ಬೆಂಗಳೂರು: ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಇಲಾಖೆ ಸಹಯೋಗದಲ್ಲಿ ಮುಂಬೈಯಲ್ಲಿ ಶುಕ್ರವಾರ ನಡೆದ `ಭಾರತ ರಸ್ತೆ ಸಾರಿಗೆ ಪ್ರಶಸ್ತಿ 2012~ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಾಹನ ಸಾರಿಗೆಯಲ್ಲಿ ಉತ್ಕೃಷ್ಟತೆ ಕಾರ್ಯಾಚರಣೆ ವಿಭಾಗದ ದಕ್ಷಿಣ ವಲಯ ಪ್ರಶಸ್ತಿಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಪ್ರದಾನ ಮಾಡಲಾಯಿತು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್.ಶ್ರೀನಿವಾಸ್ ಹಾಗೂ ಮುಖ್ಯ ವ್ಯವಸ್ಥಾಪಕ ಡಾ.ಕೆ.ಎನ್.ಇಂಗಳಗಿ ಪ್ರಶಸ್ತಿ ಸ್ವೀಕರಿಸಿದರು. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ರಾಜ್ಯ ಸಚಿವ ಜಿತಿನ್ ಪ್ರಸಾದ್, ಉಪಾಧ್ಯಕ್ಷ ಪ್ರವೀಣ್, ಸಾರಿಗೆ ಇಲಾಖೆಯ ಹಣಕಾಸು ವಿಭಾಗದ ಅಧಿಕಾರಿ ಶ್ರೀರಾಮ್, ಪಿ.ಕೆ. ಚೌಧರಿ ಉಪಸ್ಥಿತರಿದ್ದರು.

ಉತ್ಕೃಷ್ಟತೆ ಕಾರ್ಯಾಚರಣೆ, ಪರಿಸರ ರಕ್ಷಣೆ, ಪ್ರಯಾಣಿಕರ ಇಚ್ಛೆ, ಸ್ವ- ಆಡಳಿತ ಸೇರಿದಂತೆ ಆರು ವಿಭಾಗಗಳಲ್ಲಿ ರಸ್ತೆ ಸಾರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ನವೀನ ಆವಿಷ್ಕಾರ ಅಳವಡಿಕೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.