ಸೋಮವಾರ, ಜೂನ್ 14, 2021
22 °C
ಬಿ.ಶಿವಲಿಂಗಯ್ಯಗೆ ಬಿಜೆಪಿ ಟಿಕೆಟ್‌

ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಿ. ಶಿವಲಿಂಗಯ್ಯ ಅವರನ್ನು ಆಯ್ಕೆ ಮಾಡಿರುವುದಕ್ಕೆ ಮಂಗಳವಾರ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಕಾರ್ಯಕರ್ತರ ಗೊಂದಲ, ಕೂಗಾಟ ಹೆಚ್ಚಾದಾಗ ಸಭೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಮೈಸೂರಿನ ‘ಮುಡಾ’ ಮಾಜಿ ಅಧ್ಯಕ್ಷ ನಾಗೇಂದ್ರ ಅರ್ಧದಲ್ಲಿಯೇ ಸಭೆಯಿಂದ ಹೊರ ನಡೆದರು.ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಹೇಳುತ್ತೀರಿ. ಯಾರು ಅಭ್ಯರ್ಥಿ, ಅವರೇ ಬಂದಿಲ್ಲ. ಕಾರ್ಯಕರ್ತರನ್ನು ಕರೆದಿದ್ದೀರಿ. ಆದರೆ, ನಮಗೆ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.ಇದಕ್ಕೂ ಮೊದಲು ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌. ಹೊನ್ನಪ್ಪ, ಜಿಲ್ಲೆಯಿಂದ ನಾಲ್ವರ ಹೆಸರನ್ನು ಅಭ್ಯರ್ಥಿಗಾಗಿ ನೀಡಲಾಗಿತ್ತು. ಆದರೆ, ಶಿವಲಿಂಗಯ್ಯ ಅವರ ಹೆಸರನ್ನು ಘೋಷಿಸಲಾಗಿದೆ. ರಾಜ್ಯದಿಂದ ಯಾರೂ ತಿಳಿಸಿಲ್ಲ. ಅಭ್ಯರ್ಥಿಯನ್ನು ಕೇಳಿದರೆ, ಕೆಲವರು ಒತ್ತಾಯ ಮಾಡಿದ್ದರಿಂದ ನಿಂತಿದ್ದೇನೆ ಎನ್ನುತ್ತಾರೆ ಎಂದರು.ಅನೇಕ ಜನರು ಬಿಜೆಪಿಗೆ ಬಂದು, ಹೋಗಿದ್ದಾರೆ.ಡಿ.ಸಿ. ತಮ್ಮಣ್ಣ, ಮಧು ಮಾದೇಗೌಡ, ಶಿವಕುಮಾರ್‌, ಎಲ್‌ಆರ್‌ ಶಿವರಾಮೇಗೌಡ ಮುಂತಾದವರು. ಇವರದ್ದೂ ಹಾಗೆಯೇ ಆಗಬಾರದು. ಪಕ್ಷ ಕಟ್ಟಲು ಅವರು ಶ್ರಮಿಸಬೇಕು. ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು ಅಭ್ಯರ್ಥಿ ಪರವಾಗಿ ಕೆಲಸ ಮಾಡೋಣ ಎಂದರು.ಮುಖಂಡ ಕಾಳೇನಹಳ್ಳಿ ನಾಗನಗೌಡ ಮಾತನಾಡಿ, ಪಕ್ಷಕ್ಕೆ ಬಂದು ಸೀಟು ಪಡೆದುವರು ನಮ್ಮೊಂದಿಗೆ ಇರಬೇಕು. ಸುಖಕ್ಕೆ ಬಂದವರು, ಕಷ್ಟದಲ್ಲಿಯೂ ಇರಬೇಕು. ಓಡಿ ಹೋಗುವವರು ಅಯೋಗ್ಯರು. ಅನೇಕರು ಓಡಿ ಹೋಗಿದ್ದಾರೆ. ನೋವಿದ್ದರೂ, ಮೋದಿಯರವನ್ನು ಪ್ರಧಾನಿಯಾಗಿಸಲು ಮರೆತು, ಪಕ್ಷಕ್ಕಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.ಮೈಸೂರಿನ ಮುಡಾ ಮಾಜಿ ಅಧ್ಯಕ್ಷ ನಾಗೇಂದ್ರ ಮಾತನಾಡಿ, ಸಣ್ಣ–ಪುಟ್ಟ ಗೊಂದಲಗಳನ್ನು ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಬೇಕು. ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.ಅಪ್ಪಾಜಿಗೌಡ, ಸುಜಾತಾ ಸಿದ್ದಯ್ಯ, ಸುರೇಶ್‌ಬಾಬು, ಉಮಾಶಂಕರ್‌, ಅನುರಾಧ ರಘು, ಶ್ರೀಧರ್‌, ವಸಂತ ಮತ್ತಿತರರು ಪಾಲ್ಗೊಂಡಿದ್ದರು.‘ಭಗವದ್ಗೀತೆ ಮುಟ್ಟಿ ಪ್ರಮಾಣ ಮಾಡಿ’

