ಪ್ರಜಾವಾಣಿ ವಾರ್ತೆ:
ಬೆಂಗಳೂರು: ವೀರಪ್ಪನ್ ಕಾರ್ಯಾಚರಣೆ ವೇಳೆಯಲ್ಲಿ ಎಸ್.ಟಿ.ಎಫ್ ಮುಖ್ಯಸ್ಥರಾಗಿದ್ದ ಶಂಕರ್ ಬಿದರಿ ಮತ್ತು ಅವರ ತಂಡದ ಸದಸ್ಯರು ಸ್ಥಳೀಯ ಮಹಿಳೆಯರ ಮೇಲೆ ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆಯನ್ನು ನೀಡಿದ್ದರು~ ಎಂದು ಮೃತ ವೀರಪ್ಪನ್ ಪತ್ನಿ ಮುತ್ತು ಲಕ್ಷ್ಮಿ ಆರೋಪಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಶಂಕರ ಬಿದರಿ ವೀರಪ್ಪನ್ ಕಾರ್ಯಾಚರಣೆ ಸಂದರ್ಭದಲ್ಲಿ ಅನೇಕ ಮಹಿಳೆಯರಿಗೆ ಮಾನಸಿಕ ಹಿಂಸೆ ನೀಡುವುದರೊಂದಿಗೆ ಅವರಿಗೆ ವಿದ್ಯುತ್ ಶಾಕ್ ನೀಡಿದ್ದರು. ಇದಲ್ಲದೆ ಆತನು ನನ್ನ ಬಳಿ ಬಂದು ನನ್ನ ಮಾಂಗಲ್ಯವನ್ನು ಕಿತ್ತು ಹಾಕುವಂತೆ ಬೆದರಿಸಿ, ನನ್ನ ಮಾಂಗಲ್ಯಕ್ಕೆ ಕೈ ಹಾಕಿದನು~.
ಹಿರಿಯ ಪೊಲೀಸ್ ಅಧಿಕಾರಿಗಳಾದ ಮುಸಲೆ, ಟೈಗರ್ ಅಶೋಕ್ಕುಮಾರ್, ಬಾವ, ಕುಮಾರದಾಸ್ ಮುಂತಾದವರು ಕಾರ್ಯಚರಣೆ ವೇಳೆ ಚಿತ್ರಹಿಂಸೆ ನೀಡಿದ್ದರು. ಈ ಬಗ್ಗೆ ಕೋರ್ಟ್ನಲ್ಲಿ ಹೇಳಿಕೆ ನೀಡಿದರೆ ಮತ್ತೆ ಚಿತ್ರ ಹಿಂಸೆ ನೀಡುವುದಾಗಿ ಬೆದರಿಕೆ ಹಾಕಿದರು ಆದ್ದರಿಂದ ನಾನು ಇಲ್ಲಿಯ ವರೆಗೆ ಆ ವಿಷಯನ್ನು ಹೇಳಲಿಲ್ಲ~ ಎಂದು ಅವರು ಇಲ್ಲಿ ಆರೋಪಿಸಿದರು.
`ನನ್ನ ಪತಿ ವೀರಪ್ಪನ್ ಕೆಟ್ಟವನಲ್ಲ. ಈ ಬಗ್ಗೆ ಮಲೆಮಾದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲಿನ ಜನರನ್ನು ಕೇಳಿದರೆ ಗೊತ್ತಾಗುತ್ತದೆ. ವೀರಪ್ಪನ ಕೊಲೆಗಳನ್ನು ಮಾಡಿದ್ದಾನೆ ನಿಜ, ಆದರೆ, ಅದನ್ನು ಮಾಡಲು ರಾಜಕಾರಣಿಗಳು, ಪೊಲೀಸ್ ಮತ್ತು ಅಲ್ಲಿನ ಅರಣ್ಯ ಅಧಿಕಾರಿಗಳು ಕಾರಣರಾಗಿದ್ದಾರೆ.
ಪತಿ ವೀರಪ್ಪನ್ ಕುರಿತು 650 ಪುಟಗಳನ್ನು ಒಳಗೊಂಡಿರುವ ಕನ್ನಡ, ತಮಿಳು ಸೇರಿದಂತೆ ಇತರೆ ಭಾಷೆಗಳಲ್ಲಿರುವ ಪುಸ್ತಕವನ್ನು ಅತೀ ಶೀಘ್ರದಲ್ಲೇ ತರುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.