ಬಾಲ್ಬ್ಯಾಡ್ಮಿಂಟನ್: ಮಂಗಳೂರು ವಿ.ವಿಗೆ ಪ್ರಶಸ್ತಿ

ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಮಂಗಳೂರು ವಿಶ್ವವಿದ್ಯಾಲಯ ತಂಡ ಚೆನ್ನೈಯ ಎಸ್ಆರ್ಎಂ ವಿಶ್ವ ವಿದ್ಯಾಲಯ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ ವಾರ್ಸಿಟಿ ಮಹಿಳಾ ಬಾಲ್ಬ್ಯಾಡ್ಮಿಂಟನ್ ಚಾಂಪಿ ಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದು ಕೊಂಡಿದೆ.
ಬುಧವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಮಂಗಳೂರು ವಿ.ವಿ ತಂಡದ ವನಿತೆಯರು 29–8, 29–17ರಿಂದ ಮದ್ರಾಸ್ ವಿ.ವಿ. ತಂಡವನ್ನು ನಿರಾಯಾಸವಾಗಿ ಸೋಲಿಸಿದರು. ಮಂಗಳೂರು ವಿ.ವಿ ತಂಡದ 9 ಆಟಗಾರ್ತಿಯರು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು.
ಇದಕ್ಕೆ ಮೊದಲು ನಡೆದ ಪಂದ್ಯಗಳಲ್ಲಿ ಮಂಗಳೂರು ವಿ.ವಿ 29–11, 29–9ರಿಂದ ಸೇಲಮ್ನ ಪೆರಿಯಾರ್ ವಿ.ವಿಯನ್ನು, ಕೊಯ ಮತ್ತೂರಿನ ಭಾರತಿಯಾರ್ ವಿ.ವಿಯನ್ನು 29–13, 29–9ರಿಂದ, ಆತಿಥೇಯ ಎಸ್ಆರ್ಎಂ ವಿವಿಯನ್ನು 29–5, 29–14ರಿಂದ ಸೋಲಿಸಿದೆ. ಎರಡೂ ಗೇಮ್ಗಳಲ್ಲಿ ಮಂಗಳೂರಿನ ತಂಡ ವೇಗವಾಗಿ ಪಾಯಿಂಟ್ಸ್ ಕಲೆ ಹಾಕಿ ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಚಾಂಪಿಯನ್ ತಂಡದ ಎಂ.ಪಿ.ರಂಜಿತಾ ಟೂರ್ನಿಯ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.