ಭಾನುವಾರ, ಏಪ್ರಿಲ್ 18, 2021
23 °C

ಬಿಜೆಪಿ ಬಣ ಅಭಿಪ್ರಾಯ ಆಲಿಕೆ, ರಾಷ್ಟ್ರಪತಿ ಚುನಾವಣೆ ಬಳಿಕ ಪಟ್ಟಕ್ಕೆ ಶೆಟ್ಟರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಷ್ಟ್ರಪತಿ ಚುನಾವಣೆಯ ಬಳಿಕ ಮುಖ್ಯಮಂತ್ರಿ ಸದಾನಂದಗೌಡ ಅವರ ಸ್ಥಾನಕ್ಕೆ ಲಿಂಗಾಯತ ನಾಯಕ ಜಗದೀಶ ಶೆಟ್ಟರ ಅವರನ್ನು ತರಬಹುದು ಎಂಬ ಸೂಚನೆಗಳ ಮಧ್ಯೆ ಬಿಜೆಪಿ ವರಿಷ್ಠ ಮಂಡಳಿಯು ಮಂಗಳವಾರ ಕರ್ನಾಟಕದ ಘರ್ಷಣೆ ನಿರತ ಉಭಯ ಬಣಗಳ ಅಭಿಪ್ರಾಯಗಳನ್ನು ಆಲಿಸಿತು.ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಕರ್ನಾಟಕದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಧಾನ್ ಅವರು ಸದಾನಂದ ಗೌಡ, ಜಗದೀಶ ಶೆಟ್ಟರ ಮತ್ತು ರಾಜ್ಯ ಘಟಕ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರ ಜೊತೆಗೆ ಇಲ್ಲಿ ಈದಿನ ಮಾತುಕತೆ ನಡೆಸಿದರು.ಸಭೆಯ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಪ್ರಧಾನ್ ಕರ್ನಾಟಕ ಎಲ್ಲ ಪ್ರಮುಖ ನಾಯಕರು ತಮ್ಮ ನಿಲುವನ್ನು ವರಿಷ್ಠರಿಗೆ ತಿಳಿಸಿದ್ದಾರೆ ಎಂದು ಹೇಳಿದರು.~ನಾವು ಪರಿಹಾರದತ್ತ ಸಾಗುತ್ತಿದ್ದೇವೆ. ಏನನ್ನೇ ನಿರ್ಧರಿಸಿದರೂ ಅದನ್ನು ಪಕ್ಷದ ಚೌಕಟ್ಟಿನಲ್ಲೇ ನಿರ್ಧರಿಸಲಾಗುತ್ತದೆ~ ಎಂದು ಅವರು ನುಡಿದರು. ಈಶ್ವರಪ್ಪ ಮತ್ತು ಶೆಟ್ಟರ ಅವರ ಜೊತೆಗಿದ್ದರು.ಬಂಡುಕೋರ ಬಣದ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಬಿಂಬಿಸುತ್ತಿರುವ ಶೆಟ್ಟರ ಅವರಿಗೆ ವಿಧಾನಸಭೆಯ 120 ಸದಸ್ಯರ ಪೈಕಿ ಸುಮಾರು 70  ಸದಸ್ಯರ ಬೆಂಬಲವಿದೆ ಎಂಬುದಾಗಿ ಪ್ರತಿಪಾದಿಸಲಾಗುತ್ತಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.