ಕೋಲಾರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಮಂಗಳವಾರ ಜಿ.ಪಂ. ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ನಡೆಯಲಿದೆ. ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ನಡುವೆ ಅಧ್ಯಕ್ಷ ಪಟ್ಟ ಯಾವ ಪಕ್ಷಕ್ಕೆ ದೊರಕಲಿದೆ ಎಂಬುದು ಮಾತ್ರ ರೋಚಕ ಪ್ರಶ್ನೆಯಾಗಿಯೇ ಉಳಿದಿದೆ. ಕೊನೇ ಕ್ಷಣದ ಬದಲಾವಣೆಯನ್ನು ಹೊರತುಪಡಿಸಿ, ಫಲಿತಾಂಶ ಮಾತ್ರ ಎಲ್ಲರಿಗೂ ಗೊತ್ತಿರುವ ಉತ್ತರದಂತಿದೆ!

ಜಿ.ಪಂ. ಮೇಲೆ ಹಾರಲಿರುವುದು ಬಿಜೆಪಿ ಬಾವುಟವೋ? ಅಥವಾ ಕಾಂಗ್ರೆಸ್-ಜೆಡಿಎಸ್ನ ಮೈತ್ರಿ ಬಾವುಟವೋ? ಎಂಬ ಪ್ರಶ್ನೆಯ ಜಾಡಿನಲ್ಲಿ ಸಾಗಿರುವ ಜಿಲ್ಲಾ ರಾಜಕಾರಣದಲ್ಲಿ ಮೂರು ದಿನಗಳಿಂದ ರೋಚಕ ತಿರುವುಗಳು ಮೂಡಿವೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಣದ ಪ್ರಮುಖರು, ಸದಸ್ಯರು, ಮತ್ತು ಬಿಜೆಪಿಗೆ ಬೆಂಬಲ ನೀಡಿರುವ ಶಾಸಕ ವರ್ತೂರು ಪ್ರಕಾಶರ ನಡುವೆ ತೆರೆಮರೆಯಲ್ಲಿ ತೀವ್ರ ರಾಜಕೀಯ ಹಣಾಹಣಿಯೂ ನಡೆದಿದೆ.

ಅಧ್ಯಕ್ಷ ಸ್ಥಾನ ಹಿಂದುಳಿದ ‘ಅ’ ವರ್ಗದ ಮಹಿಳೆಗೆ ಮೀಸಲು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲು. ಎರಡೂ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾದ ಬಳಿಕ ಕೆಲವು ದಿನ ಮಾತ್ರ ರಾಜಕೀಯ ಕ್ಷೇತ್ರದಲ್ಲಿ ಮೂಡಿದ್ದ ಸಂಚಲನೆ, ಕಳೆದ ಶುಕ್ರವಾರದಿಂದ ತೀವ್ರಗತಿ ಪಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ಅರ್ಹ ಸದಸ್ಯೆ ಜೆಡಿಎಸ್-ಕಾಂಗ್ರೆಸ್ನಲ್ಲಿ ಇಲ್ಲದಿರುವುದರಿಂದ, ಶಾಸಕ ವರ್ತೂರು ಪ್ರಕಾಶರ ಬೆಂಬಲದೊಡನೆ ಗೆದ್ದಿರುವ, ವೇಮಗಲ್ ಕ್ಷೇತ್ರದ ಸದಸ್ಯೆ ಭಾರತಿ ಅವರನ್ನು ತಮ್ಮ ಕಡೆಗೆ ಸೆಳೆದು ಅಧ್ಯಕ್ಷ ಪಟ್ಟ ಪಡೆಯುವ ಎರಡೂ ಪಕ್ಷಗಳ ಮುಖಂಡರ ಯತ್ನ ವಿಫಲವಾಗಿದೆ.ಭಾನುವಾರ ರಾತ್ರಿ ಭಾರತಿ ಅವರು ಮತ್ತೆ ವರ್ತೂರರ ಬಣಕ್ಕೆ ಸೇರಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ನ ಪ್ರಮುಖ, ಸಚಿವ ಕೆ.ಎಚ್.ಮುನಿಯಪ್ಪ ಮತ್ತಿತರ ಮುಖಂಡರ ಮನವಿ, ಆಹ್ವಾನದ ಮೇರೆಗೆ ವರ್ತೂರು ಬಣ ತೊರೆದು ಭಾರತಿ ‘ಆ ಕಡೆಗೆ’ ಸೇರಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಏಕೈಕ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಲಿದ್ದಾರೆ. ಬಿಜೆಪಿಗೆ ಅಧ್ಯಕ್ಷ ಪಟ್ಟ ತಪ್ಪಲಿದೆ ಎಂಬ ದಟ್ಟವಾದ ವದಂತಿಗೆ ತೆರೆಬಿದ್ದಂತಾಗಿದೆ. ತಮ್ಮ ಬಣದಲ್ಲಿರುವ ನರಸಾಪುರ ಕ್ಷೇತ್ರದ ಅಮರನಾಥ್, ವಕ್ಕಲೇರಿಯ ಚೌಡೇಶ್ವರಿ ಮತ್ತು ವೇಮಗಲ್ನ ಭಾರತಿ ಸೋಮವಾರ ಮುಖ್ಯಮಂತ್ರಿಗಳ ಮುಂದೆ ಪರೇಡ್ ಮಾಡಿ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ ಎಂದು ಶಾಸಕ ವರ್ತೂರರು ಹೇಳಿಕೆ ನೀಡಿದ್ದಾರೆ. ಬಿಜೆಪಿಯ ಮೂಲಗಳು ಕೂಡ ಇದನ್ನು ಖಚಿತಪಡಿಸಿವೆ.

