ಬಿಎಸ್‌ವೈ ವಿಚಾರ ವರಿಷ್ಠರ ತೀರ್ಮಾನಕ್ಕೆ ಈಶ್ವರಪ್ಪ

ಶುಕ್ರವಾರ, ಜೂಲೈ 19, 2019
28 °C

ಬಿಎಸ್‌ವೈ ವಿಚಾರ ವರಿಷ್ಠರ ತೀರ್ಮಾನಕ್ಕೆ ಈಶ್ವರಪ್ಪ

Published:
Updated:

ಗುಲ್ಬರ್ಗ: `ಯಡಿಯೂರಪ್ಪ ಬಿಜೆಪಿಗೆ ಬರುವುದು, ಬಿಡುವುದು ನನಗೆ ಗೊತ್ತಿಲ್ಲ. ಅದು ಕೇಂದ್ರದ ನಾಯಕರಿಗೆ ಬಿಟ್ಟ ವಿಚಾರ' ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದರು.ಸೂಪರ್ ಮಾರ್ಕೆಟ್‌ನಲ್ಲಿರುವ ಎಚ್‌ಕೆಸಿಸಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷದ ಸಮಾಲೋಚನಾ ಹಾಗೂ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು.`ಚುನಾವಣೆ ರಾಜಕಾರಣದ ಒಂದು ಭಾಗ. ಸೋತಿದ್ದೇವೆ ಎಂದು ರಾಜಕೀಯದಿಂದ ವಿಮುಖರಾಗಬಾರದು. 1985ರಲ್ಲಿ ಬಿಜೆಪಿ ಕೇವಲ 2 ಕಡೆ ಗೆದ್ದಿತ್ತು. ಈಗ ದೊಡ್ಡಪಕ್ಷವಾಗಿ ಬೆಳೆದಿದೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸೋಣ' ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.`ಕಾಂಗ್ರೆಸ್ ಸರ್ಕಾರ ಇನ್ನೂ ಮಧುಚಂದ್ರದ ಅವಧಿಯಲ್ಲಿದೆ. ನಾವು ಈಗಲೇ ಟೀಕಿಸುವುದಿಲ್ಲ. 3 ತಿಂಗಳು ಸರ್ಕಾರ ನಡೆಸಲಿ. ಆರಂಭದಲ್ಲೇ ಹೆಚ್ಚಿನ ಮದ್ಯದಂಗಡಿಗಳಿಗೆ ಪರವಾನಗಿ, ಅಗ್ಗದ ಮದ್ಯ ಮಾರಾಟದಂಥ ಯೋಜನೆಗೆ ಕೈ ಹಾಕಿರುವ ಸಿದ್ದರಾಮಯ್ಯ ಸರ್ಕಾರ ತಪ್ಪು ಮಾಡುತ್ತಿದೆ ಎಂದು ಕೆಲ ಕಾಂಗ್ರೆಸ್ಸಿಗರು ಹಾಗೂ ಮಠಾಧೀಶರೇ ಟೀಕಿಸುತ್ತಿದ್ದಾರೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry