ಶನಿವಾರ, ಜೂನ್ 19, 2021
27 °C

ಬಾಲಿವುಡ್ ಹಿರಿಯ ನಟ ಮುಖರ್ಜಿ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್ ಹಿರಿಯ ನಟ ಮುಖರ್ಜಿ ಇನ್ನಿಲ್ಲ

  ಮುಂಬೈ, (ಪಿಟಿಐ): ಲವ್ ಇನ್ ಟೋಕಿಯೊ~, ಲವ್ ಇನ್ ಸಿಮ್ಲಾ~ ಮೊದಲಾದ ಖ್ಯಾತ ಹಿಂದಿ ಚಲನಚಿತ್ರಗಳ ನಾಯಕ ನಟ ಜೋಯ್ ಮುಖರ್ಜಿ (73)  ಶುಕ್ರವಾರ ಇಲ್ಲಿನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ಕುಟುಂಬದ ವಕ್ತಾರರು ತಿಳಿಸಿದ್ದಾರೆ.

ಮೃತರು  ಪತ್ನಿ ನೀಲಂ ಮುಖರ್ಜಿ, ಒಬ್ಬ ಪುತ್ರಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಪತ್ನಿ ತಮ್ಮ ಪಕ್ಕದಲ್ಲಿ ಕುಳಿತಿದ್ದಾಗಲೇ ಬಾಲಿವುಡ್ ನ  ಹಿರಿಯ ನಟ ಜೋಯ್ ಮುಖರ್ಜಿ ತಮ್ಮ ಕೊನೆಯುಸಿರೆಳೆದರು. ಜನರು ನಟನ ಅಂತಿಮ ದರ್ಶನಕ್ಕೆ ಧಾವಿಸಿ ಬರುತ್ತಿದ್ದಾರೆ. ಮೃತದೇಹವನ್ನು ಮನೆಗೆ ಸಾಗಿಸಬೇಕಾಗಿದೆ. ಅಂತ್ಯಕ್ರಿಯೆ ಸ್ಥಳ ಮತ್ತು ಸಮಯವನ್ನು ಇನ್ನೂ ನಿಗದಿ ಮಾಡಿಲ್ಲ ಎಂದು ಕುಟುಂಬದ ವಕ್ತಾರ ಆರ್.ಆರ್. ಪಾಠಕ್ ಅವರು ತಿಳಿಸಿದ್ದಾರೆ.

ತೀವ್ರ ಅಸ್ವಸ್ಥರಾಗಿದ್ದ  ಜೋಯ್ ಮುಖರ್ಜಿ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಅಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

1960 ದಶಕದಲ್ಲಿ ಸಿನಿಮಾ ಜಗತ್ತಿಗೆ ಕಾಲಿಟ್ಟ ಮುಖರ್ಜಿ ಅವರು ನಟಿಸಿದ್ದ ಲವ್ ಇನ್ ಸಿಮ್ಲಾ, ಶಾಗಿರ್ದ್, ಲವ್ ಇನ್ ಟೋಕಿಯೊ, ಜಿದ್ದಿ, ಫಿರ್ ವಹಿ ದಿಲ್ ಲಾಯಾ ಹೂಂ ಮತ್ತು ಏಕ್ ಮುಸಾಫಿರ್ ಏಕ್ ಹಸಿನಾ ಮೊದಲಾದ ಚಲನಚಿತ್ರಗಳ ಯಶಸ್ಸಿನಿಂದ ತುಂಬಾ ಪ್ರಸಿದ್ಧಿ ಪಡೆದಿದ್ದರು.

ಜೋಯ್ ಮುಖರ್ಜಿ ಅವರ ತಂದೆ ಶಷಧರ ಮುಖರ್ಜಿ ಅವರು, ಹಿಂದಿ ಚಿತ್ರ ರಂಗದ  ಅಶೋಕ್ ಕುಮಾರ ಅವರ ಸೋದರಿ ಸತಿದೇವಿ ಅವರನ್ನು ಮದುವೆಯಾಗಿದ್ದರು. ಸತಿದೇವಿ ಅವರು, ಫಿಲ್ಮಾಲಯ ಸ್ಟುಡಿಯೊದ ಸ್ಥಾಪಕರಲ್ಲೊಬ್ಬರು.ಜೋಯ್ ಮುಖರ್ಜಿ ಕಾಜೋಲ್ ಮತ್ತು ತನಿಷಾ ಮುಖರ್ಜಿ ಅವರಿಗೂ ಹತ್ತಿರದ ಸಂಬಂಧಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.