ಪ್ರೀತಿಯ ಅಮ್ಮ...

ಹೋಗು ಮುದ್ದಿನ ಮಗಳೆ... ಹೋಗಿ ಬಾ
ಆ ನಿನ್ನ ಮನೆಯನ್ನು ಬೆಳಗಿ ಬಾ

ಧನದಾಹ ವ್ಯಾಮೋಹ ಅತಿಯಾಗಿ ಮಿತಿಮೀರಿ
ಬದುಕು ಹೊರೆಯಾದಾಗ ಹೊರಗೆ ಬಾ ಮಗಳೆ

ಹೊರೆಯಲ್ಲ ತವರಿಗೆ ನೀ ನಮ್ಮ ಮನೆಮಗಳು
ತೆರೆದಿಹುದು ನಿನಗೆಂದು ಈ ಮನೆಯ ಬಾಗಿಲು

ವಾಹ್ .... ಎಂಥಾ ಭಾವಪೂರ್ಣ ಲಹರಿ ಇದು. ಎಳೆಯ ಹೆಣ್ಣೊಬ್ಬಳು ಇಡೀ ಬದುಕನ್ನು ಜಯಿಸಿ ನಿಲ್ಲಲು ಬೇಕಾದಂತಹ ಶಕ್ತಿಯ ಸಿಂಚನ. ಮಗಳೊಬ್ಬಳು ಮನೆ ಮಗಳಾಗಿಯೇ ಉಳಿದು ಬಾಳಬೇಕೆನ್ನುವ ಹೃದಯದ ಮಿಡಿತ. ಎರಡನ್ನೂ ಎಷ್ಟು ಚೆನ್ನಾಗಿ ಪದಗಳಲ್ಲಿ ಹಿಡಿದಿಟ್ಟಿದ್ದೀಯಾ ಅಮ್ಮಾ!

ಹೆಣ್ಣು ಮಕ್ಕಳನ್ನು ಹಡೆದವರು ದಿನವಿಡೀ ಗುನುಗುನಿಸಬೇಕಾದ ಆಂತರ್ಯದ ಪಡಿನುಡಿಗಳಿವು. `ಹೋಗು ಮಗಳೆ~ ಎಂಬ ಜಾಗವನ್ನು `ಬಾ ಮಗಳೆ~ ಎಂಬ ಭಾವ ಆವರಿಸಿಕೊಂಡಾಗ, ನನ್ನಂತಹ ಹೆಣ್ಣು ಮಕ್ಕಳಿಗೆ ಅದೆಂತಹಾ ಭರವಸೆಯ ಸೂರ್ಯೋದಯ ಆದೀತು. `ಹೆಣ್ಣು ಪರರ ಸೊತ್ತು~ ಎಂಬ ಸಾಮಾಜಿಕ ಸವಕಲು ಮಾದರಿಗೆ ಸೆಡ್ಡು ಹೊಡೆದು ನಿಲ್ಲಬಲ್ಲ ನಿನ್ನ ಈ ಅಭಿವ್ಯಕ್ತಿಗೆ ಸಾರ್ವಕಾಲಿಕ ಮನ್ನಣೆ ದೊರೆಯುವಂತಾದರೆ, ಮುಂದೆ ಯಾವ ಹೆಣ್ಣಿನ ಪಾಲಿಗೂ ಮದುವೆ ಒಂದು ಅಭದ್ರತೆಯಾಗಿಯಾಗಲಿ, ದುಃಸ್ವಪ್ನವಾಗಿಯಾಗಲಿ ಕಾಡುವ ಪ್ರಮೇಯವೇ ಬಾರದು.

ಆ ಮನೆಯೂ ನನ್ನದು, ಈ ಮನೆಯೂ ನನ್ನದು ಎಂಬ ಹೆಚ್ಚುವರಿ ಭದ್ರತೆಯು ಬದುಕಿನ ಸವಾಲಿನ ಎಲ್ಲ ಕಂದರಗಳನ್ನು ದಾಟಿ ನಿಲ್ಲುವ ಭರವಸೆಯನ್ನು ಆಕೆಗೆ ನೀಡಬಲ್ಲುದು.

