ಬೆಂಗಳೂರು: ಜಿಂದಾಲ್ ಸಮೂಹದ ಸೌತ್ವೆಸ್ಟ್ ಮೈನಿಂಗ್ ಕಂಪೆನಿಯಿಂದ ಲಂಚ ಪಡೆದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಇತರರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದು ಮಾಡಿ ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸುವ ಕುರಿತು ಉಪ ಲೋಕಾಯುಕ್ತ ನ್ಯಾಯಮೂರ್ತಿ ಎಸ್.ಬಿ.ಮಜಗೆ ಪರಿಶೀಲನೆ ಆರಂಭಿಸಿದ್ದಾರೆ.

`ಹೈಕೋರ್ಟ್ ನೀಡಿರುವ ತೀರ್ಪು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಮೂಲಕ ಪ್ರಶ್ನಿಸಲು ಅರ್ಹವಾದುದು~ ಎಂದು ಹೈಕೋರ್ಟ್ನಲ್ಲಿ ಲೋಕಾಯುಕ್ತ ಪರ ವಕೀಲರಾಗಿರುವ ಬಿ.ಎ.ಬೆಳ್ಳಿಯಪ್ಪ ಅವರು ಮಾ.9ರಂದು ಲೋಕಾಯುಕ್ತಕ್ಕೆ ಅಭಿಪ್ರಾಯ ನೀಡಿದ್ದರು. ಬಳಿಕ ಈ ಕುರಿತು ಪರಿಶೀಲನೆ ನಡೆಸುವಂತೆ ಲೋಕಾಯುಕ್ತ ಪೊಲೀಸರು ಲೋಕಾಯುಕ್ತದ ಕಾನೂನು ಘಟಕದ ಮುಖ್ಯಸ್ಥರಿಗೆ ಪ್ರಸ್ತಾವ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿರುವ ಕಾನೂನು ವಿಭಾಗದ ಮುಖ್ಯಸ್ಥರು, `ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣ~ ಎಂಬ ಶಿಫಾರಸು ಮಾಡಿದ್ದಾರೆ.

ಲೋಕಾಯುಕ್ತ ಪರ ವಕೀಲರು, ಕಾನೂನು ಘಟಕ ನೀಡಿರುವ ಅಭಿಪ್ರಾಯ, ಹೈಕೋರ್ಟ್ ತೀರ್ಪು ಮತ್ತಿತರ ದಾಖಲೆಗಳ ಜೊತೆ ಮಜಗೆ ಅವರಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಅದನ್ನು ಕಾನೂನು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ರವಾನಿಸುವ ಕುರಿತು ಉಪ ಲೋಕಾಯುಕ್ತರು ಪರಿಶೀಲಿಸುತ್ತಿದ್ದಾರೆ. ಸರ್ಕಾರದ ಅನುಮತಿ ದೊರೆತ ಬಳಿಕವೇ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ.

`ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಮುನ್ನ ನಿಯಮಾನುಸಾರ ಸರ್ಕಾರದ ಒಪ್ಪಿಗೆ ಪಡೆಯಬೇಕು. ಈ ಹಂತದಲ್ಲಿ ಸಾಕಷ್ಟು ಪರಿಶೀಲನೆ ಅಗತ್ಯ. ತರಾತುರಿಯಲ್ಲಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದರೆ, ವಿಚಾರಣೆ ಹಂತದಲ್ಲಿ ಹಿನ್ನಡೆಯಾಗುವ ಅಪಾಯವಿರುತ್ತದೆ.

ಹೈಕೋರ್ಟ್ ತೀರ್ಪು ಹೊರಬಿದ್ದ ಮೂರು ತಿಂಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬೇಕು. ಉಪ ಲೋಕಾಯುಕ್ತರು ಕಾನೂನಿನ ಪ್ರಕಾರ ಪರಿಶೀಲನೆ ಪೂರ್ಣಗೊಳಿಸಿ, ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ~ ಎಂದು ಲೋಕಾಯುಕ್ತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಕೀಲರ ಆಯ್ಕೆ ಗೊಂದಲ: ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನಲ್ಲಿ ಲೋಕಾಯುಕ್ತ ಪೊಲೀಸರ ಪರ ಅರ್ಜಿ ಸಲ್ಲಿಸುವ ವಕೀಲರ ಆಯ್ಕೆಗೆ ಸಂಬಂಧಿಸಿದಂತೆ ಉಪ ಲೋಕಾಯುಕ್ತರಾದ ನ್ಯಾ.ಮಜಗೆ ಮತ್ತು ನ್ಯಾ.ಚಂದ್ರಶೇಖರಯ್ಯ ನಡುವೆ ಸಣ್ಣ ಭಿನ್ನಾಭಿಪ್ರಾಯ ಉಂಟಾಗಿದೆ.

ಪೂವಯ್ಯ ಎಂಬ ವಕೀಲರ ಮೂಲಕವೇ ಅರ್ಜಿ ಸಲ್ಲಿಸಬೇಕೆಂದು ಚಂದ್ರಶೇಖರಯ್ಯ ಬೇಡಿಕೆ ಇಟ್ಟಿದ್ದಾರೆ. ಆದರೆ, ಸುಪ್ರೀಂಕೋರ್ಟ್ನಲ್ಲಿ ಲೋಕಾಯುಕ್ತವನ್ನು ಪ್ರತಿನಿಧಿಸುವ ವಕೀಲರ ತಂಡ ಈಗಾಗಲೇ ಇರುವುದರಿಂದ ಪೂವಯ್ಯ ಅವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂಬುದಾಗಿ ಮಜಗೆ ಪ್ರತಿಕ್ರಿಯಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.