ಸೋಮವಾರ, ಮೇ 23, 2022
26 °C

ಬಿಎಂಟಿಸಿ ನೂತನ ಬಸ್ ಸಂಚಾರಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: ಕೃಷ್ಣರಾಜಪುರದಿಂದ ಮಣಿಪಾಲ್ ಆಸ್ಪತ್ರೆ ಮಾರ್ಗವಾಗಿ ದೊಮ್ಮಲೂರಿಗೆ ಆರಂಭಿಸಿರುವ ಬಿಎಂಟಿಸಿ ನೂತನ ಬಸ್ ಸಂಚಾರ ಸೇವೆಗೆ ಶಾಸಕ ಎನ್.ಎಸ್.ನಂದೀಶರೆಡ್ಡಿ ಅವರು ಭಾನುವಾರ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಸಮಯಕ್ಕೆ ಸರಿಯಾಗಿ ಬಸ್ ಓಡಿಸಲು ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ಸಹಾಯಕ ನಿಯಂತ್ರಕ ದೇವರಾಜಪ್ಪ ಅವರಿಗೆ ಸೂಚನೆ ನೀಡಿದರು.ಈ ಬಸ್ ಸೇವೆಯಿಂದ ಎಲ್‌ಆರ್‌ಡಿಇ, ಎಚ್‌ಎಎಲ್, ಬಿಇಎಂಎಲ್ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಅನುಕೂಲವಾಗಲಿದೆ. ಮಣಿಪಾಲ್ ಆಸ್ಪತ್ರೆಗೆ ತೆರಳುವವರಿಗೂ ಇದರಿಂದ ಅನುಕೂಲವಾಗಲಿದೆ. ಮುಂದೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿಯಾಗಿ ಬಸ್‌ಗಳನ್ನು ಓಡಿಸಲು ಪರಿಶೀಲಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.ಬಿಬಿಎಂಪಿ ಸದಸ್ಯ ಎನ್.ವೀರಣ್ಣ, ಎಸ್.ಎಸ್.ಪ್ರಸಾದ್, ಆರ್.ಮಂಜುಳಾದೇವಿ, ಬಿಎಂಟಿಸಿ ಸಹಾಯಕ ನಿಯಂತ್ರಕ ದೇವರಾಜಪ್ಪ, ಮುಖಂಡರಾದ ಕೇಶವಮೂರ್ತಿ, ಕೆ.ಬ್ರಹ್ಮಾನಂದರೆಡ್ಡಿ, ಶಿರಪುರ ಶ್ರೀನಿವಾಸ್, ಜಗದೀಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.