ಬಾರ್ಬೆಕ್ಯೂ ಸವಿರುಚಿ

ಸೋಮವಾರ, ಮೇ 20, 2019
28 °C

ಬಾರ್ಬೆಕ್ಯೂ ಸವಿರುಚಿ

Published:
Updated:

ಬಾರ್ಬೆಕ್ಯೂ ನೇಷನ್ ರೆಸ್ಟೊರೆಂಟ್ ಮೊಘಲ್, ನಿಜಾಂ, ರಜಪೂತ್ ಹಾಗೂ ಕಾಶ್ಮೀರಿ ರಾಜಶೈಲಿಯ ತಿನಿಸುಗಳಿಗೆ ಪ್ರಸಿದ್ಧಿ. ಮೊದಲ ಸಲ ರೆಸ್ಟೊರೆಂಟ್‌ನಲ್ಲಿ ಲೈವ್‌ಗ್ರಿಲ್ ಪರಿಚಯಿಸಿದ ಕೀರ್ತಿ ಸಹ ಅದಕ್ಕೆ ಸಲ್ಲುತ್ತದೆ.ಅಲ್ಲಿ ಈಗ ರಾಜ ಮಹಾರಾಜರು ಸೇವಿಸುತ್ತಿದ್ದ ರಾಜ ವೈಭೋಗದ ವಿಶೇಷ ತಿನಿಸುಗಳ `ಶಾಹಿ ದಸ್ತರ್ಕ್‌ವಾನ್~ ಆಹಾರ ಮೇಳ ಆರಂಭವಾಗಿದ್ದು ಸೆ 11ರ ವರೆಗೆ ನಡೆಯಲಿದೆ. `ಫೀಲ್ ಟ್ರೂಲಿ ಲೈಕ್ ಎ ಕಿಂಗ್~ ಎಂಬ ಕ್ಯಾಚಿಟ್ಯಾಗ್ ಲೈನ್‌ನೊಂದಿಗೆ ಆಹಾರ ಪ್ರಿಯರ ನಾಲಗೆ ರುಚಿ ತಣಿಸಲಿದೆ.ಬಾರ್ಬೆಕ್ಯೂ ಸಸ್ಯಾಹಾರ ಹಾಗೂ ಮಾಂಸಾಹಾರ ತಿನಿಸುಗಳಿಗೂ ಖ್ಯಾತಿ ಹೊಂದಿದೆ. ಇಲ್ಲಿ ಭೇಟಿ ನೀಡಿ ರಾಜ ವೈಭೋಗದ ತಿನಿಸುಗನ್ನು ಸವಿಯಬಹುದು. ರೆಸ್ಟೋರೆಂಟ್‌ನ ಒಳಗೋಡೆಯಲ್ಲಿ ಚಿತ್ರಣಗೊಂಡಿರುವ ಕಲೆ ಹಾಗೂ ಹಿತವಾಗಿ ಕೇಳುವ ಸಂಗೀತ ಭೋಜನದ ಸವಿಯನ್ನು ಹೆಚ್ಚಿಸಲಿದೆ.ಗುಷ್ತಬಾ, ಸುಲ್ತಾನಿ ಮುರ್ಗ್, ಟಬ್ಕ್ ಮಾಸ್ ಮೊದಲಾದ ಮಾಂಸಾಹಾರಿ ಖಾದ್ಯಗಳು. ರಜಪುತ್ ರಾಜರ ಇಷ್ಟದ ಶಾಹಿ ದಸ್ತ್‌ರ್ಕ್‌ವಾನ್, ಡಿಂಗ್ರಿ ಈ ಖಾಸ್, ದಹೀ ಕೆ ಶೋಲೆ ಈ ಮೇಳದ ವಿಶೇಷ ಆಕರ್ಷಣೆ.ಸ್ಥಳ: ಇಂದಿರಾನಗರ, ಕೋರಮಂಗಲ ಮತ್ತು ಜೆಪಿ ನಗರ ರೆಸ್ಟೊರೆಂಟ್. ಮಾಹಿತಿಗೆ: 93413 32477. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry