ಚಾಮರಾಜನಗರ: `ಅನಿಷ್ಟ ಬಾಲಕಾರ್ಮಿಕ ಪದ್ಧತಿಯ ಮೂಲೋತ್ಪಾಟನೆಗೆ ಶಿಕ್ಷಣವೇ ಅಸ್ತ್ರ' ಎಂದು ಹಿರಿಯ ನ್ಯಾಯಾಧೀಶ ಎಂ. ಭೃಂಗೇಶ್ ಹೇಳಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸಾಧನ ಸಂಸ್ಥೆ, ಓಡಿಪಿ ಸಂಸ್ಥೆ ಹಾಗೂ ಜಿಲ್ಲಾ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.

ಮಕ್ಕಳ ಬಾಲ್ಯದ ಆಟವನ್ನು ಕಸಿಯುವ ಹಕ್ಕು ಪೋಷಕರಿಗಿಲ್ಲ. ಬಾಲ್ಯದ ಆಟ ಸಹಜವಾಗಿರುತ್ತದೆ. ಇದರೊಂದಿಗೆ ಮಕ್ಕಳು ಪಾಠವನ್ನು ಉತ್ಸಾಹದಿಂದ ಕಲಿಯುತ್ತಾರೆ. ಬಾಲ್ಯದಲ್ಲಿ ಕಾರ್ಮಿಕರಾಗಿ ದುಡಿಸಿದರೆ ಅವರ ಭವಿಷ್ಯ ಮಂಕಾಗಲಿದೆ. ಮಾನಸಿಕ ಖಿನ್ನತೆಗೂ ಒಳಗಾಗು ತ್ತಾರೆ. ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಗೆ ದೂಡಬಾರದು. ಅವರನ್ನು ಮುಖ್ಯವಾಹಿನಿಗೆ ತಂದರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಾರೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಮಾತನಾಡಿ, `ಬಾಲ್ಯವಿವಾಹ ಪದ್ಧತಿಗೆ ಕಡಿವಾಣ ಹಾಕಬೇಕಿದೆ. ಈ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ವಿಮುಕ್ತಿಗೊಳಿಸಿ ಅವರ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಂಘ-ಸಂಸ್ಥೆಗಳು ಸಹಕಾರ ನೀಡಬೇಕು' ಎಂದು ಹೇಳಿದರು.

ಮಹಾತ್ಮರು ಸಾಧನೆ ಮಾಡಿರುವುದರ ಹಿಂದೆ ಅವರ ಬಾಲ್ಯ ಮಹತ್ವ ಪಾತ್ರವಹಿಸಿದೆ. ಪೋಷಕರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ವೇಳೆ ನಿಗದಿಪಡಿಸಿ ಕೊಳ್ಳಬೇಕು. ಅವರೊಂದಿಗೆ ಒಡನಾಟ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಬೇಕಾದ ವಾತಾವರಣ ಕಲ್ಪಿಸಬೇಕು. ಮಾನಸಿಕ ಒತ್ತಡ ಸಲ್ಲದು ಎಂದು ಸಲಹೆ ನೀಡಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಬಸವರಾಜು ಮಾತನಾಡಿ, `ಸರ್ಕಾರದೊಂದಿಗೆ ಸಮುದಾಯಗಳು ಕೈಜೋಡಿಸಿದರೆ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬಹುದು' ಎಂದು ಹೇಳಿದರು.

ಮೈಸೂರು ವಿವಿಯ ಸ್ನಾತಕೋತ್ತರ ಉಪಗ್ರಹ ಕೇಂದ್ರದ ಸಂಯೋಜಕ ಪ್ರೊ.ಶಿವಬಸವಯ್ಯ ಮಾತನಾಡಿ, `ಪೋಷಕರ ಮೌಢ್ಯಕ್ಕೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣ ಇಲ್ಲದಿದ್ದರೆ ಮಕ್ಕಳು ಸಮಾಜಘಾತುಕ ಚಟುವಟಿಕೆ ಯಲ್ಲಿ ತೊಡಗಿಕೊಳ್ಳುತ್ತಾರೆ. ಅನಕ್ಷರತೆ, ಬಡತನ, ನಿರುದ್ಯೋಗ, ಜಾತಿಪದ್ಧತಿಯಿಂದ ಮಕ್ಕಳು ಬಾಲಕಾರ್ಮಿಕ ಪದ್ಧತಿಯ ಕೂಪಕ್ಕೆ ಬೀಳುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣ ಲಭಿಸಿದರೆ ಈ ಪದ್ಧತಿ ನಿರ್ಮೂಲನೆಯಾಗಲಿದೆ' ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಅಂದಾನಿ, ಶಿಕ್ಷಣಾಧಿಕಾರಿ ಮಂಜುನಾಥ್, ಡಯಟ್ನ ಹಿರಿಯ ಉಪನ್ಯಾಸಕ ಚಂದ್ರಕಾಂತ್, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ವಿ. ಲಕ್ಷ್ಮಣಸ್ವಾಮಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಎಂ. ಮಹೇಶ್, ಜಿಲ್ಲಾ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಸಿ.ಬಿ. ನಾಗ ರಾಜು, ಶಿಕ್ಷಕ ರಂಗಸ್ವಾಮಿ, ಗಂಗಾಧರಸ್ವಾಮಿ ಹಾಜರಿದ್ದರು.

`ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಿ'
ಕೊಳ್ಳೇಗಾಲ: ಮಕ್ಕಳಿಗೆ ಶಿಕ್ಷಣ ನೀಡಿದರೆ ಬಾಲಕಾರ್ಮಿಕ ಪದ್ಧತಿಯನ್ನು ದೂರ ಮಾಡಬಹುದು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಲಕ್ಷ್ಮಣ್ರಾವ್ ಮಿಸ್ಕಿನ್ ತಿಳಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ರೋಟರಿ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ಸಂವಿಧಾನದ ಪರಿಚ್ಛೇದ 21ಎನಲ್ಲಿ ಒದಗಿಸಿರುವ ಅವಕಾಶದಂತೆ 14 ವರ್ಷ ವಯೋಮಿತಿಯೊಳಗಿನ ಯಾವುದೇ ಬಾಲಕ/ಬಾಲಕಿಯರು ಶಾಲೆಯಿಂದ ಹೊರಗುಳಿಯಲೇ ಬಾರದೆಂದು ತಿಳಿಸಿದ್ದರೂ ಸಾಕಷ್ಟು ಮಕ್ಕಳು ಕಾರ್ಮಿಕರಾಗುತ್ತಿರುವುದು ದುರ್ದೈವದ ಸಂಗತಿ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಜಾಥಾಕ್ಕೆ ಚಾಲನೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಮಹದೇವಮ್ಮ ಅವರು ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯ ಪ್ರಮಾಣ ವಚನ ಬೋದಿಸಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪುರುಷೋತ್ತಮ್, ರೋಟರಿ ಸಂಸ್ಥೆ ನಿಯೋಜಿತ ಅಧ್ಯಕ್ಷ ಬಿ.ಕೆ. ಪ್ರಕಾಶ್, ಕೆ. ಪುಟ್ಟರಸಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಸರ್ಕಾರಿ ವಕೀಲರಾದ ನಾಗೇಶ್, ನಾಜೀಮಾ ಬೇಗಂ, ಟಿ.ಜಾನ್ಪೀಟರ್, ನಾಗರಾಜು, ಬಿ.ಆರ್.ಪಿ ನಾಗೇಂದ್ರ, ವಕೀಲ ಡಿ.ಎಸ್.ಬಸವರಾಜು, ಕಾರ್ಯದರ್ಶಿ ಮಸಣನಾಯಕ,ಉಪಾಧ್ಯಕ್ಷ ಮೋಹನ್ಕುಮಾರ್, ನಾಗರಾಜು, ಪ್ರದೀಪ್ಕುಮಾರ್ ಇದ್ದರು.

ಜಾಥಾ: ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ರೋಟರಿ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಡನೆ ಬಾಲ ಕಾರ್ಮಿಕರ ಬಗ್ಗೆ ಅರಿವು ಮೂಡಿಸುವ ಬೃಹತ್ ಜಾಥಾ ನಡೆಸಲಾಯಿತು.

ಅಸ್ಸಿಸಿ ಪ್ರೌಢಶಾಲೆ ವಿದ್ಯಾರ್ಥಿಗಳು, ನ್ಯಾಯಾಧೀಶರು, ರೋಟರಿ ಸದಸ್ಯರು, ಶಿಕ್ಷಣ ಇಲಾಖೆ ಅಧಿಕಾರಿಗಳು, ವಕೀಲರು ಬ್ಯಾಂಡ್ ವಾದನದ ಮೂಲಕ ಪಟ್ಟಣದಲ್ಲಿ ನಾಮಫಲಕ ಹಿಡಿದು ಘೋಷಣೆ ಕೂಗಿದರು.

