಕ್ರಮದ ಅಂತ್ಯದಲ್ಲಿ ಒಂದು ಪ್ರಶ್ನೆ ಕೇಳಿ ಉತ್ತರ ಕಳುಹಿಸುವಂತೆ ಕೇಳುಗರಿಗೆ ಕೋರಲಾಗುತ್ತಿದೆ.

ಕಳೆದ ವರ್ಷ ಇದೇ ರೀತಿಯ ಕಾರ್ಯಕ್ರಮ ಪ್ರಸಾರವಾಗಿದ್ದರೂ ಇಷ್ಟೊಂದು ಪ್ರತಿಕ್ರಿಯೆ ಬಂದಿರಲಿಲ್ಲ. ಈ ಬಾರಿ ಕೇಳುಗರ ಸ್ಪಂದನೆ ಅಚ್ಚರಿ ಮೂಡಿಸಿದೆ ಎಂದು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಕರಾದ ಎಚ್.ಶ್ರೀನಿವಾಸ್, ನಾರಾಯಣಎಂ.ಭಟ್, ಬೇದ್ರೆ ಮಂಜುನಾಥ್ ಹಾಗೂ ಪ್ರಸಾರ ನಿರ್ವಾಹಕ ವಿಜಯ್ ಅಂಗಡಿ ತಿಳಿಸಿದರು.

`ಕಳೆದ ಬಾರಿ ಅಧಿಕಾರಿಗಳ ಸಂದರ್ಶನ ನಡೆಸಿ ಯೋಜನೆಯ ಮಾಹಿತಿ ನೀಡಿದ್ದೆವು. ಈ ಬಾರಿ ಫಲಾನುಭವಿಗಳನ್ನು ಮಾತನಾಡಿಸಿ, ಅವರ ಸುಖ - ದುಃಖಗಳನ್ನು ಅರಿಯುವ ಪ್ರಯತ್ನ ಮಾಡ್ದ್ದಿದೇವೆ. ಒಟ್ಟು 16 ಜಿಲ್ಲೆಗಳ ಪ್ರಮುಖ ಹಳ್ಳಿಗಳಲ್ಲಿ ಪ್ರವಾಸ ಮಾಡಿ ಉದ್ಯೋಗ ಖಾತ್ರಿ ಯೋಜನೆಯಿಂದ ಯಾರಿಗೆ ಎಷ್ಟು ಲಾಭವಾಗಿದೆ ಎಂಬುದರ ಮಾಹಿತಿ ಸಂಗ್ರಹಿ ಸಿದ್ದೇವೆ. ಕೂಲಿ ಕಾರ್ಮಿಕರ ಸಂದರ್ಶನ ಮಾಡಿದ್ದೇವೆ. ಈ ಯೋಜನೆಯಿಂದ ಪರೋಕ್ಷವಾಗಿ ಆಗಿರುವ ಸಾಮಾಜಿಕ ಪರಿಣಾಮಗಳೇನು ಎಂಬುದೂ ಇದರಿಂದ ತಿಳಿದುಬಂದಿದೆ~ ಎಂದರು.

ಬೆಳಗಾವಿ, ಗುಲ್ಬರ್ಗಾ, ರಾಯಚೂರು, ಮಂಗಳೂರು. ಹೀಗೆ ರಾಜ್ಯದ ಮೂಲೆ ಮೂಲೆಗಳಿಂದ ಪತ್ರಗಳು ಬಂದಿವೆ. ಕೆಲವರಂತೂ ದೀರ್ಘವಾದ ಪ್ರಬಂಧ ಬರೆದು ಕಳುಹಿಸಿದ್ದಾರೆ. ಕೇಳುಗರೇ ಇಲ್ಲದೆ ಆಕಾಶವಾಣಿ ತನ್ನ ಔಚಿತ್ಯ ಕಳೆದುಕೊಳ್ಳುತ್ತಿದೆ ಎಂಬುದನ್ನು ಈ ಕಾರ್ಯಕ್ರಮ ಹುಸಿಯಾಗಿಸಿದೆ ಎಂದು ಸಿಬ್ಬಂದಿ ಹೆಮ್ಮೆಯಿಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.