`ಕೊಟ್ಟ ಹೆಣ್ಣು ಕುಲದಿಂದ ಹೊರಗೆ~ ಎಂಬ ಚಿಂತನೆಯನ್ನು ಸವಕಲಾಗಿಸುವ ನಿನ್ನ ಪ್ರಯತ್ನಕ್ಕೆ ಮೊದಲ ವಿಮರ್ಶಕಿಯೂ ನಾನೇ, ಮೊದಲ ಹೆಗಲೆಣೆಯೂ ನಾನೇ. ನನ್ನ ಗೆಳತಿ ಟೀನೂ ಇದಕ್ಕೆ ಎಷ್ಟು ಚಂದದ ರಾಗ ಸಂಯೋಜಿಸಿದ್ದಾಳೆ ಗೊತ್ತಾ? `ಹೆಣ್ಣು ಮಗುವಿನ ದಿನ~ ಕುರಿತ ಕಾಲೇಜಿನ ಸಮಾರಂಭದಲ್ಲಿ ಇದನ್ನು ನಾನು ಲೋಕಾಂತಗೊಳಿಸಲಿದ್ದೇನೆ. ಅಬ್ಬಬ್ಬಾ ....

ಮಗಳು ಎಷ್ಟು ಬೆಳೆದು ಬಿಟ್ಟಿದ್ದಾಳೆ ಎಂದು ಅಚ್ಚರಿಯಾಯಿತೇ? ನಾನು ಹೀಗೆ ಅರಳಿಕೊಂಡು ಬೆಳೆಯುವಂತಹ ಅವಕಾಶಗಳನ್ನು ನನಗೆ ನೀಡಿದವರು ನೀನು ಮತ್ತು ಅಪ್ಪನೇ ಅಲ್ವಾ?
ಹೆದರುಪುಕ್ಕಲಿಯರು?!

ನನಗಿನ್ನೂ ಚೆನ್ನಾಗಿ ನೆನಪಿದೆ. ಆ ದಿನ ಇಲಿಯೊಂದನ್ನು ಅಟ್ಟಿಸಿಕೊಂಡು ಹಾವೊಂದು ಮನೆಯೊಳಗೆ ಬಂದಾಗ ನಾನೂ, ಪುಟ್ಟನೂ, ಅಷ್ಟೇ ಏಕೆ ಅಪ್ಪನೂ ಎಷ್ಟೊಂದು ಹೆದರಿದ್ದರು! ನೀನು ಮಾತ್ರ ಕೋಲೊಂದರಿಂದ ಹಾವನ್ನೆತ್ತಿ ಮನೆಯಿಂದ ಹೊರಗೆ ದಾಟಿಸಿ, ಏನೂ ನಡೆದೇ ಇಲ್ಲ ಎಂಬಂತೆ ನಿರ್ಲಿಪ್ತಳಾಗಿ ಇದ್ದು ಬಿಟ್ಟಿದ್ದೆಯಲ್ಲಾ .....

ಅಪ್ಪನಿಗಿಲ್ಲದ ಧೈರ್ಯ ನಿನಗೆ ಹೇಗೆ ಬಂತಮ್ಮಾ ಎಂದು ನಾನೂ ಪುಟ್ಟನೂ ಅಚ್ಚರಿಯಿಂದ ಕೇಳಿದಾಗ, ಧೈರ್ಯವಂತಿಕೆ ಎನ್ನುವುದು ಹಿರಿಯರಿಂದ ಬರುವ ಬಳುವಳಿಯಲ್ಲ. ಅದು ಅವರವರೇ ಗಳಿಸಿಕೊಳ್ಳುವಂಥದ್ದು ಎಂದಿದ್ದೆ. ಧೈರ್ಯ ಎನ್ನುವುದು ಮನಸ್ಸಿಗೆ ಸಂಬಂಧಿಸಿದ ಸಂಗತಿ. ಒಂದು ಧೈರ್ಯದ ಮನಸ್ಥಿತಿ ರೂಪಿತವಾಗುವಲ್ಲಿ ಮಕ್ಕಳ ಬಾಲ್ಯವು ವಹಿಸುವ ಪಾತ್ರ