ಬಿಜೆಪಿಗೆ ಅಧಿಕಾರ?: ಪಕ್ಷೇತರ ಸದಸ್ಯೆ ಭಾರತಿ ನಾಮಪತ್ರ ಸಲ್ಲಿಸುವುದಿಲ್ಲ. ಬಿಜೆಪಿಯ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರು ಮಾತ್ರವೇ ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಯಾಗಲಿದ್ದಾರೆ ಎನ್ನುತ್ತವೆ ವರ್ತೂರು ಮತ್ತು ಬಿಜೆಪಿ ಮೂಲಗಳು. ಎರಡೂ ಮೂಲಗಳ ಮಾತು ನಿಜವಾದರೆ ಬಿಜೆಪಿಗೆ ‘ಸುಲಭವಾಗಿ, ಸುಲಲಿತವಾಗಿ’ ಜಿ.ಪಂ. ಅಧಿಕಾರ ಒಲಿದು ಬರಲಿದೆ.

ಅವಿರೋಧ ಆಯ್ಕೆ?: ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಭಾರತಿ ಮುಖ್ಯಮಂತ್ರಿಗಳ ಮುಂದೆ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಕಾಮಸಮುದ್ರದ ಸೀಮೌಲ್ ಅವರು ಕೂಡ ಬಿಜೆಪಿ ಹೈಕಮಾಂಡ್ ಮಾತಿಗೆ ಶರಣಾಗಿದ್ದಾರೆ. ಸದ್ಯದ ಸನ್ನಿವೇಶದಲ್ಲಿ ಮಾಲೂರಿನ ಲಕ್ಕೂರು ಕ್ಷೇತ್ರದ ಮಂಜುಳಾ ಅವರೊಬ್ಬರು ಮಾತ್ರ ನಾಮಪತ್ರ ಸಲ್ಲಿಸಲಿದ್ದಾರೆ. ಅವರ ಅವಿರೋಧ ಆಯ್ಕೆ ಖಚಿತ ಎಂಬುದು ವರ್ತೂರು, ಬಿಜೆಪಿ ಮೂಲಗಳ ವಿಶ್ವಾಸದ ನುಡಿ. ಇಷ್ಟಾಗಿ, ಚುನಾವಣೆ ನಡೆಯುವ ಘಳಿಗೆವರೆಗೂ ಎಂಥ ರಾಜಕೀಯ ಬದಲಾವಣೆಗಳು ನಡೆಯುತ್ತವೆ ಎಂಬುದನ್ನು ಆಧರಿಸಿಯೇ ಫಲಿತಾಂಶ ನಿರ್ಧಾರವಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ.ಉಪಾಧ್ಯಕ್ಷ ಸ್ಥಾನ: ಅಧ್ಯಕ್ಷ ಸ್ಥಾನ ದೂರವಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ರಾಜಕಾರಣ ಉಪಾಧ್ಯಕ್ಷ ಸ್ಥಾನದತ್ತ ಪ್ರಬಲ ಕಣ್ಣುನೆಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.