ಮಂಗಳವಾರ, ಮೇ 24, 2022
30 °C

ಬಿಎಂಟಿಸಿ ಸ್ಪಷ್ಟೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

* ಎನ್.ಕೆ. ಆನಂದ ಅವರ `ಅಬ್ಬಿಗೆರೆ ಸಂಕಟ~ ಎಂಬ ದೂರು.

ಕೆ. ಆರ್. ಮಾರುಕಟ್ಟೆ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದಿಂದ ಅಬ್ಬಿಗೆರೆಗೆ ಹೋಗುವ 271 ಎಫ್ ಮತ್ತು 271 ಎ ಗಳ ವ್ಯವಸ್ಥಿತ ಆಚರಣೆಗೆ ಕ್ರಮ ಕೈಗೊಳ್ಳಲಾಗಿದೆ.* ರಮ್ಯ ಬೆಳ್ಳಾವೆ ಅವರ `ಬಸ್ ಸಮಯ ಬದಲಿಸಿ~ ಎಂಬ ಸಲಹೆ.

ಮಾರ್ಗ ಸಂಖ್ಯೆ 500 ಕೆ ಬಸ್ಸುಗಳನ್ನು ನಿಗದಿತ ವೇಳಾಪಟ್ಟಿಯಂತೆ ವ್ಯವಸ್ಥಿತವಾಗಿ ಓಡಿಸಲು ಕ್ರಮ ಕೈಗೊಳ್ಳಲಾಗಿದೆ.* ಪಿ.ಎಸ್. ಗುರುರಾಜರಾವ್ ಅವರ `ಬಸ್ ವ್ಯವಸ್ಥೆ ಕಲ್ಪಿಸಿ~ ಎಂಬ ಕೋರಿಕೆ.

ನಾಗರಬಾವಿ, ಜ್ಯೋತಿನಗರ, ಚಂದ್ರಾ ಬಡಾವಣೆ, ಅತ್ತಿಗುಪ್ಪೆ, ಬಾಪೂಜಿನಗರ, ಮೈಸೂರು ರಸ್ತೆ, ಚಾಮರಾಜಪೇಟೆ ಮಾರ್ಗವಾಗಿ ಸಿಟಿ ಮಾರುಕಟ್ಟೆಗೆ ಸಾರಿಗೆ ಸೌಲಭ್ಯ ಒದಗಿಸುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.* ಹರ್ಷ ಎಸ್. ಅವರ `79 ಸರಿಯಾಗಿ ಓಡಿಸಿ~ ಎಂಬ ಸಲಹೆ.

ಪ್ರಸ್ತುತ ರಾಜಾಜಿನಗರದಿಂದ ಮಲ್ಲೇಶ್ವರಂ, ಶೇಷಾದ್ರಿಪುರಂ ಮಾರ್ಗವಾಗಿ ಶಿವಾಜಿನಗರಕ್ಕೆ ಈ ಕೆಳಕಂಡಂತೆ ಸಾರಿಗೆ ಸೌಲಭ್ಯವಿರುತ್ತದೆ. ಮಾರ್ಗ ಸಂಖ್ಯೆ 79 ಎ, ಎಫ್, ಜಿ, ಎಚ್, ಜೆ. ಕೆ ಯಲ್ಲಿ ತಲಾ ಒಂದು ಶೆಡ್ಯೂಲ್, 79 ಡಿ ನಲ್ಲಿ 3 ಅನುಸೂಚಿ, 79 ಇ ನಲ್ಲಿ 4 ಅನುಸೂಚಿ, ಹೀಗೆ ಒಟ್ಟು 13 ಅನುಸೂಚಿಗಳಿವೆ. ಪ್ರಯಾಣಿಕರು ಈ ಬಸ್‌ಗಳ ಸೌಲಭ್ಯ ಪಡೆಯಬಹುದು.* ಎನ್. ಹರ್ಷವರ್ಧನ ಅವರ `171 ಇ ಏಕಿಲ್ಲ~ ಎಂಬ ದೂರು.

ಕಮಲಾನಗರ ಬಿಇಎಂಎಲ್ ಲೇಔಟ್‌ನಿಂದ ಕೋರಮಂಗಲಕ್ಕೆ ಮಾರ್ಗ ಸಂಖ್ಯೆ 171 ಇ ಬಸ್‌ನ ವ್ಯವಸ್ಥಿತ ಆಚರಣೆಗೆ ಕ್ರಮ ಕೈಗೊಳ್ಳಲಾಗಿದೆ.* ರಮ್ಯ ಅವರ `ಬಸ್‌ಗಳಲ್ಲಿ ರೇಡಿಯೊ ಕಿರಿಕಿರಿ ಏಕೆ~ ಎಂಬ ಆಕ್ಷೇಪ.


