ಬಿಎಫ್ಸಿಗೆ ಮತ್ತೊಂದು ಗೆಲುವು

ಐಜ್ವಾಲ್ (ಪಿಟಿಐ): ಪಂದ್ಯದ ಮೊದಲರ್ಧದಲ್ಲಿ ಗೋಲು ಗಳಿಸಿದ ಬೆಂಗಳೂರು ಫುಟ್ ಬಾಲ್ ಕ್ಲಬ್ (ಬಿಎಫ್ಸಿ) ಐ ಲೀಗ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಪಡೆದಿದೆ.
ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್ಸಿ 1–0 ಗೋಲಿನಿಂದ ಟೂರ್ನಿ ಯ ಹೊಸ ತಂಡ ಮಿಜೋರಾಂನ ಐಜ್ವಾಲ್ ಎದುರು ಗೆಲುವು ಪಡೆಯಿತು. 26ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದ ಕೆನ್ಯಾ ಮೂಲದ ಆಟಗಾರ ಕರ್ಟಿಸ್ ಒಸಾನೊ ಗೆಲುವಿನ ರೂವಾರಿ ಎನಿಸಿದರು.
ಬಿಎಫ್ಸಿ ತಂಡ ಐ ಲೀಗ್ ಟೂರ್ನಿಯ ತನ್ನ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. ಹೋದ ವರ್ಷ ರನ್ನರ್ಸ್ ಅಪ್ ಸ್ಥಾನ ಪಡೆದಿತ್ತು. ಬಳಿಕ ಫೆಡರೇಷನ್ ಕಪ್ನಲ್ಲೂ ಪ್ರಶಸ್ತಿ ಗೆದ್ದಿತ್ತು.
ಅಷ್ಟೇ ಅಲ್ಲ ಸ್ಟ್ರೈಕರ್ ಚೆಟ್ರಿ ನಾಯ ಕತ್ವದಲ್ಲಿ ಭಾರತ ತಂಡ ಇತ್ತೀಚೆಗೆ ಸ್ಯಾಫ್ ಕಪ್ ಟೂರ್ನಿಯಲ್ಲಿ ಪ್ರಶಸ್ತಿ ತನ್ನದಾಗಿ ಸಿಕೊಂಡಿತ್ತು.
ಆದ್ದರಿಂದ ಹೊಸ ತಂಡ ಐಜ್ವಾಲ್ ಎದುರು ಗೆಲುವು ಪಡೆಯುವ ನೆಚ್ಚಿನ ತಂಡವೆನಿಸಿತ್ತು.
2015–16ರ ಟೂರ್ನಿಯಲ್ಲಿ ಬಿಎಫ್ಸಿ ತಂಡ ಪಡೆದ ಸತತ ಎರಡನೇ ಗೆಲುವು ಇದಾಗಿದೆ. ಮೊದಲ ಪಂದ್ಯ ದಲ್ಲಿ ಸಲಗಾಂವ್ಕರ್ ತಂಡವನ್ನು ಮಣಿಸಿತ್ತು.
ಜನವರಿ 24ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆ ಯಲಿರುವ ಮೂರನೇ ಪಂದ್ಯದಲ್ಲಿ ಶಿಲ್ಲಾಂಗ್ ಲಜಾಂಗ್ ಎದುರು ಪೈಪೋಟಿ ನಡೆಸಲಿದೆ.
ಮೊದಲ ಬಾರಿಗೆ ಐ ಲೀಗ್ ಟೂರ್ನಿ ಆಡುತ್ತಿರುವ ಐಜ್ವಾಲ್ ಹಿಂದಿನ ಪಂದ್ಯ ದಲ್ಲಿ ಹಾಲಿ ಚಾಂಪಿಯನ್ ಮೋಹನ್ ಬಾಗನ್ ಎದುರು ಸೋಲು ಕಂಡಿತ್ತು. ತವರಿನಲ್ಲಿ ಚೊಚ್ಚಲ ಐ ಲೀಗ್ ಪಂದ್ಯ ವಾಡಿದ ಐಜ್ವಾಲ್ ತಂಡ ರಕ್ಷಣಾ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿತು.
ಸಲಗಾಂವ್ಕರ್ ಎದುರಿನ ಪಂದ್ಯದಲ್ಲಿ ಗೋಲು ಗಳಿಸಿದ್ದ ಸಿ.ಜೆ. ವಿನೀತ್ ಚೆಂಡನ್ನು ಗುರಿ ಸೇರಿಸಲು ಯತ್ನಿಸಿ ವಿಫಲರಾದರು.
ಮಡಗಾಂವ್ ವರದಿ: ಭಾನುವಾರ ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ನಡೆ ಯಲಿರುವ ಪಂದ್ಯದಲ್ಲಿ ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ ತಂಡ ಡಿಎಸ್ಕೆ ಶಿವಾಜಿಯನ್ಸ್ ಎದುರು ಪೈಪೋಟಿ ನಡೆಸಲಿದೆ. ಮುಂಬೈನಲ್ಲಿ ಜರುಗಲಿರುವ ಇನ್ನೊಂದು ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡ ಮುಂಬೈ ಎಫ್.ಸಿ ಎದುರು ಆಡಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.