ಗುರುವಾರ , ಜೂನ್ 24, 2021
27 °C

ಬಿಡಿಎಫ್‌ಎ ಇದಕ್ಕೆ ಹೊಣೆ: ಖಲೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಇದಕ್ಕೆಲ್ಲಾ ಮುಖ್ಯ ಹೊಣೆ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ). ಅವರ ನಿರ್ಲಕ್ಷ್ಯದಿಂದ ಪ್ರತಿಭಾವಂತ ಆಟಗಾರನ ಜೀವಪಕ್ಷಿ ಹಾರಿ ಹೋಗಿದೆ~ ಎಂದು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಅಧ್ಯಕ್ಷ ಖಲೀಲ್ ಆರೋಪಿಸಿದ್ದಾರೆ.`ಆ್ಯಂಬುಲೆನ್ಸ್ ಇಲ್ಲದೇ ಪಂದ್ಯ ನಡೆಸಿದ್ದು ಮೊದಲ ತಪ್ಪು. ಈ ಸಂದರ್ಭದಲ್ಲಿ ಸರಿಯಾದ ಸ್ಟ್ರೇಚರ್ ಕೂಡ ಇರಲಿಲ್ಲ. ಇದಕ್ಕೆ ಬಿಡಿಎಫ್‌ಎ ನೇರ ಹೊಣೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ~ ಎಂದು ಖಲೀಲ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ`ಕೆಎಸ್‌ಎಫ್‌ಎ ಆ್ಯಂಬುಲೆನ್ಸ್ ಖರೀದಿಸಲಿದೆ. ಆದರೆ ಎರಡು ದಿನಗಳ ಬಳಿಕ ಟೂರ್ನಿಯನ್ನು ಮುಂದುವರಿಸುತ್ತೇವೆ~ ಎಂದು ಅವರು ನುಡಿದರು.`ಫುಟ್‌ಬಾಲ್‌ನಲ್ಲಿ ಹೃದಯಾಘಾತ ಸಾಮಾನ್ಯ ವಿಷಯ. ಆದರೆ ಮುನ್ನೆಚ್ಚರಿಕೆ ಕ್ರಮ ಅಗತ್ಯ. ಮೃತ ವೆಂಕಟೇಶ್ ಕುಟುಂಬಕ್ಕೆ ನಾವು ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಿದ್ದೇವೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.