ಸಾರ್ವಜನಿಕ ಆಸ್ಪತ್ರೆ ರಸ್ತೆ, ಡಾ. ಅಂಬೇಡ್ಕರ್ ರಸ್ತೆ, ಡಾ. ರಾಜ್ಕುಮಾರ್ ರಸ್ತೆ, ಎಂ.ಜಿ.ಎಸ್.ವಿ ಸರ್ಕಾರಿ ಪದವಿ ಪೂರ್ವ ಕಾಲೇಜು ರಸ್ತೆ ಸೇರಿದಂತೆ ಇತರೆಡೆ ಜಾಥಾ ನಡೆಸಲಾಯಿತು.

`ಬಾಲ ಕಾರ್ಮಿಕರಿಗೆ ಶಿಕ್ಷಣ ನೀಡಿ'
ಯಳಂದೂರು: ರಾಷ್ಟ್ರದಲ್ಲಿ 50 ಲಕ್ಷಕ್ಕೂ ಅಧಿಕ ಬಾಲಕಾರ್ಮಿಕರು ಇರುವ ವರದಿ ಇದ್ದು ಇದು ಆಘಾತಕಾರಿ ಬೆಳವಣಿಗೆ. ಕಡ್ಡಾಯ ಶಿಕ್ಷಣ ಪದ್ದತಿ ಜಾರಿಯಲ್ಲಿದ್ದು, ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ಕರೆ ತರುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಎಚ್.ಆರ್. ರವಿಕುಮಾರ್ ತಿಳಿಸಿದರು.

ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅನೇಕ ಸಮುದಾಯಗಳಲ್ಲಿ ಸಣ್ಣ ಮಕ್ಕಳನ್ನು ದುಡಿಸಿಕೊಳ್ಳುವುದು ಪ್ರಚಲಿತದಲ್ಲಿದೆ. ಹೀಗೆ ದುಡಿಸಿಕೊಳ್ಳುವುದರಿಂದ ಅವರ ಬಾಲ್ಯವನ್ನೇ ನಾವು ಕಿತ್ತುಕೊಂಡಂತಾಗುತ್ತದೆ. ಇವರಿಗೆ ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಚಂದ್ರಮ್ಮ ಮಾತನಾಡಿದರು.
ವಕೀಲ ಸಿ.ಆರ್. ನಾಗರಾಜು ಮಾತನಾಡಿ, 1986 ರಲ್ಲಿ ಬಾಲ ಕಾರ್ಮಿಕ ಕಾಯಿದೆ ಜಾರಿಗೆ ಬಂದಿದೆ. ಇದರ ಪ್ರಕಾರ 14 ವರ್ಷ ಒಳಪಟ್ಟ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ ಎಂದು ತಿಳಿಸಲಾಗಿದೆ. ದುಡಿಸಿಕೊಂಡರೂ ಅಪಾಯಕಾರಿ ಕೆಲಸಗಳಿಗೆ ಇವರನ್ನು ಸೇರಿಸಿಕೊಳ್ಳಬಾರದು.

ದಿನದಲ್ಲಿ ಕೇವಲ 6 ಗಂಟೆ ಮಾತ್ರ ಕೆಲಸ ಮಾಡಬೇಕು. ಇದರಲ್ಲಿ 3 ಗಂಟೆಗೊಮ್ಮೆ ವಿಶ್ರಾಂತಿ ಹಾಗೂ ವಾರದ ಒಂದು ದಿನ ವೇತನ ಸಹಿತ ರಜೆ ನೀಡಬೇಕೆಂದು ತಿಳಿಸಿದರು.

ವಕೀಲ ಸಂಘದ ಅಧ್ಯಕ್ಷ ಸಿದ್ದರಾಜು ಮಾತನಾಡಿದರು. ವಕೀಲ ಸಂಘದ ಕಾರ್ಯದರ್ಶಿ ಪಿ. ನಾಗರಾಜು, ವಕೀಲರಾದ ಕೆ.ಬಿ. ಶಶಿಧರ್, ಎನ್. ಕೃಷ್ಣ, ಲೋಕೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.