ಶುಕ್ರವಾರ, ಮೇ 27, 2022
29 °C

ಬಿಎಂಟಿಸಿ ಸೌಲಭ್ಯ ಸಾಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಡವರು ಹಾಗೂ ಮಧ್ಯಮ ವರ್ಗದವರ ಸಲುವಾಗಿ ಬಿಎಂಟಿಸಿ ಬಸ್‌ಗಳಿವೆ. ಪ್ರತಿಯೊಬ್ಬರು ಈ ಬಸ್‌ಗಳನ್ನೇ ಅವಲಂಬಿಸಿರುತ್ತಾರೆ. ಏಕೆಂದರೆ ಪ್ರಯಾಣದ ದರ ಕಡಿಮೆ. ಆದರೆ ಪ್ರಯಾಣಿಕರಿಗೆ ಸಾಕಷ್ಟು ಸೌಕರ್ಯ ಸಿಗುತ್ತಿಲ್ಲ.ಸಮಯಕ್ಕೆ ಬಾರದ ಬಸ್, ನಿಗದಿತ ಮಾರ್ಗ ದಿಢೀರ್ ಬದಲಾವಣೆ, ಚಾಲಕ, ನಿರ್ವಾಹಕರ ದರ್ಪ ನೋಡಿದರೆ ಸಾಕಪ್ಪ ಸಾಕು ಎನಿಸುತ್ತದೆ. ಬಸ್ ಬರಲಿಲ್ಲವೆಂದು ಹೆಚ್ಚಿಗೆ ಹಣ ತೆತ್ತು ಆಟೊದಲ್ಲಿ ಸಂಚರಿಸಿ ಮನೆ ಸೇರುವ ಪರಿಸ್ಥಿತಿಯಿದೆ. ಆದರೆ ನಿಲ್ದಾಣದಲ್ಲಿ ಜನ ಕಡಿಮೆಯಾದ ಕೂಡಲೆ ಬಸ್‌ಗಳು ಒಂದರ ಹಿಂದೆ ಒಂದು ದಸರಾ ಮೆರವಣಿಗೆಯಂತೆ ಬಂದು ಹೋಗುವುದನ್ನು ನೋಡಬಹುದಾಗಿದೆ.ಸಂಬಂಧಪಟ್ಟ ಯಾವ ಅಧಿಕಾರಿಯೂ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲವೆಂದೇ ಹೇಳಬೇಕು. ಇದರಿಂದ ಸಂಸ್ಥೆ ಉದ್ಧಾರವಾಗುತ್ತಿದೆಯೇ ಹೊರತು, ನಿತ್ಯ ಓಡಾಡುವ ನೌಕರರು ಹಾಗೂ ಶಾಲಾ ಕಾಲೇಜುಗಳಿಗೆ ಹೋಗಿ ಬರುವ ಮಕ್ಕಳು ಪಡುತ್ತಿರುವ ಪಾಡು ಆ ಪರಮಾತ್ಮನಿಗೇ ಪ್ರೀತಿ. ಇನ್ನಾದರೂ ಸಮಯ ಪಾಲನೆಗೆ ಗಮನ ಕೊಡಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.