ದೊಡ್ಡದು ಎಂದು ಹೇಳಿ ನಿನ್ನ ಬಾಲ್ಯದ ಬದುಕು ನಿನಗೆ ಕಲಿಸಿದ ಪಾಠಗಳನ್ನು ಎಷ್ಟು ಸೊಗಸಾಗಿ ತೆರೆದಿಟ್ಟಿದ್ದೆ. ದಟ್ಟ ಕಾಡಿನ ನಡುವೆ ಹುಟ್ಟಿ ಬೆಳೆದದ್ದು. ಒಬ್ಬಳೇ ಕಾಡಿನಲ್ಲಿ ನಾಲ್ಕು ಮೈಲಿ ನಡೆದು ಶಾಲೆಗೆ ಹೋದದ್ದು, ಶಾಲೆಗೆ ಹೋಗುವಾಗಲೆಲ್ಲ ಅದೆಷ್ಟೋ ಸಾರಿ ಕಾಲು ಸವರಿಕೊಂಡೇ ಹರಿದು ಹೋದ ಭಯಂಕರ ಹಾವುಗಳು, ಚಿತ್ರವಿಚಿತ್ರವಾಗಿ ಕೂಗುವ ಹಕ್ಕಿಗಳು, ಆಗಾಗ ಮನೆಯ ಸಮೀಪವೇ ಕೇಳಿಬರುತ್ತಿದ್ದ ಹುಲಿಗಳ ಘರ್ಜನೆ, ಅಬ್ಬಬ್ಬಾ ಕೇಳುತ್ತಾ ಕೇಳುತ್ತಾ ನಾನೂ ಪುಟ್ಟನೂ ದಂಗಾಗಿಬಿಟ್ಟಿದ್ದೆವಲ್ಲಾ. ಪೇಟೆಯಲ್ಲಿ ಬೆಳೆದ ಅಪ್ಪನಿಗೆ, ಅಸಾಧಾರಣ ಧೈರ್ಯವನ್ನು ಬೇಡುವ ಸಾಹಸದ ಬದುಕಿನ ಪರಿಚಯ ಅಷ್ಟಾಗಿ ಆಗದೇ ಇರುವುದರಿಂದ ಅವರು ಬಲುಬೇಗನೇ ಹೌಹಾರಿ ಬಿಡುತ್ತಾರೆ ಎಂದು ನೀನು ಹೇಳಿದಾಗ ಅಪ್ಪನೂ ಅದನ್ನು ನಿರಾಕರಿಸಲಿಲ್ಲವಲ್ಲ.

ಹಾಗಾದರೆ ಹುಡುಗರು ಧೈರ್ಯವಂತರು, ಹುಡುಗಿಯರು ಹೆದರುಪುಕ್ಕಲರು ಎಂದೆಲ್ಲ ಹೇಳುವುದು ಪೂರ್ವಗ್ರಹವಲ್ಲವೇ? ಇಂತಹ ಸಿದ್ಧಮಾದರಿಗಳನ್ನು ನಿರಾಕರಿಸುವುದರ ಮೂಲಕ, ಹೆಣ್ಣು ಮಕ್ಕಳು ಘನತೆಯಿಂದ ಬೆಳೆದು ಬಂದರೆ ಎಂತಹಾ ಸಂದರ್ಭಗಳಲ್ಲೂ, ಬದುಕಿನ ನಾವೆಯನ್ನು ದಿಟ್ಟವಾಗಿ ದಡ ಸೇರಿಸಬಲ್ಲರು ಎಂಬುದು ನನಗೀಗ ಅರ್ಥವಾಗುತ್ತಿದೆ.

