ಮಂಗಳವಾರ, ಜನವರಿ 28, 2020
18 °C

ಬಾಯರ್ಸ್ ಕಾಫಿಗೆ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಫಿ ಮಂಡಳಿ ಮತ್ತು ಇಂಡಿಯಾ ಕಾಫಿ ಟ್ರಸ್ಟ್ ಜಂಟಿಯಾಗಿ ನೀಡುವ ಪ್ರತಿಷ್ಠಿತ `ಬೆಸ್ಟ್ ರೋಸ್ಟರ್ಸ್‌ ಸಿಲ್ವರ್ ಅವಾರ್ಡ್-2012~ ಪ್ರಶಸ್ತಿಯು ಈ ಬಾರಿ ದಕ್ಷಿಣ ಭಾರತದ ಜನಪ್ರಿಯ ಕಾಫಿ ಉತ್ಪನ್ನಗಳ ತಯಾರಿಕಾ ಕಂಪನಿ ಬಾಯರ್ಸ್‌ ಕಾಫಿಗೆ ದೊರೆತಿದೆ.ಉತ್ತಮ ಗುಣಮಟ್ಟದ ಕಾಫಿ ಬೀಜಗಳ ಆಯ್ಕೆ,  ಆಧುನಿಕ ತಂತ್ರಜ್ಞಾನದ ಅಳವಡಿಕೆಯಲ್ಲಿ  ಗಮನಾರ್ಹ ಯಶಸ್ಸು ಸಾಧಿಸಿರುವುದಕ್ಕೆ ಈ ಪ್ರಶಸ್ತಿ ನೀಡಲಾಗಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಕಾಫಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸತತವಾಗಿ ಎರಡನೇ ಬಾರಿಗೆ ಪ್ರಶಸ್ತಿ ಬಂದಿರುವುದು  ಸಂತಸ ತಂದಿದೆ.  ಗ್ರಾಹಕರಿಗೆ ಮತ್ತಷ್ಟು ಉತ್ತಮ ಕಾಫಿ ಉತ್ಪನ್ನ  ಪೂರೈಸುವ ಜವಾಬ್ದಾರಿ ಹೆಚ್ಚಿದೆ ಎಂದು ಆರ್. ಶ್ರೀಕಾಂತ್ ರಾವ್   ಹರ್ಷ ವ್ಯಕ್ತಪಡಿಸಿದ್ದಾರೆ.

 

ಪ್ರತಿಕ್ರಿಯಿಸಿ (+)