ಶುಕ್ರವಾರ, ಮೇ 14, 2021
30 °C

ಬಿಎಸ್‌ಎನ್‌ಎಲ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಸ್‌ಎನ್‌ಎಲ್‌ಗೆ ಜಯ

ಬೆಂಗಳೂರು: ಬಿಎಸ್‌ಎನ್‌ಎಲ್ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ `ಎ' ಡಿವಿಷನ್ ರಾಜ್ಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.



ಅಕ್ಕಿತಿಮ್ಮನಹಳ್ಳಿಯಲ್ಲಿರುವ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬಿಎಸ್‌ಎನ್‌ಎಲ್ 6-1 ಗೋಲುಗಳಿಂದ ಜೈನ್ ಕಾಲೇಜ್ ತಂಡವನ್ನು ಮಣಿಸಿತು.



ವಿರಾಮದ ವೇಳೆಗೆ 3-0 ಗೋಲಿನಿಂದ ಮುಂದಿದ್ದ ವಿಜಯಿ ತಂಡದ ಅಶೋಕ್ (12ನೇ ನಿಮಿಷ), ವಿನೋದ್ (18ನೇ ನಿ.), ನಾಜಿನ್ ಬೆದರಿ (33ನೇ ಹಾಗೂ 34ನೇ ನಿ.), ಬೋಪಣ್ಣ (52ನೇ ನಿ.) ಮತ್ತು ಜಾರ್ಜ್ ಡೊಮಿನಿಕ್ (55ನೇ ನಿ.) ಚೆಂಡನ್ನು ಗುರಿ ಸೇರಿಸಿದರು. ಜೈನ್ ಕಾಲೇಜ್ ಪರ ಅರ್ಜುನ್ (39ನೇ ನಿ.) ಗೋಲು ಗಳಿಸಿದರು.



ಎಸ್‌ಡಬ್ಲ್ಯುಆರ್ ತಂಡ 4-1 ಗೋಲುಗಳಿಂದ ಆರ್‌ಬಿಐ ಎದುರು ಗೆಲುವು ಸಾಧಿಸಿತು. ವಿಜಯಿ ತಂಡದ ನಾಗೇಶ್ (4ನೇ, 32ನೇ ನಿ.), ಮಯೂರ್ ಸುಬ್ಬಯ್ಯ (22ನೇ ನಿ.), ಹಸನ್ ಅಲಿ (55ನೇ ನಿ.) ಗೋಲು ತಂದಿತ್ತರು. ಆರ್‌ಬಿಐ ತಂಡದ ಪೊನ್ನಪ್ಪ (57ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.