ವೋಲ್ವೊ ಬಸ್ಸುಗಳಲ್ಲಿ ರೇಡಿಯೊ, ಸಿಡಿ ಹಾಕುವಾಗ, ಪ್ರಯಾಣಿಕರಿಗೆ ತೊಂದರೆ ಆಗದಂತೆ ಧ್ವನಿ ಕಡಿಮೆ ಇಡುವಂತೆ ಚಾಲಕ, ನಿರ್ವಾಹಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ, ಕ್ರಮ ಕೈಗೊಳ್ಳಲಾಗಿದೆ.* ಡಾ. ವಿ.ಎನ್. ಹೆಗಡೆ ಅವರ `ಬಸ್ ವಿಸ್ತರಿಸಿ~ ಎಂಬ ಕೋರಿಕೆ.

ಒಂದು ಮುಖ್ಯ ರಸ್ತೆಯಿಂದ ಮತ್ತೊಂದು ಮುಖ್ಯ ರಸ್ತೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಯಾಣಿಕರ ಅನುಕೂಲಕ್ಕಾಗಿ ಬಿಗ್ ಸರ್ಕಲ್ (ಬಿಸಿ) ಬಸ್‌ಗಳನ್ನು 19 ಮಾರ್ಗಗಳಲ್ಲಿ ಓಡಿಸಲಾಗುತ್ತಿದೆ. ಆದ್ದರಿಂದ ಬ್ಯಾಟರಾಯನಪುರದಿಂದ ಕಣ್ಣೂರು ಮತ್ತು ಶ್ರೀರಾಂಪುರಕ್ಕೆ ಆಚರಣೆಯಾಗುವ ಬಿ ಸಿ 11ನ್ನು ಸಿಟಿ ಮಾರುಕಟ್ಟೆ, ಮೆಜೆಸ್ಟಿಕ್ ಹಾಗೂ ಶಿವಾಜಿನಗರಕ್ಕೆ ವಿಸ್ತರಿಸುವುದು ಕಷ್ಟ.ಈಗಾಗಲೇ ಮೇಕ್ರಿ ಸರ್ಕಲ್ ಮಾರ್ಗವಾಗಿ ಮೆಜೆಸ್ಟಿಕ್, ಕೆ ಆರ್ ಮಾರುಕಟ್ಟೆ ಮತ್ತು ಶಿವಾಜಿ ನಗರಗಳಿಂದ ಸಾಕಷ್ಟು ಶೆಡ್ಯೂಲ್‌ಗಳು ಆಚರಣೆಯಲ್ಲಿವೆ. ಪ್ರಯಾಣಿಕರು ಇದರ ಸೌಲಭ್ಯ ಪಡೆಯಬಹುದು.* ಜಿ.ಕೆ. ನಟರಾಜ್ ಅವರ `ಸಂಚಾರ ಪುನರಾರಂಭಿಸಿ~ ಎಂಬ ಕೋರಿಕೆ.

ಸದರಿ ಮಾರ್ಗವಾಗಿ ಪ್ರಸ್ತುತ 502 ಜೆ ನಲ್ಲಿ ಜೆ. ಪಿ. ನಗರ, 6ನೇ ಹಂತದಿಂದ ಜೆ. ಪಿ. ನಗರ 15ನೇ ಕ್ರಾಸ್, ಜೆ. ಪಿ. ನಗರ 3ನೇ ಕ್ರಾಸ್, ಬಿ.ಟಿ.ಎಂ. ಬಡಾವಣೆ, ಸಿಲ್ಕ್ ಬೋರ್ಡ್, ಅಗರ ಹಾಗೂ ಮಾರತ್ತಹಳ್ಳಿ ಬ್ರಿಜ್ ಮಾರ್ಗವಾಗಿ ಟಿನ್ ಫ್ಯಾಕ್ಟರಿಗೆ 7 ಶೆಡ್ಯೂಲ್‌ಗಳ ಸಾರಿಗೆ ಸೌಲಭ್ಯವಿದೆ. ಪ್ರಯಾಣಿಕರು ಸದರಿ ಸೌಲಭ್ಯ ಪಡೆಯಲು ಕೋರಲಾಗಿದೆ.* ಯಮಲೂರು ಎಂ. ವೆಂಕಟಪ್ಪ ಅವರ `ಹಿರಿಯ ನಾಗರಿಕರನ್ನು ಕಡೆಗಣಿಸಬೇಡಿ~ ಹಾಗೂ ಕೆ. ಟಿ. ತಿಮ್ಮಾರೆಡ್ಡಿ ಅವರ `ಹಿರಿಯ ನಾಗರಿಕರ ಬವಣೆ~ ಎಂಬ ಪತ್ರ.

