ಬಿದಿರಿನ ನಲುದಾಣ

ನದಿಯ ಜುಳುಜುಳು ನಾದ, ಹಸಿರ ತೋರಣ, ಮನಸ್ಸಿಗೆ ಆಹ್ಲಾದ ನೀಡುವ ತಂಪು ಗಾಳಿ, ವಿರಮಿಸಲು ಬಿದಿರಿನ ಪ್ಲೇಹೌಸ್ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ. ಅಂಥ ಒಂದು ಪ್ಲೇಹೌಸ್ ಅನ್ನು ಮಲೇಷ್ಯಾದಲ್ಲಿ ನಿರ್ಮಿಸಲಾಗಿದೆ.
ಸಾರ್ವಜನಿಕರ ತಂಗುದಾಣವಾಗಿರುವ ಈ ಸ್ಥಳ ರಾಜಧಾನಿ ಕೌಲಾಲಂಪುರದಲ್ಲಿರುವ ‘ಪರ್ದಾನಾ ಬೊಟಾನಿಕಲ್ ಗಾರ್ಡನ್’ ಆವರಣದಲ್ಲಿದೆ. ದ್ವೀಪದಲ್ಲಿರುವ ಇದು ಸ್ಥಳೀಯರು ಹಾಗೂ ಪ್ರವಾಸಿಗರ ಜನಪ್ರಿಯ ತಾಣ.
ಕೆರೆಯೊಂದರ ಅಂಚಿನಲ್ಲಿ ಈ ಪ್ಲೇಹೌಸ್ ನಿರ್ಮಾಣ ಮಾಡಿರುವುದರಿಂದ ಇನ್ನಷ್ಟು ನೈಸರ್ಗಿಕ ಸೊಬಗು ಇದಕ್ಕೆ ದಕ್ಕಿದೆ. ಪ್ಲೇಹೌಸ್ನ ಪ್ರತಿ ವಿನ್ಯಾಸವನ್ನೂ ನಾಜೂಕಿನಿಂದ ಮಾಡಲಾಗಿದ್ದು, ಮಲೇಷ್ಯಾ ಸಾಂಪ್ರದಾಯಿಕ ವಿನ್ಯಾಸವಾದ ‘ವಕಫ್’ನಿಂದ ಸ್ಫೂರ್ತಿ ಪಡೆಯಲಾಗಿದೆ. ಮಲೇಷ್ಯಾದ ಕ್ಯಾಪಂಗ್ಸ್ ಗ್ರಾಮದಲ್ಲಿ ಈ ಕಲೆ ಹುಟ್ಟಿಕೊಂಡಿದ್ದು ಎಂದು ಹೇಳಲಾಗುತ್ತದೆ.
ವಿಶಾಲವಾಗಿ ನಿರ್ಮಿಸಲಾದ ಈ ಪ್ಲೇಹೌಸ್ ವಿರಮಿಸುವ ತಾಣವಾಗಿ, ಮಕ್ಕಳ ಆಟದ ಮೈದಾನವಾಗಿ, ವಿವಿಧ ಬಗೆಯ ಕಾರ್ಯಕ್ರಮ, ವಸ್ತು ಪ್ರದರ್ಶನಗಳು, ಸಂಗೀತ ಕಾರ್ಯಕ್ರಮಗಳಿಗೆ ವೇದಿಕೆಯಾಗಿ ಸಂದಿದೆ.
ಈ ಬಿದಿರಿನ ಪ್ಲೇಹೌಸ್ ವಿಶೇಷ ಎನಿಸುವುದಕ್ಕೂ ಒಂದು ಕಾರಣವಿದೆ. ಸಮಕಾಲೀನ ಕಟ್ಟಡಗಳ ನಿರ್ಮಾಣದಲ್ಲಿ ಬಿದಿರಿನ ಬಳಕೆ ಮಲೇಷ್ಯಾದಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಈ ಹಿನ್ನೆಲೆಯಲ್ಲಿ ಪ್ಲೇಹೌಸ್ನ ನಿರ್ಮಾಣಕ್ಕೆ ಬಳಸಲಾದ ಬಿದಿರು ಪರಿಸರಸ್ನೇಹಿ ಕಟ್ಟಡ ನಿರ್ಮಾಣಕ್ಕೆ ಉತ್ತಮ ಉದಾಹರಣೆ ಎಂದು ತೋರಿಸಿಕೊಟ್ಟಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.