ಬುಧವಾರ, ಜನವರಿ 29, 2020
28 °C

ಬಿದಾಯಿ ಯೋಜನೆ ವಿಸ್ತರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ‘ಬಿದಾಯಿ ಯೋಜನೆ ಯನ್ನು ಇಲ್ಲಾ ಸಮುದಾಯವರಿಗೂ ಅನ್ವಯಿಸದಿದ್ದರೆ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಜಿಲ್ಲಾ ಕೆ.ಜೆ.ಪಿ ಅಧ್ಯಕ್ಷ ಜೊ.ನಾ.ಮಲ್ಲಿಕಾರ್ಜುನ ತಿಳಿಸಿದರು.ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆ.ಜೆ.ಪಿ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.‘ಮಾಜಿ ಮುಖ್ಯಮಂತ್ರಿ ಯಡಿ ಯೂರಪ್ಪ ಅವರು ಅಧಿಕಾರದಲ್ಲಿ ದ್ದಾಗ ಯಾವುದೇ ಯೋಜನೆಗೂ ತಾರ ತಮ್ಮಯ ಮಾಡುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ದ ಚುಕ್ಕಾಣಿ ಹಿಡಿದ ನಂತರ ಎಪಿಎಲ್ ಪಡಿತರಿಗೆ ಧಾನ್ಯ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಸತತವಾಗಿ ಧರಣಿ ನಡೆಸಿದರೂ ಸರ್ಕಾರ ಸ್ಪಂದಿಸು ತ್ತಿಲ್ಲ. ಕಬ್ಬು ಬೆಳೆಗಾರ ಅರೆಬಾವಿ ಆತ್ಮಹತ್ಯೆಗೆ ಸರ್ಕಾರವೇ ಹೊಣೆ. ಡಿ. ಒಂಭತ್ತಕ್ಕೆ ಕೆಜೆಪಿ ಪಕ್ಷ ಸ್ಥಾಪನೆಗೊಂಡು ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಯಡಿಯೂರಪ್ಪ ದಾವಣಗೆರೆಯಿಂದ ರಾಜ್ಯದಾದ್ಯಂತ ಜಿಲ್ಲಾ ಪ್ರವಾಸ ಕೈಗೊಂಡು ಪಕ್ಷ ಬಲಪಡಿಸಲು ಕಾರ್ಯಕ್ರಮ ರೂಪಿಸಿದೆ. ಲೋಕಸಭಾ ಚುನಾವಣೆ ವೇಳೆಗೆ ಬೂತ್ ಮಟ್ಟ ದಿಂದ ಕಾರ್ಯಕರ್ತ ರನ್ನು ಸಂಘಟಿ ಸುವ ಪ್ರಯತ್ನ ಜಿಲ್ಲೆಯಾದ್ಯಂತ ಮಾಡಲಾಗುತ್ತಿದೆ’ ಎಂದರು.ಕೆ.ಜೆ.ಪಿ ಪರಿಶಿಷ್ಟ ಘಟಕದ ಜಿಲ್ಲಾಧ್ಯಕ್ಷ ಎಂ.ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್, ಜಿಲ್ಲಾ ಉಪಾಧ್ಯಕ್ಷ ನಟರಾಜ್, ರೈತ ಮೋರ್ಚ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಶ್ ಇದ್ದರು.

ಪ್ರತಿಕ್ರಿಯಿಸಿ (+)