ಬೆಂಗಳೂರು: ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರೇಸ್ಕೋರ್ಸ್ ರಸ್ತೆ ನಿವಾಸ ಭಾನುವಾರ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಅತ್ತ ಬಿಎಸ್ವೈ ಬಂಧನದಲ್ಲೇ ಆಸ್ಪತ್ರೆ ಸೇರಿದ್ದರೆ, ಇತ್ತ ಅವರ ಮನೆಯೂ ಖಾಲಿ ಖಾಲಿ.

ತಮ್ಮ ನಾಯಕನನ್ನು ಕಾಣಲು ನಿರಂ ತರವಾಗಿ ಅಲ್ಲಿಗೆ ಬರುತ್ತಿದ್ದ ಸಚಿವರು, ಶಾಸಕರೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣ ಲಿಲ್ಲ. ಯಡಿಯೂರಪ್ಪ ಅವರ ಅತ್ಯಂತ ಆಪ್ತ ವಲಯದಲ್ಲಿರುವ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮಾತ್ರ ಬೆಳಿಗ್ಗೆಯೇ ರೇಸ್ಕೋರ್ಸ್ ರಸ್ತೆ ಮನೆಗೆ ಬಂದಿದ್ದರು.

ಉಳಿದಂತೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ. ಪುಟ್ಟಸ್ವಾಮಿ ಮತ್ತು ಕೆಲ ಶಾಸಕರು ಅಲ್ಲಿಗೆ ಧಾವಿಸಿದ್ದರು. ಯಡಿಯೂರಪ್ಪ ಅವರ ಕುಟುಂಬದ ಸದಸ್ಯರು ಕೂಡ ಮನೆಯಿಂದ ಹೊರಗೆ ಬಂದಿರಲಿಲ್ಲ.

`ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ವರದಿ ಬಹಿರಂಗವಾದ ದಿನದಿಂದಲೂ ಇಲ್ಲಿಗೆ ಬರುವವರ ಸಂಖ್ಯೆ ಯಲ್ಲಿ ಇಳಿಮುಖವಾಗಿತ್ತು. ಶನಿ ವಾರ ಸಂಜೆಯ ನಂತರ ಇತ್ತ ಬರುವವರೇ ಇಲ್ಲ~ ಎಂದು ಅಲ್ಲಿ ಕರ್ತವ್ಯನಿರತರಾಗಿದ್ದ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.