ಕಾಲೇಜಿನಲ್ಲಿ ನನ್ನನ್ನು ಎಲ್ಲರೂ ಮಹಾ ಸ್ತ್ರೀ ವಾದಿ ಅಂತ ಛೇಡಿಸುತ್ತಾರೆ. ನಾನು ಹೆಣ್ಣು ಮಕ್ಕಳ ಪರವೇ ಮಾತಾಡುವುದಕ್ಕೆ ನನಗೆ ಈ ಪಟ್ಟ ಕಟ್ಟಿದ್ದಾರೆ. ಹೀಗೆ ಆಲೋಚಿಸುವುದೇ ಸ್ತ್ರೀ ವಾದವಾ ಅಮ್ಮಾ? ಮೊನ್ನೆ ಏನಾಯಿತು ಗೊತ್ತಾ? ಡಿಬೇಟಿನಲ್ಲಿ ಕಾಲೇಜಿನ ಹುಡುಗರೆಲ್ಲ ಹೆಣ್ಣುಮಕ್ಕಳನ್ನು ಬೆಳೆಸುವುದಕ್ಕೆ ಖರ್ಚು ಹೆಚ್ಚು. ಆದರೆ ಗಂಡುಮಕ್ಕಳಿಗೆ ಖರ್ಚು ಕಡಿಮೆ, ಅದಕ್ಕೇ ಹೆಣ್ಣುಮಕ್ಕಳು ಕುಟುಂಬಕ್ಕೆ ಹೊರೆ ಎಂದೆಲ್ಲ ವಾದಿಸಿದರು.

ಸಾಲದೆಂಬಂತೆ ಖರ್ಚಿನ ಲೆಕ್ಕ ಪತ್ರವನ್ನೂ ಮುಂದಿಟ್ಟರು. ಅವರ ವಾದ ಸರಿಯಲ್ಲ. ಲೆಕ್ಕಾಚಾರದಲ್ಲಿ ಏನೋ ತಪ್ಪಿದೆ ಎಂದು ನನಗೆ ಅರ್ಥವಾಗಿತ್ತು. ಆದರೆ, ಅದು ಸುಳ್ಳು ಅಂತ ಸಾಧಿಸುವುದಕ್ಕೆ ನನ್ನ ಬಳಿ ಅಂಥದೇ ಲೆಕ್ಕಾಚಾರದ ಪಟ್ಟಿ ಇರಲಿಲ್ಲ. ಹಾಗಂತ ನಾನು ತೆಪ್ಪಗಿರಲಿಲ್ಲ. ಹೆಣ್ಣಿರಲಿ ಗಂಡಿರಲಿ, ಮಕ್ಕಳನ್ನು ಲೆಕ್ಕಾಚಾರದ ಸರಕುಗಳಾಗಿಸುವುದು ತಪ್ಪು. ಅವರಿಬ್ಬರೂ ಅಪ್ಪ ಅಮ್ಮನ ಪ್ರೀತಿಯ ಹೂಗಳಲ್ಲವೇ?

ಎಲ್ಲವನ್ನೂ ಹಣಕಾಸಿನ ದೃಷ್ಟಿಕೋನದಿಂದ ಅಳೆಯುವ ಒಂದು ಜೀವವಿರೋಧಿ ಪರಂಪರೆ ಆರಂಭವಾದಾಗ ಸಮಾಜದಲ್ಲಿ ಅವುಗಳ ಪ್ರತಿಫಲನಗಳು ಭಯಂಕರವಾಗಿರುತ್ತವೆ. ಎಲ್ಲಿ ಹೆಣ್ಣುಮಗು ನಷ್ಟ, ಖರ್ಚಿನ ಬಾಬ್ತು ಎಂಬ ನಕಾರಾತ್ಮಕ ಭಾವನೆ ನೆಲೆಯೂರಿರುತ್ತದೋ ಅಲ್ಲಿ ಆ ಹೊರೆಗಳಿಂದ, ನಷ್ಟಗಳಿಂದ ಪಾರಾಗುವ ಅಸಂಖ್ಯ ಉಪಾಯಗಳು ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹೆಣ್ಣು ಭ್ರೂಣಹತ್ಯೆಯಂತಹ ಸಾಮಾಜಿಕ ಅನಿಷ್ಟಕ್ಕೆ ಹಾದಿ ಸುಗಮವಾದದ್ದು ಇಂತಹ ಚಿಂತನೆಗಳಿಂದಲೇ ಎಂದು ನಾನೂ ತಟ್ಟನೆ ಪ್ರತಿಕ್ರಿಯಿಸಿದೆ. ಆದರೂ ನನಗೆ ಸಮಾಧಾನವಿಲ್ಲ.

