ಶುಕ್ರವಾರ, ಏಪ್ರಿಲ್ 23, 2021
31 °C

ಬಿಎಸ್‌ಆರ್ ಕಾಂಗ್ರೆಸ್ಗೆ ಹತ್ತು ಲಕ್ಷ ಸದಸ್ಯತ್ವ ಗುರಿ: ಗೌಡರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷವು ಹತ್ತು ಲಕ್ಷ ಸದಸ್ಯರನ್ನು ನೋಂದಣಿ ಮಾಡಿಸುವ ಗುರಿ ಹೊಂದಿದೆ ಎಂದು ಪಕ್ಷದ ವಕ್ತಾರ ವೈ.ಎನ್.ಗೌಡರ ತಿಳಿಸಿದರು.

ನಗರದಲ್ಲಿ ಸೋಮವಾರ ಏರ್ಪ ಡಿಸಿದ್ದ ಜಿಲ್ಲಾ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶ ಮತ್ತು ಸದಸ್ಯತ್ವ ನೋಂದಣಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಬಲವರ್ಧನೆಗೆ ಎಲ್ಲ ವರ್ಗಗಳ ಜನರ ಸಹಕಾರ ಬೇಕು. ಹಿಂದುಳಿದಿದ್ದ ಜಿಲ್ಲೆಯಲ್ಲಿ ಶ್ರೀರಾಮುಲು ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಒಳ್ಳೆಯ ಕೆಲಸಗಳನ್ನು ಮಾಡಿದರು. ರಾಜ್ಯದಲ್ಲಿ ಒಟ್ಟು ಹತ್ತು ಲಕ್ಷ ಸದಸ್ಯ ರನ್ನು ನೋಂದಣಿ ಮಾಡಿಸುವ ಗುರಿ ಹೊಂದಲಾಗಿದ್ದು, ಪಕ್ಷದ ಕಾರ್ಯ ರ್ತರು ಸದಸ್ಯತ್ವ ನೋಂದಣಿ ಕಾರ್ಯ ದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿ ಗಳನ್ನು ಮೊದಲು ಆಯ್ಕೆ ಮಾಡಿ ನಂತರ ತಾಲ್ಲೂಕು ಮಟ್ಟದಲ್ಲಿ ಆಯ್ಕೆ  ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಕಾರ್ಯಕರ್ತರ ಸಮಾವೇಶ ವನ್ನು ಏರ್ಪಡಿಸಿ ಪಕ್ಷ ಬಲಪಡಿಲು ಶ್ರಮಿಸಲಾಗುವುದು ಎಂದು ಹೇಳಿದರು.

ಯುವ ಮುಖಂಡ ಅನಿಲ ಮೆಣಸಿ ನಕಾಯಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಸಣ್ಣವೀರಪ್ಪ ಹಳೆಪ್ಪನವರ, ಶಿವಣ್ಣ ನವಲಗುಂದ, ವೆಂಕಟೇಶ್ ಬಳ್ಳಾರಿ, ದಾಸರ್,  ಮೋಹನ್, ಶಿವಾನಂದ ಚೌಡಕಿ, ನೀಲಕ್ಕ ಹಸಬಿ, ಪೂಜಾ ಬೇವೂರ್ ನಗರಸಭೆ ಸದಸ್ಯರಾದ ಸಿ. ರಾಜ್ ಬಳ್ಳಾರಿ, ಲಕ್ಷ್ಮಣ್ ದೊಡ್ಡಮಣಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.