ಮಂಡ್ಯ:
ಬಿಜೆಪಿ ಅಭ್ಯರ್ಥಿ ಶಿವಲಿಂಗಯ್ಯ ಅವರು ಚುನಾವಣೆಯ ನಂತರವೂ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಭಗವದ್ಗೀತೆ ಮುಟ್ಟಿ ಪ್ರಮಾಣ ಮಾಡಬೇಕು  ಎಂದು ಕೆಲವರು ಮಂಗಳವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಗ್ರಹಿಸಿದರು.

ಮುಖಂಡ ಜಿ.ಎಂ. ರವೀಂದ್ರ ಮಾತನಾಡಿ, ಈಗಿನ ಅಭ್ಯರ್ಥಿ ಚುನಾವಣೆ ನಂತರವೂ ಪಕ್ಷದಲ್ಲಿಯೇ ಇದ್ದು, ಪಕ್ಷವನ್ನು ಕಟ್ಟುತ್ತೇನೆ. ಭಗವದ್ಗೀತೆ ಮುಟ್ಟಿ ಪ್ರಮಾಣ ವಚನ ಮಾಡ ಬೇಕು. ಈ ಕುರಿತು ಶಾಸಕ ಆರ್‌್. ಅಶೋಕ್‌ ಅವರಿಗೆ ಹೇಳಿದ್ದೇವೆ. ಗುರುವಾರ ಪಕ್ಷ ಕಚೇರಿ ಉದ್ಘಾಟನೆಗೆ ಬರಲಿದ್ದು, ಆಗ ಪ್ರಮಾಣ ಮಾಡಿಸಲಿದ್ದಾರೆ. ಆ ನಂತರವೇ ಕೆಲಸ ಮಾಡುತ್ತೇವೆ ಎಂದರು.ಈ ಹಿಂದೆ ವಿವಿಧ ಚುನಾವಣೆಗಳಲ್ಲಿ ಅಭ್ಯರ್ಥಿಗಳಾಗಿ ಬಂದವರು, ಚುನಾವಣೆಯ ನಂತರ ಪಕ್ಷ ಬಿಟ್ಟು ಹೋಗಿದ್ದಾರೆ. ಇದರಲ್ಲಿ ಅಧಿಕಾರ ಅನುಭವಿಸಿದವರೂ ಇದ್ದಾರೆ. ಮುಂದೆ ಹೀಗಾಗುವುದಿಲ್ಲ ಎಂದು ಏನು ಗ್ಯಾರಂಟಿ. ಆದ್ದರಿಂದ ಪ್ರಮಾಣ ಮಾಡಲಿ ಎಂದು ಬಹಳಷ್ಟು ಕಾರ್ಯಕರ್ತರು ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.