ಅಂದು ಆ ಹುಡುಗರು ನಮ್ಮ ಮುಂದಿಟ್ಟ ಖರ್ಚಿನ ಪಟ್ಟಿಯ ಹಿಂದೆಯೇ ನನ್ನ ಮನಸ್ಸು ಓಡುತ್ತಿದೆ. ಹೆಣ್ಣುಮಕ್ಕಳನ್ನು ಬೆಳೆಸಲು ತಗಲುವ ವೆಚ್ಚದ ಬಗ್ಗೆ ಸಾಮಾನ್ಯ ತಿಳಿವಳಿಕೆಗಳು ಸತ್ಯದಿಂದ ದೂರ ಇರುವುದನ್ನು ಸಾಧಿಸಬೇಕಾದರೆ ಗಂಡುಮಕ್ಕಳ ಖರ್ಚಿನ ಪಟ್ಟಿಯನ್ನು ತಯಾರಿಸುವುದು ಅನಿವಾರ್ಯ.

ಅಮ್ಮಾ ಆ ಬಗ್ಗೆ ನೀನೂ ಹಿಂದೆಲ್ಲ ಹೇಳುತ್ತಿದ್ದುದು ನನಗೆ ನೆನಪಿದೆ. ಅಂತಹ ಒಂದು ಪಟ್ಟಿಯನ್ನು ತಯಾರಿಸಿ ಮೇಲ್ನೋಟಕ್ಕೆ ಕಾಣುವ ಸತ್ಯಕ್ಕಿಂತ ವಾಸ್ತವ ಬೇರೆಯೇ ಆಗಿದೆ ಎಂಬುದನ್ನು ಸಾಧಿಸಿ ತೋರಿಸುವುದಕ್ಕೆ ನನಗೆ ಯಾಕೆ ನೀನು ಸಹಾಯ ಮಾಡಬಾರದು?

ಇದು ಕೇವಲ ಲೆಕ್ಕಕ್ಕಾಗಿ ಲೆಕ್ಕ, ವಾದಕ್ಕಾಗಿ ವಾದ ಮಾತ್ರವೇ ವಿನಃ ಮಕ್ಕಳನ್ನು ತಕ್ಕಡಿಯಲ್ಲಿ ತೂಗಿ ಅಳೆದು ಪ್ರತ್ಯೇಕಿಸುವುದಕ್ಕಲ್ಲ. ಬದಲಿಗೆ ಹೆಣ್ಣುಮಗುವನ್ನು ಕುರಿತು ಸಮಾಜದಲ್ಲಿ ಬೇರೂರಿರುವ ಕಳವಳಕಾರಿ ಲೆಕ್ಕಾಚಾರವನ್ನು ಹುಸಿಯಾಗಿಸುವುದಕ್ಕೆ ಮಾತ್ರ, ಪಟ್ಟಿ ತಯಾರಿಸಿ ಕಳುಹಿಸುತ್ತೀಯಲ್ಲಾ?

ಸರಿ ಅಮ್ಮಾ .... ಇವತ್ತಿಗೆ ಇಷ್ಟು ಸಾಕು .... ನಾನು ಹಾಡು ಪ್ರಾಕ್ಟೀಸ್ ಮಾಡ್ಬೇಕು .... ಮುಗಿಸುವ ಮುನ್ನ ಇನ್ನೊಂದು ಮಾತು .... ಎಲ್ಲಾ ಹೆಣ್ಣು ಮಕ್ಕಳಿಗೂ ನನಗೆ ಸಿಕ್ಕಿರುವಂಥ ಅಮ್ಮ ಅಪ್ಪ ಸಿಕ್ಕರೆ ....
- ಇಂತೀ ನಿನ್ನ ಮಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.