65 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕರ್ನಾಟಕ ಸರ್ಕಾರದ ಆದೇಶದಂತೆ ಸಂಸ್ಥೆಯ ಎಲ್ಲಾ ಮಾದರಿಯ ಸೇವೆಗಳಲ್ಲಿ (ವಾಯು ವಜ್ರ ಹೊರತು ಪಡಿಸಿ) ಟಿಕೆಟ್ ದರದಲ್ಲಿ ಶೇ 25 ರಿಯಾಯ್ತಿ ನೀಡಲಾಗಿರುತ್ತದೆ. ಈ ಸೌಕರ್ಯ ಪಡೆಯಲು ಹಿರಿಯ ನಾಗರಿಕರು ತಮ್ಮ ವಯಸ್ಸಿನ ದೃಢೀಕರಣಕ್ಕಾಗಿ ರೇಷನ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಾಹನ ಪರವಾನಗಿ ಅಥವಾ ಭಾರತ ಸರ್ಕಾರದ ಮಾನ್ಯತೆ ಪಡೆದ ಯಾವುದೇ ಸಂಘ ಸಂಸ್ಥೆಗಳಿಂದ ವಿತರಿಸಲಾಗಿರುವ ಹಿರಿಯ ನಾಗರಿಕರ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ತೋರಿಸಬಹುದು.* ಸುಮತಿಕುಮಾರ್ ಮತ್ತು ಚಂದ್ರೇಗೌಡ ಅವರ `ಮೊದಲಿನಂತೆ ಬಸ್ ಸೌಲಭ್ಯ ಕಲ್ಪಿಸಿ~ ಎಂಬ ಕೋರಿಕೆ.

 ಪ್ರಸ್ತುತ ಬನಶಂಕರಿಯಿಂದ ಹೆಬ್ಬಾಳಕ್ಕೆ ಮಾರ್ಗ ಸಂಖ್ಯೆ 501 ಎಯಲ್ಲಿ ಎಸಿ ಸುವರ್ಣದಲ್ಲಿ 20 ಬಸ್ಸುಗಳನ್ನು ಹೆಚ್ಚುವರಿಯಾಗಿ ಓಡಿಸಲಾಗುತ್ತಿದೆ. ಮಾರ್ಗ ಸಂಖ್ಯೆ 405, 405 ಎ ನಲ್ಲಿ ನಿರೀಕ್ಷಿತ ಆದಾಯವಿಲ್ಲದೆ ಇರುವುದರಿಂದ, ಈ ಮಾರ್ಗಗಳನ್ನು ರದ್ದುಗೊಳಿಸಲಾಗಿದೆ. 401 ಕೆ, 401 ಎಂ ಗಳನ್ನು ಸದರಿ ಮಾರ್ಗದಲ್ಲಿಯೇ ಓಡಿಸಲಾಗುತ್ತಿದೆ. ಇವು ಕೆಂಗೇರಿ ಶಿರ್ಕೆ ಮಾರ್ಗವಾಗಿಯೇ ಸಂಚರಿಸುತ್ತಿವೆ. ಮಾರ್ಗ ಸಂಖ್ಯೆ 222 ಎಫ್‌ನಲ್ಲಿ 3 ಬಸ್ಸುಗಳು ಕೆಂಪೇಗೌಡ ಬಸ್ ನಿಲ್ದಾಣದಿಂದ ಕೆಎಚ್‌ಬಿ ಕಾಲೋನಿಗೆ 35 ಸುತ್ತುವಳಿಗಳಲ್ಲಿ ಸಂಚರಿಸುತ್ತಿವೆ. ಅಲ್ಲದೆ ಮಾರ್ಗ ಸಂಖ್ಯೆ 403 ಎ ಕೆಎಚ್‌ಬಿ ಕಾಲೋನಿಯಿಂದ ವಿಜಯನಗರ ಮಾರ್ಗವಾಗಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಂಚರಿಸುತ್ತಿದೆ. ಪ್ರಯಾಣಿಕರು ಸದರಿ ಸೌಲಭ್ಯ ಪಡೆಯಲು ಕೋರಲಾಗಿದೆ. ನಿತ್ಯ ಪ್ರಯಾಣಿಕರ `ಸಮಯಕ್ಕೆ ಬಾರದ ಬಸ್~ ಎಂಬ ದೂರು.

 ಮಾರ್ಗ ಸಂಖ್ಯೆ 317 ರಲ್ಲಿ 12 ಬಸ್‌ಗಳು ಕೆ.ಆರ್. ಮಾರುಕಟ್ಟೆಯಿಂದ ಹೊಸಕೋಟೆಗೆ, ಮಾರ್ಗ ಸಂಖ್ಯೆ 317 ಎ ಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊಸಕೋಟೆಗೆ, 317 ಸರಣಿಯಲ್ಲಿ ಹೊಸಕೋಟೆ ಮಾರ್ಗವಾಗಿ 20 ಬಸ್ಸುಗಳು ಹಾಗೂ ಮಾರ್ಗ ಸಂಖ್ಯೆ 381, 382, 383 ರಲ್ಲಿ 10 ಬಸ್ಸುಗಳು ಹೊಸಕೋಟೆ ಮಾರ್ಗವಾಗಿ ಕೆ. ಆರ್. ಮಾರುಕಟ್ಟೆಗೆ ಸಂಚರಿಸುತ್ತಿವೆ. ಇದ್ಯಾವುದನ್ನೂ ರದ್ದು ಮಾಡಿಲ್ಲ. ಆದಾಗ್ಯೂ ವ್ಯವಸ್ಥಿತ ಓಡಾಟಕ್ಕೆ ಕ್ರಮ ಕೈಗೊಳ್ಳಲಾಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.