ಬಿಜೆಪಿ ಪಾಲಿಗೆ ಮೋದಿ ಬಿಸಿತುಪ್ಪ: ಪೂಜಾರಿ
ಮಂಗಳೂರು: `ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಗಳು ಬಿಜೆಪಿ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿವೆ' ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಲೇವಡಿ ಮಾಡಿದ್ದಾರೆ.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ಮುಸ್ಲಿಮರನ್ನು ಚಕ್ರದ ಅಡಿಗೆ ಬಿದ್ದು ಸಾಯುವ ನಾಯಿಮರಿಗೆ ಹೋಲಿಸಿದ ಬಗ್ಗೆ ಕಿಡಿಕಾರಿದರು.
'ಹೆತ್ತತಾಯಿಯೇ ಕಾರಿನ ಚಕ್ರದಡಿ ಸಿಲುಕಿದಾಗ ಆಗುವಷ್ಟು ನೋವಾಗುತ್ತದೆ ಎನ್ನುತ್ತಿದ್ದರೆ ಅವರನ್ನು ಒಪ್ಪಿಕೊಳ್ಳಬಹುದಿತ್ತು. ಸಿಖ್ ಹತ್ಯಾಕಾಂಡ ನಡೆದಾಗ ದೇಶದ ಜನತೆಯಲ್ಲಿ ಕಾಂಗ್ರೆಸ್ ಕ್ಷಮೆ ಯಾಚಿಸಿತ್ತು. ಅಂತೆಯೇ ಗುಜರಾತ್ ಹತ್ಯಾಕಾಂಡದ ಬಗ್ಗೆ ಮೋದಿ ಪಶ್ಚಾತ್ತಾಪ ಪಟ್ಟು, ಕ್ಷಮೆ ಯಾಚಿಸಿದ್ದರೆ ಅವರೊಬ್ಬ ಉತ್ತಮ ಆಡಳಿತಗಾರ ಎನಿಸಿಕೊಳ್ಳುತ್ತಿದ್ದರು.' ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.