ಕಮಲಾಪುರದಿಂದ ಹಂಪಿಗೆ ಹೋಗುವ ದಾರಿಯಲ್ಲಿ ಎರಡು ದೊಡ್ಡ ಬಂಡೆಗಳು ಒಂದಕ್ಕೊಂದು ಆತುಕೊಂಡು ನಿಂತಿವೆ. ಅವನ್ನು ‘ಅಕ್ಕತಂಗೇರ ಗುಂಡುಗಳು’ ಎಂದು ಕರೆಯುತ್ತಾರೆ. ಅಕ್ಕತಂಗೇರ ಬಂಡೆಗಳ ಹಿನ್ನೆಲೆಯಲ್ಲಿ ಜಾನಪದ ಕಥೆಯೊಂದು ಪ್ರಚಾರದಲ್ಲಿದೆ. ಈ ಕಥೆ ಹಲವು ರೂಪಾಂತರಗಳನ್ನು ಪಡೆದುಕೊಂಡಿದೆ.

ಅಕ್ಕತಂಗೇರ ಬಂಡೆಗಳ ಪೈಕಿ ಒಂದು ಬಂಡೆಯಲ್ಲಿ ಸೀಳು ಕಾಣಿಸಿಕೊಂಡಿತ್ತು. ಇದೇ ತಿಂಗಳ 9ರಂದು ಮಧ್ಯಾಹ್ನ ಆ ಸೀಳು ಕಳಚಿ ಬಿತ್ತು! ಆಗ ಭಾರೀ ಸಪ್ಪಳವಾಯಿತು. ಅಲ್ಲಿಯೇ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಅದನ್ನು ಮೊದಲು ನೋಡಿದಳು. ಈ ಸುದ್ದಿ ಸುತ್ತಲಿನ ಹತ್ತಾರು ಊರುಗಳಿಗೆ ಹಬ್ಬಿತು. ನೂರಾರು ಜನರು ‘ಅಕ್ಕತಂಗೇರ ಬಂಡೆ ಬಿತ್ತಂತೆ’ ಎಂದು ಹೇಳಿಕೊಂಡು ಆತಂಕ ಪಟ್ಟರು. ಅನೇಕ ಜನರು ತಂಡೋಪತಂಡಗಳಲ್ಲಿ ಬಂದು ಬಿದ್ದ ಬಂಡೆ ನೋಡಿಕೊಂಡು ಹೋಗಿದ್ದಾರೆ.

ಅಕ್ಕ ತಂಗೇರ ಬಂಡೆ ಒಡೆದು ಹೋದುದಕ್ಕೆ ನೊಂದುಕೊಂಡವರಲ್ಲಿ ಮಹಿಳೆಯರೇ ಹೆಚ್ಚಾಗಿದ್ದಾರೆ. ಸೀಳಿದ್ದ ಬಂಡೆ ಒಡೆದಿದ್ದರಿಂದ ಏನೋ ಅನಾಹುತ ಕಾದಿದೆ ಎಂಬ ಆತಂಕ ಜನರಲ್ಲಿದೆ. ಅಕ್ಕ ತಂಗೇರ ಬಂಡೆಗಳ ಬಗ್ಗೆ ಹಲವು ಕಥೆಗಳಿವೆ. ಅವುಗಳಲ್ಲಿ ಒಂದು ಹೀಗಿದೆ. ಉಜ್ಜನಿಯ ರಾಜನ ಇಬ್ಬರು ಹೆಣ್ಣು ಮಕ್ಕಳು ( ಅಕ್ಕ ತಂಗಿ) ಬೇಟೆಯಾಡುತ್ತಾ ಹಂಪಿಗೆ ಬಂದರಂತೆ. ಅವರು ಹಂಪಿ ಬಗ್ಗೆ ತಮಾಷೆ ಮಾಡಿ ನಕ್ಕರಂತೆ. ಅವರ ಅಹಂಕಾರದ ವರ್ತನೆಗೆ ಕೋಪಗೊಂಡ ವಿರೂಪಾಕ್ಷ ಸ್ವಾಮಿ ಅವರನ್ನು ಕಲ್ಲುಗಳಾಗುವಂತೆ ಶಾಪ ಕೊಟ್ಟ ಎನ್ನಲಾಗಿದೆ.

ಇನ್ನೊಂದು ಕಥೆ ಪ್ರಕಾರ ಹಂಪಿ ನೋಡಲು ಬಂದಿದ್ದ ಅಕ್ಕತಂಗಿಯರ ಮೇಲೆ ಕಾಮಾಂಧನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ. ಅವನಿಂದ ಪಾರಾಗಲು ಅವರು ಕಲ್ಲಾದರಂತೆ. ಈ ಕಥೆ ಹಲವು ರೂಪ ಪಡೆದುಕೊಂಡಿದೆ. ಅಕ್ಕ ತಂಗಿಯರು ಪರಸ್ಪರ ಸಾಂತ್ವನ ಹೇಳುವ ರೂಪದಲ್ಲಿ ಈ ಬಂಡೆಗಳಾಗಿದ್ದಾರೆ ಎನ್ನಲಾಗಿದೆ. ಅಕ್ಕ ತಂಗೇರ ಬಂಡೆ ಒಡೆದದ್ದು ಸಂಭವನೀಯ ಅನಾಹುತದ ಸಂಕೇತ. ಈಗ ಒಡೆದಿರುವುದು ತಂಗಿಯ ಕಲ್ಲು.
ಅಕ್ಕನ ಕಲ್ಲು ಹಾಗೇ ಇದೆ. ಹಂಪಿ ಸುತ್ತ ಮುತ್ತ ಆರು ಕಿಮೀ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಅದರ ಪರಿಣಾಮ ಇದು ಎಂಬ ಮಾತು ಕೇಳಿ ಬಂದಿದೆ. ಹಂಪಿಗೆ ಸ್ವಲ್ಪ ದೂರದ ಗುಡ್ಡಗಳಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯಲ್ಲಿ ಸ್ಫೋಟಕಗಳನ್ನು ಬಳಸುತ್ತಿದ್ದಾರೆ. ನಿರಂತರ ಸ್ಫೋಟದ ಪರಿಣಾಮದಿಂದ ಹಂಪಿ ಸ್ಮಾರಕಗಳಿಗೆ ಅಪಾಯವಿದೆ ಎಂಬ ಅನೇಕರ ಆತಂಕ ನಿಜವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.